ನಿಖರ ಸಮಯದಲ್ಲಿ ಯೋಜನೆಗಳ ಪ್ರಗತಿಯನ್ನು ತಿಳಿಯಲು ಡಿಜಿಟಲ್ ಡ್ಯಾಶ್ ಬೋರ್ಡ್: ಸಿಎಂ ಉದ್ಘಾಟನೆ

ಡಿಜಿಟಲ್ ಸಿಎಂ ಡ್ಯಾಶ್ ಬೋರ್ಡ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವ್ಯವಸ್ಥೆಗಳ ಮಾದರಿಯಲ್ಲಿ ಸಿಎಂ ಡ್ಯಾಶ್ ಬೋರ್ಡ್ ನ್ನು ರಚಿಸಲಾಗಿದೆ. 
ಪ್ರಧಾನಿ ಕಚೇರಿ ಮಾದರಿಯಲ್ಲಿ ಮುಖ್ಯಮಂತ್ರಿಗಳಿಗೆ ಡಿಜಿಟಲ್ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ನೀಡುವ ಸಿಎಂ ಡ್ಯಾಷ್ ಬೋರ್ಡ್ ಗೆ ಮುಖ್ಯಮಂತ್ರಿ  ಇಂದು ಚಾಲನೆ ನೀಡಿದರು.
ಪ್ರಧಾನಿ ಕಚೇರಿ ಮಾದರಿಯಲ್ಲಿ ಮುಖ್ಯಮಂತ್ರಿಗಳಿಗೆ ಡಿಜಿಟಲ್ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ನೀಡುವ ಸಿಎಂ ಡ್ಯಾಷ್ ಬೋರ್ಡ್ ಗೆ ಮುಖ್ಯಮಂತ್ರಿ ಇಂದು ಚಾಲನೆ ನೀಡಿದರು.

ಬೆಂಗಳೂರು: ಡಿಜಿಟಲ್ ಸಿಎಂ ಡ್ಯಾಶ್ ಬೋರ್ಡ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವ್ಯವಸ್ಥೆಗಳ ಮಾದರಿಯಲ್ಲಿ ಸಿಎಂ ಡ್ಯಾಶ್ ಬೋರ್ಡ್ ನ್ನು ರಚಿಸಲಾಗಿದೆ. 

ಕಾಲಕಾಲಕ್ಕೆ ಸರ್ಕಾರದ ಯೋಜನೆಗಳನ್ನು ಪರಾಮರ್ಶಿಸಲು ಮುಖ್ಯಮಂತ್ರಿಗಳಿಗೆ ಈ ಡ್ಯಾಶ್ ಬೋರ್ಡ್ ನಿಂದ ಸಹಾಯವಾಗಲಿದೆ. ಗುಜರಾತ್, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ಈ ವ್ಯವಸ್ಥೆಯಿದೆ. ಡ್ಯಾಶ್ ಬೋರ್ಡ್ ನ್ನು ಉದ್ಘಾಟಿಸಿದ ನಂತರ ನಿನ್ನೆ ಮುಖ್ಯಮಂತ್ರಿಗಳು ಕಂದಾಯ, ಬಿಬಿಎಂಪಿ, ಇಂಧನ, ಶಿಕ್ಷಣ, ವಸತಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಪರಿಶೀಲನಾ ಸಭೆ ನಡೆಸಿದರು.

ಸರ್ಕಾರದ ಕೆಲಸಗಳ ಪ್ರತಿಫಲ ಈ ಡ್ಯಾಶ್ ಬೋರ್ಡ್: ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ನಿಖರವಾದ ಅಂಕಿಅಂಶಗಳನ್ನು ದಾಖಲು ಮಾಡಿ ಮತ್ತು ಅದನ್ನು ನೈಜ ಸಮಯದಲ್ಲಿ ಡ್ಯಾಶ್‌ಬೋರ್ಡ್‌ಗೆ ಅಪ್‌ಲೋಡ್ ಮಾಡಲು ನಿರ್ದೇಶಿಸಿದ್ದಾರೆ. ಅಂಕಿಅಂಶಗಳು ಸ್ಪಷ್ಟವಾಗಿದ್ದು, ಯಾವುದೇ ಗೊಂದಲಕ್ಕೆ ಕಾರಣವಾಗಬಾರದು. ನೋಡಲ್ ಅಧಿಕಾರಿಗಳು ಮತ್ತು ಇಲಾಖೆಗಳ ಮುಖ್ಯಸ್ಥರು ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಯಶಸ್ವಿಗೊಳಿಸಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಅವರು ಹೇಳಿದರು.

ಇದು ಇಲಾಖೆಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ, ಇದು ಬಜೆಟ್ನಲ್ಲಿ ಘೋಷಿಸಿದ ಗುರಿಗಳನ್ನು ತಲುಪಬೇಕು. ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ಅವುಗಳ ಪ್ರಯೋಜನಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com