ಬೆಂಗಳೂರು: 93 ವರ್ಷದ ರೋಗಿಗೆ ಯಶಸ್ವಿ ಮೆದುಳು ಗಡ್ಡೆ ಶಸ್ತ್ರಚಿಕಿತ್ಸೆ
ಮೆದುಳು ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ಇಳಿವಯಸ್ಸಿನ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯುವಲ್ಲಿ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
Published: 07th October 2021 07:07 PM | Last Updated: 07th October 2021 07:07 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮೆದುಳು ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ಇಳಿವಯಸ್ಸಿನ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯುವಲ್ಲಿ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಫೊರ್ಟಿಸ್ ಆಸ್ಪತ್ರೆ ಹೆಚ್ಚುವರಿ ನಿರ್ದೇಶಕ ಡಾ.ಸತೀಶ್ ಸತ್ಯನಾರಾಯಣ ಅವರ ತಂಡ ಈ ಯಶಸ್ವಿ ಶಸ್ತ ಚಿಕಿತ್ಸೆ ನಡೆಸಿದೆ.
ಇದನ್ನು ಓದಿ: ದೇಶದ ಮೊದಲ ಯಶಸ್ವಿ 'ಕೃತಕ ಹೃದಯ ಉಪಕರಣ' ತೆರವು ಶಸ್ತ್ರಚಿಕಿತ್ಸೆ ನಡೆಸಿದ ಪೋರ್ಟಿಸ್ ವೈದ್ಯರು
ಈ ಕುರಿತು ಮಾತಾಡಿದ ಡಾ.ಸತೀಶ್ ಸತ್ಯನಾರಾಯಣ ಅವರು, 93 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಬಳಲುತ್ತಿದ್ದರು. ನ್ಯುಮೋನಿಯಾ ಸೇರಿದಂತೆ ಇತರೆ ಕೋಮಾರ್ಬಿಡಿಟಿ ಸಮಸ್ಯೆಗೆ ತುತ್ತಾಗಿದ್ದರು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಇದ್ದರೂ ಮೆದುಳಿನಲ್ಲಿ ಗಡ್ಡೆ ಇರುವುದು ತಪಾಸಣೆ ಮೂಲಕ ತಿಳಿದು ಬಂದಿತ್ತು ಎಂದರು.
70 ವರ್ಷ ಮೇಲ್ಪಟ್ಟವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಂತ ಕಷ್ಟಕರ. ಅದರಲ್ಲೂ ಮೆದುಳಿನ ಚಿಕಿತ್ಸೆ ನಮಗೆ ಸವಾಲಾಗಿಯೇ ಪರಿಣಮಿಸಿತ್ತು. ಗಡ್ಡೆಯು ಮೆದುಳಿನ ಎಲೊಕ್ವೆಂಟ್ ಮೋಟಾರ್ ಕಾರ್ಟೆಕ್ಸ್ ಒಳಗೆ ಬೆಳೆದಿರುವುದು ತಿಳಿಯಿತು ಎಂದು ಹೇಳಿದರು.