ಆನ್‌ಲೈನ್ ಬೆಟ್ಟಿಂಗ್, ಗೇಮ್ ನಿಷೇಧ: ನ್ಯಾಯಾಲಯ ಮೊರೆ ಹೋಗಲು ಉದ್ಯಮ ಚಿಂತನೆ

ಕರ್ನಾಟಕದಲ್ಲಿ ಆನ್‌ಲೈನ್ ಗೇಮ್, ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ನಿಷೇಧಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್(ತಿದ್ದುಪಡಿ) ಕಾಯ್ದೆ, 2021ಕ್ಕೆ ಅಕ್ಟೋಬರ್ 5 ರಂದು ಅಧಿಸೂಚನೆ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಆನ್‌ಲೈನ್ ಗೇಮ್, ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ನಿಷೇಧಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್(ತಿದ್ದುಪಡಿ) ಕಾಯ್ದೆ, 2021ಕ್ಕೆ ಅಕ್ಟೋಬರ್ 5 ರಂದು ಅಧಿಸೂಚನೆ ಹೊರಡಿಸಿದೆ.

ಕುದುರೆ ಓಟ ಮತ್ತು ಲಾಟರಿ ಹೊರತುಪಡಿಸಿ ಇತರೆ ಯಾವುದೇ ಆಟಕ್ಕೆ ಹಣವನ್ನು ಪಣವಾಗಿ ಕಟ್ಟುವ ಆನ್‌ಲೈನ್‌ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ನಿಷೇಧಿಸಲಾಗಿದ್ದು, ಜಾಮೀನು ರಹಿತ ಅಪರಾಧ ಎಂದು ಘೋಷಿಸಲಾಗಿದೆ. 

ಈ ಕಾನೂನಿನ ಅಡಿಯಲ್ಲಿ, ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್‌ ಕಾನೂನು ಉಲ್ಲಂಘನೆಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.

ಭಾರತವು ಜಾಗತಿಕವಾಗಿ ಐದನೇ ಅತಿದೊಡ್ಡ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯಾಗಿದ್ದು, 400ಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟ್ಅಪ್‌ಗಳಿವೆ. ಇವು 2025 ರ ವೇಳೆಗೆ 3 ಬಿಲಿಯನ್‌ ಡಾಲರ್ ಗಿಂತ ಹೆಚ್ಚು ಆದಾಯ ಗಳಿಸುವ ನಿರೀಕ್ಷೆಯಿದೆ. 

ಕರ್ನಾಟಕವು 91ಕ್ಕೂ ಹೆಚ್ಚು ಗೇಮಿಂಗ್ ಕಂಪನಿಗಳು ಮತ್ತು ಡೆವಲಪರ್‌ಗಳಿಗೆ ನೆಲೆಯಾಗಿದ್ದು, ಇದು ಸುಮಾರು 4,000 ಜನರಿಗೆ ಉದ್ಯೋಗ ನೀಡುತ್ತಿದೆ. ಆನ್ ಲೈನ್ ಗೇಮ್, ಬೆಟ್ಟಿಂಗ್ ನಿಷೇಧಕ್ಕೆ ಪ್ರತಿಕ್ರಿಯಿಸಿದ ಈ ಉದ್ಯಮವು ಕಾನೂನು ಹೋರಾಟ ನಡೆಸಲು ಯೋಜಿಸುತ್ತಿರುವುದಾಗಿ ಹೇಳಿದೆ.

"ಅತ್ಯುನ್ನತ ಉದ್ಯಮ ಸಂಸ್ಥೆಯಾಗಿ, ನಮ್ಮ ಸದಸ್ಯ ಕಂಪನಿಗಳಿಗೆ ಕಾನೂನಿನ ಪ್ರಕಾರ ಕರ್ನಾಟಕದ ನಿಷೇಧದ ವಿರುದ್ಧ ಹೋರಾಡುವಂತೆ ನಾವು ಸೂಚಿಸಿದ್ದೇವೆ ಎಂದು ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್(ಎಐಜಿಎಫ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ರೋಲ್ಯಾಂಡ್ ಲ್ಯಾಂಡರ್ಸ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com