ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ
ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯು ವೃದ್ಧಾಪ್ಯ ಕ್ಷೇತ್ರದಲ್ಲಿ ಸಂಶೋಧನೆಗಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ 'ವಯೋಷ್ಟ್ರೇಷ್ಟ ಸಮ್ಮಾನ' ಪ್ರಶಸ್ತಿ ಪಡೆದುಕೊಂಡಿದೆ.
Published: 07th October 2021 02:56 PM | Last Updated: 07th October 2021 02:56 PM | A+A A-

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್
ಬೆಂಗಳೂರು: ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯು ವೃದ್ಧಾಪ್ಯ ಕ್ಷೇತ್ರದಲ್ಲಿ ಸಂಶೋಧನೆಗಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ 'ವಯೋಷ್ಟ್ರೇಷ್ಟ ಸಮ್ಮಾನ' ಪ್ರಶಸ್ತಿ ಪಡೆದುಕೊಂಡಿದೆ.
ಆಸ್ಪತ್ರೆಯು ಹಿರಿಯ ನಾಗರಿಕರ ಅತ್ಯುತ್ತಮ ಸೇವೆಗಳಿಗಾಗಿ ಕೇಂದ್ರ ಸರ್ಕಾರದಿಂದ ಶ್ಲಾಘಿಸಲ್ಪಟ್ಟಿದೆ. 2005 ರಲ್ಲಿ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ನಾಗರಿಕ ಆರೋಗ್ಯ ಸೇವೆ(SCHS)ಒಂದು ಘಟಕವಾಗಿ ಆರಂಭವಾಯಿತು.
ಈ ಘಟಕ ಹಿರಿಯ ನಾಗರಿಕರ ಆರೋಗ್ಯ ಸೇವೆ, ತರಬೇತಿ ಮತ್ತು ಸಂಶೋಧನಾ ಮಾದರಿಯ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದ ವೃದ್ಧರ ಆರೋಗ್ಯ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಮೇಲೆ ಕೆಲಸ ಮಾಡುತ್ತಿದೆ.
ಎಸ್‌ಸಿಹೆಚ್‌ಎಸ್, ಜೆರಿಯಾಟ್ರಿಕ್ಸ್‌ನಲ್ಲಿ ಪ್ರಾಥಮಿಕ ಜೆರಿಯಾಟ್ರಿಕ್ ಕೇರ್ ಸಂಶೋಧನೆಯಲ್ಲಿ ಪರಿಣತಿ ಹೊಂದಿದ್ದು, ಜೆರಿಯಾಟ್ರಿಕ್ ನರ್ಸಿಂಗ್ ಸಹಾಯಕರು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ, ಹಿರಿಯ ನಾಗರಿಕರ ಆರೈಕೆದಾರರು ಮತ್ತು ಕುಟುಂಬ ಸದಸ್ಯರಿಗೆ ಜೆರಿಯಾಟ್ರಿಕ್ಸ್‌ಗೆ ಸಂಬಂಧಿಸಿದ ತರಬೇತಿ ನೀಡುತ್ತದೆ.
ತನ್ನ ಗ್ರಾಮೀಣ ಮತ್ತು ನಗರ ವ್ಯಾಪ್ತಿಯ ಈ ಕಾರ್ಯಕ್ರಮದಲ್ಲಿ ಸೇಂಟ್ ಜಾನ್ಸ್ ವೈದ್ಯರ ತಂಡವು, ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯವಿರುವವರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ. ಈ ತಂಡವು ಪ್ರತಿ ತಿಂಗಳು ಒಂಬತ್ತು ಹಳ್ಳಿಗಳಲ್ಲಿ ಸುಮಾರು 600 ಹಿರಿಯ ನಾಗರಿಕರನ್ನು, ನಗರ ಪ್ರದೇಶಗಳಲ್ಲಿ 500 ಹಿರಿಯ ನಾಗರಿಕರನ್ನು ಮತ್ತು ವೃದ್ಧಾಶ್ರಮಗಳಲ್ಲಿ 250 ಹಿರಿಯ ನಾಗರಿಕರನ್ನು ಭೇಟಿ ಮಾಡಿದೆ.