ನೀರು ಕಲುಷಿತದ ಆರಂಭಿಕ ಲಕ್ಷಣಗಳ ಬಗೆಗಿನ ನಿರ್ಲಕ್ಷ್ಯವೇ ಸಾವಿಗೆ ಕಾರಣ: ಮಕರಬ್ಬಿ ಗ್ರಾಮಸ್ಥರ ಆರೋಪ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಶಿತ ನೀರನ್ನು ಸೇವಿಸಿದ್ದರ ಪರಿಣಾಮವಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. 
ಗ್ರಾಮದಲ್ಲಿನ ಬೋರ್ ವೆಲ್
ಗ್ರಾಮದಲ್ಲಿನ ಬೋರ್ ವೆಲ್

ಮಕರಬ್ಬಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಶಿತ ನೀರನ್ನು ಸೇವಿಸಿದ್ದರ ಪರಿಣಾಮವಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. 

ಗ್ರಾಮಸ್ಥರು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಇದಕ್ಕೆ ಹೊಣೆ ಮಾಡಿದ್ದು, ನೀರು ಕಲುಶಿತಗೊಳ್ಳುತ್ತಿದ್ದ ಪ್ರಾರಂಭಿಕ ಸೂಚನೆಗಳನ್ನು ನಿರ್ಲಕ್ಷ್ಯಿಸಿದ್ದರ ಪರಿಣಾಮವಾಗಿ ಸಾವಿನ ಸಂಖ್ಯೆ ಹೆಚ್ಚಳವಾಗತೊಡಗಿದೆ ಎಂದು ಹೇಳಿದ್ದಾರೆ. 

ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ವ್ಯಕ್ತಿ ಕಲುಶಿತ ನೀರು ಸೇವನೆಯಿಂದ ಅನಾರೋಗ್ಯಕ್ಕೊಳಗಾದ ಮೊದಲ ಪ್ರಕರಣ ವರದಿಯಾಗಿತ್ತು. ಆದರೆ ಅನಾರೋಗ್ಯಕ್ಕಾಗಿ 100 ಮಂದಿ ಆಸ್ಪತ್ರೆಗೆ ದಾಖಲಾಗುವವರೆಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿರಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. 

2,000 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನಾಲ್ಕು ಬೋರ್ ವೆಲ್ ಗಳಿದ್ದು ಈ ಪೈಕಿ ಮೂರು ಬೋರ್ ವೆಲ್ ಗಳ ನೀರು ಕುಡಿಯಲು ಯೋಗ್ಯವಲ್ಲದ್ದು ಎಂದು ಘೋಷಿಸಲಾಗಿದೆ. ಇದರ ಜೊತೆಗೆ ಗ್ರಾಮದ ಒಂದಷ್ಟು ಮಂದಿ ಹೇಳುವ ಪ್ರಕಾರ ಮನೆಗಳಿಗೆ ಪೈಪ್ ಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆಯ ಕಾಮಗಾರಿಯ ವೇಳೆ, ಹಾನಿ ಸಂಭವಿಸಿದ್ದು ಚರಂಡಿ ನೀರು ಕುಡಿಯುವ ನೀರಿನ ಜೊತೆ ಮಿಶ್ರಣವಾಗುತ್ತಿರುವುದು ಆರೋಗ್ಯಹಾನಿಗೆ ಪ್ರಮುಖ ಕಾರಣವಾಗಿದೆ. 

ಕಳೆದ ಮೂರು ವಾರಗಳಲ್ಲಿ ಗ್ರಾಮದಲ್ಲಿ 6 ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಆತಂಕ ಮೂಡಿದೆ. 

ಮಕರಬ್ಬಿಯ ಗೊನೆಪ್ಪ ಅನಗರಗಟ್ಟಿ (55) ಬಸಮ್ಮ ಹವನೂರ್ (70) ಲಕ್ಷ್ಮವ್ವ ಕರಗನ್ಗೌಡರ್ (48) ನೀಲಪ್ಪ ಬೆಳವಾಗಿ (60) ಕೆಂಚಮ್ಮ ಹರನಕಟ್ಟಿ (70) ಈ ವರೆಗೂ ಮೃತಪಟ್ಟಿದ್ದಾರೆ. 

ಈ ನಡುವೆ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ. 

ಒಂದು ವಾರದಲ್ಲಿ 150 ಮಂದಿ ಆಸ್ಪತ್ರೆಗೆ ದಾಖಲು 

ಆಂಜನಪ್ಪ ದಾಸರ್, ಗ್ರಾಮದ ನಿವಾಸಿ ಈ ಬಗ್ಗೆ ಮಾತನಾಡಿದ್ದು, ನೀರು ಕಲುಶಿತೊಗೊಳ್ಳುತ್ತಿರುವ ಪ್ರಾರಂಭಿಕ ಲಕ್ಷಣಗಳಿಗೆ ನಿರ್ಲಕ್ಷ್ಯ ವಹಿಸಿದರು, ಗೊನೆಪ್ಪ ಅನಗರಗಟ್ಟಿ (55) ಈ ಸಮಸ್ಯೆಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದು ಸಮಸ್ಯೆಯನ್ನು ಗಮನಕ್ಕೆ ತಂದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಈಗ ಸಮಸ್ಯೆ ಉಲ್ಬಣಿಸಿದ್ದು ಧಾರವಾಡ, ಗದಗದ ವಿವಿಧ ಆಸ್ಪತ್ರೆಗಳಲ್ಲಿ ಒಂದು ವಾರದಲ್ಲಿ 150 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಸ್ಥಳೀಯ ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ ಬೋರ್ ವೆಲ್ ನ ದುರಸ್ತಿ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಕಳೆದ 30 ವರ್ಷಗಳಿಂದ ಗ್ರಾಮಸ್ಥರು ಈ ಬೋರ್ ವೆಲ್ ನೀರನ್ನೇ ಬಳಕೆ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com