ಮನೆ ಮಾಲೀಕನ ಯಡವಟ್ಟಿನಿಂದ ಬೀದಿ ಪಾಲು: ಬಾಡಿಗೆದಾರರಿಗೆ ನೆರವು ನೀಡುವಂತೆ ಸಿಎಂಗೆ ಮಾಜಿ ಎಂಎಲ್ ಸಿ ಮನವಿ

ಮನೆ ಮಾಲೀಕ ಮಾಡಿದ ತಪ್ಪಿನಿಂದಾಗಿ ಬೀದಿಗೆ ಬಿದ್ದಿರುವ 30 ಕುಟುಂಬಗಳಿಗೆ ನೆರವಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಎಂಎಲ್ ಸಿ ರಮೇಶ್ ಬಾಬು ಮನವಿ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ತುಮಕೂರು: ಮನೆ ಮಾಲೀಕ ಮಾಡಿದ ತಪ್ಪಿನಿಂದಾಗಿ ಬೀದಿಗೆ ಬಿದ್ದಿರುವ 30 ಕುಟುಂಬಗಳಿಗೆ ನೆರವಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಬೇಕು ಎಂದು ಮಾಜಿ ಎಂಎಲ್ ಸಿ ರಮೇಶ್ ಬಾಬು ಮನವಿ ಮಾಡಿದ್ದಾರೆ.

ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮಾಲೀಕ ಮಂಜುನಾಥ್‌ ಟಿ.ಎಲ್‌ ಸಾಲ ಹಿಂತಿರುಗಿಸದೇ ಇದ್ದಿದ್ದಕ್ಕೆ ಕೆನರಾ ಬ್ಯಾಂಕ್‌ ಮತ್ತು ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್‌ ಅಧಿಕಾರಿಗಳು ರಾತ್ರಿ ಮನೆಗಳನ್ನು ಸೀಜ್‌ ಮಾಡಿದ್ದಾರೆ. ಮಾಲೀಕನ ಎಡವಟ್ಟಿನಿಂದ ಮಕ್ಕಳು, ವೃದ್ಧರು, ಮಹಿಳೆಯರೂ ಸೇರಿದಂತೆ ಬೀದಿಗೆ ಬರಬೇಕಾಗಿದೆ.

ಟಿಎಲ್ ಮಂಜುನಾಥ್‌ಗೆ ಸೇರಿದ 3 ಕಟ್ಟಡಗಳಲ್ಲಿ 35 ಮನೆಗಳಿದ್ದು 100 -120 ಮಂದಿ ವಾಸವಿದ್ದರು. ಅಧಿಕಾರಿಗಳು ರಾತ್ರೋರಾತ್ರಿ ಮನೆ ಸೀಜ್‌ ಮಾಡಿದ್ದರಿಂದ ಬಾಡಿಗೆದಾರರು ರಾತ್ರಿಯೇ ಮನೆ ಖಾಲಿ ಮಾಡಿ ಬೀದಿಗೆ ಬರಬೇಕಾಯಿತು.

ಮಂಗಳವಾರ ಸಂಜೆ, ಕಂದಾಯ ಅಧಿಕಾರಿಗಳ ಸಹಾಯದಿಂದ ಬ್ಯಾಂಕ್ ಅಧಿಕಾರಿಗಳು ಮನೆಗಳನ್ನು ವಶಪಡಿಸಿಕೊಂಡವು. ಮನೆ ಮಾಲೀಕ ಮಂಜುನಾಥ್ ಬ್ಯಾಂಕುಗಳಿಗೆ 1.5 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದು, ಮೂರು ಬಾರಿ ನೀಡಿದ ನೋಟಿಸ್‌ ನೀಡಿದರೂ ನಿರ್ಲಕ್ಷಿಸಿರುವುದಾಗಿ ವರದಿಯಾಗಿದೆ, ಮಾಲೀಕನ ಯಡವಟ್ಟಿನಿಂದ ಬಾಡಿಗೆದಾರರು ತೊಂದರೆಗೊಳಗಾಗಿದ್ದಾರೆ.

ಇದು ಬ್ಯಾಂಕುಗಳು ಮತ್ತು ಭೂಮಾಲೀಕನ ನಡುವಿನ ಸಮಸ್ಯೆಯಾಗಿರುವುದರಿಂದ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಯಾರೂ ಮಧ್ಯಪ್ರವೇಶಿಸಲಿಲ್ಲ. "ಬಾಡಿಗೆದಾರರು ಮತ್ತು ಭೂಮಾಲೀಕರು ಉಚ್ಚ   ನ್ಯಾಯಾಲಯವನ್ನು ಸಂಪರ್ಕಿಸಬೇಕು, ಬ್ಯಾಂಕುಗಳು SARFAESI ಕಾಯಿದೆ 2002 ರ ಅಡಿಯಲ್ಲಿ ಮನೆಗಳನ್ನು ಸೀಜ್ ಮಾಡಿಕೊಂಡಾಗ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ" ಎಂದು ತುಮಕೂರು ಡಿಸಿ ವೈ.ಎಸ್ ಪಾಟೀಲ್ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com