ಮೈಸರು ದಸರಾ: ಕ್ಯಾಪ್ಟನ್ ಅಭಿಮನ್ಯುವಿಗೆ ಜಂಬೂ ಸವಾರಿ ತಾಲೀಮು

ಈ ಬಾರಿಯ ನಾಡಹಬ್ಬ ದಸರಾಕ್ಕೆ ಅಕ್ಟೋಬರ್ 7 ರಂದು ರಾಜಕೀಯ ಮುತ್ಸದಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅವರಿಗೆ ಸಾಥ್ ನೀಡಿದ್ದರು. 
ಜಂಬೂ ಸವಾರಿ ತಾಲೀಮು
ಜಂಬೂ ಸವಾರಿ ತಾಲೀಮು

ಬೆಂಗಳೂರು: ಈ ಬಾರಿಯ ನಾಡಹಬ್ಬ ದಸರಾಕ್ಕೆ ಅಕ್ಟೋಬರ್ 7 ರಂದು ರಾಜಕೀಯ ಮುತ್ಸದಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅವರಿಗೆ ಸಾಥ್ ನೀಡಿದ್ದರು. 

ಇದೀಗ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿದ್ದು, ಈ ನಡುವೆ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಉಳಿದ ಗಜಪಡೆಯನ್ನು ನಿತ್ಯವೂ ಪ್ರಮುಖ ರಸ್ತೆಗಳಲ್ಲಿ ನಡೆಸಿ ಅಭ್ಯಾಸ ಮಾಡಿಸಲಾಗುತ್ತಿದೆ.

ವಿಶೇಷವಾಗಿ ಕ್ಯಾಪ್ಟನ್ ಅಭಿಮನ್ಯುವಿಗೆ ಜಂಬೂ ಸವಾರಿಯ ತಾಲೀಮು ನಡೆಸಲಾಗುತ್ತದೆ. ಇದು ಅಕ್ಟೋಬರ್ 13 ಅಥವಾ 14ರಂದು ನಡೆಯಬಹುದು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಲಾಗುತ್ತದೆ. ಅರಮನೆ ಮುಂದೆ ಪುಷ್ಪಾರ್ಚನೆ ಮಾಡಿದ ನಂತರ ಮೆರವಣಿಗೆ ತಾಲೀಮು ಆರಂಭವಾಗುತ್ತದೆ. ಗಜಪಡೆ ಜೊತೆಗೆ ಮೈಸೂರಿನ ಮತ್ತೊಂದು ಪ್ರಮುಖ ಆಕರ್ಷಣೆಯಾದ ಅಶ್ವಪಡೆಯೂ ಸಾಥ್ ನೀಡಲಿದೆ.

ಈ ಮೆರವಣಿಗೆ ತಾಲೀಮು ಉಸ್ತುವಾರಿಯನ್ನು ನಗರ ಪೊಲೀಸ್ ಆಯುಕ್ತರು, ಹಿರಿಯ ಅರಣ್ಯಾಧಿಕಾರಿಗಳು, ಜಂಬೂ ಸವಾರಿಯ ಬಗ್ಗೆ ವಿಶೇಷ ಜ್ಞಾನ ಇರುವ ಹಿರಿಯರು ವಹಿಸುತ್ತಾರೆ. ಪ್ರತಿವರ್ಷವೂ ವಿಜಯದಶಮಿಗೆ ಮುನ್ನ ಅಂಬಾರಿ ಹೊರುವ ಆನೆಗೆ ಮರದ ಅಂಬಾರಿ ಹೊರಿಸಿ ಅಭ್ಯಾಸ ಮಾಡಿಸುವ ರೂಢಿ ನಡೆದು ಬಂದಿದೆ. ಈ ಸಂದರ್ಭದಲ್ಲಿ ಅಂಬಾರಿ ಹೊರುವ ಆನೆಯ ವರ್ತನೆಯನ್ನು ಅಧ್ಯಯನ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com