ಆನ್ ಲೈನ್ ಬೆಟ್ಟಿಂಗ್ ದಂಧೆ: ಮೂವರು ಬುಕ್ಕಿಗಳ ಬಂಧನ

ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿ ಹಣ ಕಟ್ಟಿಸಿಕೊಳ್ಳುತ್ತಿದ್ದ ಮೂವರು ಬುಕ್ಕಿಗಳನ್ನು ನಗರದ ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧನ (ಸಾಂಕೇತಿಕ ಚಿತ್ರ)
ಬಂಧನ (ಸಾಂಕೇತಿಕ ಚಿತ್ರ)

ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿ ಹಣ ಕಟ್ಟಿಸಿಕೊಳ್ಳುತ್ತಿದ್ದ ಮೂವರು ಬುಕ್ಕಿಗಳನ್ನು ನಗರದ ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕೊಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ಪಂದ್ಯದ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಇವರಿಂದ 10ಲಕ್ಷದ 41 ಸಾವಿರ ರೂ ಮೌಲ್ಯದ ಕಾರು 59 ಸಾವಿರ ನಗದು ಒಂದು ಕೋರು ಒಂದು ಬೈಕ್ ಸೆರಿದಂತೆ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಐಪಿಎಲ್ ಮ್ಯಾಚ್ ಗಳು ನಡೆಯುವ ಸಂದರ್ಭ ಪ್ರತಿ ಬಾಲ್ ಎಸೆತ, ಕ್ಯಾಚ್, ಸಿಕ್ಸರ್, ಪೋರ್ ಹೀಗೆ ಪ್ರತಿ ಆಟದ ನಡೆಗೂ ಮುನ್ನ ಬೆಟ್ಟಿಂಗ್ ಬುಕ್ಕಿಗಳು ಹಣ ಕಟ್ಟಿಸಿಕೊಳ್ಳುವ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇವೆಲ್ಲ ಗಮನಕ್ಕೆ ಬಂದ ನಂತರ ರಾಜ್ಯ ಸರಕಾರವೂ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಆನ್ ಲೈನ್ ಬೆಟ್ಟಿಂಗ್ ನಿಷೇಧ ಮಾಡಿದೆ. ಈ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ಸ್ಟೇಟ್ ಪೊಲೀಸ್ ಆಕ್ಟ್ ಅಡಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com