ಮಂಗಳೂರಿನಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ: ಇಬ್ಬರ ಬಂಧನ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಧರ್ಮಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು 'ನೈತಿಕ ಪೊಲೀಸ್ ಗಿರಿ' ಮತ್ತು ನಿಂದಿಸಿದ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
Published: 09th October 2021 11:50 PM | Last Updated: 09th October 2021 11:50 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಧರ್ಮಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು 'ನೈತಿಕ ಪೊಲೀಸ್ ಗಿರಿ' ಮತ್ತು ನಿಂದಿಸಿದ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಿಗ್ಗೆ ಉಡುಪಿಯ ಕಾರ್ಕಳ ತಾಲ್ಲೂಕಿನ ದಂಪತಿಗಳು ಮತ್ತು ಇನ್ನಿಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದ ಕಾರನ್ನು ಸುಮಾರು ಎಂಟರಿಂದ ಆರು ಜನರು ದಾರಿ ಮಧ್ಯೆ ತಡೆದಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮೊದಲಿಗೆ ತಂಡ ಇಬ್ಬರು ಮಹಿಳೆಯರ ಧರ್ಮವನ್ನು ವಿಚಾರಿಸಿದ್ದು ನಂತರ ಅವರು ಬೇರೆ ಧರ್ಮಕ್ಕೆ ಸೇರಿದವರಾಗಿರುವುದನ್ನು ಕಂಡು ಅವಮಾನಿಸಿದರು.
ದೂರಿನ ನಂತರ ಮೂಡುಬಿದಿರೆ ಪೊಲೀಸರು ಸಂಹಿತರಾಜ್ (36) ಮತ್ತು ಸಂದೀಪ್ ಪೂಜಾರಿ (34) ಅವರನ್ನು ಬಂಧಿಸಿ ಐಪಿಸಿ ಸೆಕ್ಷನ್ 354, 153 ಎ, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.