ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆಗೆ ದಸರಾ ನಂತರ ಮುಹೂರ್ತ ಫಿಕ್ಸ್

ಯೋಜನೆಗಾಗಿ ಬಿಎಂಟಿಸಿ ಯಿಂದ 10 ಬಸ್ಸುಗಳನ್ನು ತಲಾ 4 ಲಕ್ಷ ರೂ. ನೀಡಿ ಖರೀದಿಸಲಾಗಿದೆ. ಖರೀದಿಸಲ್ಪಟ್ಟಿರುವ ಬಸ್ಸುಗಳನ್ನು ಅಂಗನವಾಡಿ ಶಾಲೆಯಂತೆ ಪಾರ್ಪಾಡು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ದಸರಾ ಹಬ್ಬದ ನಂತರ ಜಾರಿಗೆ ಬರಲಿದೆಯೆಂದು ಬಿಬಿಎಂಪಿ ತಿಳಿಸಿದೆ. ಶಾಲೆ ತೊರೆದ ಮಕ್ಕಳಿಗೆ ಬಸ್ಸಿನಲ್ಲಿಯೇ ಶಿಕ್ಷಣ ನೀಡುವುದು ಈ ಯೋಜನೆ ಉದ್ದೇಶ.

ಶಿಕ್ಷಣ ಇಲಾಖೆ ಈ ಯೋಜನೆಯ ರೂಪುರೇಷೆಯನ್ನು ಪರಿಶೀಲಿಸುತ್ತಿದ್ದು ಅಂತಿಮ ರೂಪ ನೀಡಲಿದೆ. ಈ ಬಸ್ ಗಳಲ್ಲಿ ಎನ್ ಜಿ ಒ ಪ್ರತಿನಿಧಿ ಇರಲಿದ್ದು ಮಾಂಟೆಸ್ಸರಿ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷನ ಒದಗಿಸಲಿದ್ದಾರೆ. 

ಫೆಬ್ರವರಿ ತಿಂಗಳಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿತ್ತಾದರೂ ಕಳೆದ 6 ತಿಂಗಳಿನಿಂದ ಮುಂದೂಡಲ್ಪಡುತ್ತಿತ್ತು. ಯೋಜನೆಗಾಗಿ ಬಿಎಂಟಿ ಯಿಂದ 10 ಬಸ್ಸುಗಳನ್ನು ತಲಾ 4 ಲಕ್ಷ ನೀಡಿ ಖರೀದಿಸಲಾಗಿದೆ. ಖರೀದಿಸಲ್ಪಟ್ಟಿರುವ ಬಸ್ಸುಗಳನ್ನು ಅಂಗನವಾಡಿ ಶಾಲೆಯಂತೆ ಪಾರ್ಪಾಡು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com