ಹುಬ್ಬಳ್ಳಿ ಗಾಂಜಾ ಮಾರಾಟ ಪ್ರಕರಣ; ಇನ್ಸ್ಪೆಕ್ಟರ್ ಸೇರಿ 7 ಮಂದಿ ಪೊಲೀಸರ ಅಮಾನತು

ಪೊಲೀಸರಿಂದಲೇ ಗಾಂಜಾ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ಪೆಕ್ಟರ್ ಸೇರಿ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಪೊಲೀಸರಿಂದಲೇ ಗಾಂಜಾ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ಪೆಕ್ಟರ್ ಸೇರಿ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 

ಕಳೆದ ವಾರ ಖಚಿತ ಮಾಹಿತಿ ಮೇರೆಗೆ ನವನಗರ ಠಾಣೆ ಪೊಲೀಸರು ಗಾಂಜಾ ಮಾರಾಟಗಾರನ್ನುಸೆರೆಹಿಡಿದಿದ್ದರು. ಆದರೆ ನಂತರ ಕೇಸ್ ದಾಖಲಿಸದೇ ಹಣ ಪಡೆದು, ಆರೋಪಿಗಳ‌ನ್ನ ಬಿಟ್ಟು ಕಳುಹಿಸಿದ್ದರು. ಜೊತೆಗೆ ಸೀಜ್ ಮಾಡಿದ್ದ 1 ಕೆಜಿ ಗಾಂಜಾವನ್ನ ಪೊಲೀಸರೇ ಮಾರಾಟ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. 

ಹೀಗಾಗಿ ಡಿಸಿಪಿ ನೈತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಅಂತಿಮವಾಗಿ ನವನಗರ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ಐ ವಿಕ್ರಮ ಪಾಟೀಲ್ ಸೇರಿದಂತೆ 7 ಮಂದಿ ಪೊಲೀಸರು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಅಮಾನತಿನ ನಂತರ ಇಲಾಖಾ ತನಿಖೆ ಮುಂದುವರೆಯಲಿದೆ. ಗಾಂಜಾ ಎಷ್ಟು ಸೀಜ್ ಆಗಿದೆ, ಹಣ ಎಷ್ಟು ಪಡೆದಿದ್ದಾರೆ ಎನ್ನೋ ಮಾಹಿತಿ ತನಿಖೆಯ ನಂತರ ಗೊತ್ತಾಗಲಿದೆ. ತನಿಖೆಗೆ ತೊಂದರೆಯಾಗಬಾರೆಂದು ತಕ್ಷಣ ಅಮಾನತು ಮಾಡಿರೋದಾಗಿ ಡಿಸಿಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com