ಆ್ಯಪ್ ಸಿದ್ಧಪಡಿಸುತ್ತಿರುವ ಭೂ ಮಾಪನ ಇಲಾಖೆ: ಶೀಘ್ರದಲ್ಲೇ ನಿಮ್ಮ ಭೂಮಿ ನೀವೇ ಅಳತೆ ಮಾಡಬಹುದು!

ದೇಶದ ಯಾವುದೇ ರಾಜ್ಯದಲ್ಲೂ ನಡೆಯದ ಹೊಸ ಪ್ರಯತ್ನವೊಂದಕ್ಕೆ ಭೂ ಮಾಪನ ಮತ್ತು ಭೂದಾಖಲೆಗಳ ಇಲಾಖೆ ಕೈಹಾಕಿದ್ದು, ಜನರಿಗೆ ಅವರ ಕೃಷಿ ಭೂಮಿಯನ್ನು ಅವರೇ ಅಳತೆ ಮಾಡಿಕೊಳ್ಳುವ ಅವಕಾಶವನ್ನು ನೀಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದ ಯಾವುದೇ ರಾಜ್ಯದಲ್ಲೂ ನಡೆಯದ ಹೊಸ ಪ್ರಯತ್ನವೊಂದಕ್ಕೆ ಭೂ ಮಾಪನ ಮತ್ತು ಭೂದಾಖಲೆಗಳ ಇಲಾಖೆ ಕೈಹಾಕಿದ್ದು, ಜನರಿಗೆ ಅವರ ಕೃಷಿ ಭೂಮಿಯನ್ನು ಅವರೇ ಅಳತೆ ಮಾಡಿಕೊಳ್ಳುವ ಅವಕಾಶವನ್ನು ನೀಡಲು ಮುಂದಾಗಿದೆ. 

ಭೂಮಿ ಅಳತೆ ಮಾಡುವ ಕುರಿತು ಇಲಾಖೆ ಆ್ಯಪ್ ವೊಂದನ್ನು ಹೊರತರಲು ಮುಂದಾಗಿದ್ದು, ಇದೊಂದು ಹೊಸ ಪ್ರಯತ್ನವಾಗಿದೆ. ಯಾವುದೇ ರಾಜ್ಯವು ಇಂತಹ ಪ್ರಯತ್ನಗಳನ್ನು ಮಾಡಿಲ್ಲ. ಇದು ಇಲಾಖೆಯ ಒತ್ತಡಗಳನ್ನೂ ಕಡಿಮೆ ಮಾಡಲಿದೆ. ಈಗಾಗಲೇ ಈ ಕುರಿತು ಸಭೆಗಳನ್ನು ನಡೆಸಲಾಗಿದ್ದು, ಯೋಜನೆಗಳ ಕಾರ್ಯಗಳು ಮುನ್ನಡೆಯುತ್ತಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ನವೆಂಬರ್ 15ರೊಳಗಾಗಿ ಆ್ಯಪ್ ಪರಿಚಯಿಸಲು ಇಲಾಖೆ ಯೋಜಿಸಿದೆ. ಇದಕ್ಕಾಗಿ ಕೆಲಸಗಳು ಮುಂದುವರೆದಿದ್ದು, ಆ್ಯಪ್ ನಲ್ಲಿ ಎದುರಾಗಿರುವ ಬಗ್ ಗಳನ್ನು ತೆಗೆದುಹಾಕುವ ಕಾರ್ಯಗಳು ಮುಂದುವರೆದಿದೆ ಎಂದು ತಿಳಿಸಿದ್ದಾರೆ. 

ಆ್ಯಪ್ ಪ್ರಮುಖ ಯೋಜಕರಾಗಿರುವ ಸಮೀಕ್ಷೆ ಆಯುಕ್ತ ಮೌನೀಷ್ ಮೌದ್ಗಿಲ್ ಅವರು ಮಾತನಾಡಿ, ಹಲವು ತಿಂಗಳುಗಳ ಹಿಂದೆಯೇ ಯೋಜನೆಗಳ ಕುರಿತು ಚಿಂತನೆಗಳು ನಡೆದಿದ್ದವು. ಆ್ಯಪ್ ನಲ್ಲಿ ಜನರಿಗೆ ಡಿಜಿಟಲ್ ಸ್ಕೆಚ್  ಬಳಕೆಗೆ ಅನುಮತಿ ನೀಡಲಾಗುತ್ತದೆ. ಅವರ ಗಡಿಯೊಳಗೆ ಅವರು ತಮ್ಮ ಆಸ್ತಿಯನ್ನು ಯಾವ ರೀತಿಯಲ್ಲಿ ಬೇಕಾದರೂ ಹಂಚಿಕೊಳ್ಳಬಹುದು. ಪೋಡಿ ಅಥವಾ ಭೂಮಿ ವಿಭಜನೆಯನ್ನೂ ಕೂಡ ಡಿಜಿಟಲ್‌ ಮೂಲಕವೇ ಮಾಡಬಹುದು. ಆ್ಯಪ್ ದುರ್ಬಳಕೆಯಾಗದಂತೆ ಮಾಡಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆಂದು ಹೇಳಿದ್ದಾರೆ. 

ಆ್ಯಪ್ ಕುರಿತು ಮೌದ್ಗಿಲ್ ಹಾಗೂ ಸಮೀಕ್ಷೆಯ ಹೆಚ್ಚುವರಿ ನಿರ್ದೇಶಕ ಸಿಎನ್ ಶ್ರೀಧರ್ ಅವರು ಮಾಹಿತಿ ನೀಡಿದ್ದಾರೆ. 

ಇದು ಉಪಗ್ರಹ ಚಿತ್ರಗಳನ್ನು ಆಧರಿಸಿಗ್ಗುಸ ಕ್ಲಿಕ್ ಪಾಯಿಂಟ್‌ಗಳನ್ನು ಹೊಂದಿರುತ್ತದೆ. ವಿವರಗಳನ್ನು ಭರ್ತಿ ಮಾಡಿದ ನಂತರ, ಅಪ್ಲಿಕೇಶನ್ ಸಮೀಕ್ಷೆ ಸಂಖ್ಯೆ ಮತ್ತು ಇತರ ವಿವರಗಳನ್ನು ಪಡೆದುಕೊಳ್ಳುತ್ತದೆ. ಆ್ಯಪ್ ದುರುಪಯೋಗವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ದೃಢೀಕರಣಕ್ಕಾಗಿ ಆ್ಯಪ್ ಆಧಾರ್ ಸಂಖ್ಯೆಯನ್ನು ಕೇಳಲಿದೆ. ಒಂದು ವೇಳೆ ಭೂಮಿಯ ಒಂದು ಭಾಗ ಮಾರಾಟವಾಗಿದ್ದರೆ, ಮಾರಾಟ ಮಾಡಿರುವವರು ಹಾಗೂ ಭೂಮಿ ಖರೀದಿ ಮಾಡಿರುವವರು ಇಬ್ಬರೂ ಕುಳಿತು ಮಾಹಿತಿ ನಮೂದಿಸಬೇಕು ಎಂದು ತಿಳಿಸಿದ್ದಾರೆ. 

ಆ್ಯಪ್ ಮೂಲಕ ಇತರರೂ ಮಾಹಿತಿ ಪಡೆದುಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಆ್ಯಪ್ ಮೊದಲು ಫಿಂಗರ್ ಪ್ರಿಂಟ್ ಕೇಳಲಿದೆ. ನಂತರವಷ್ಟೇ ಮಾಹಿತಿ, ರಿಪೋರ್ಟ್ ನೀಡಲಿದೆ ಎಂದಿದ್ದಾರೆ. 

ಇಲಾಖೆಗೆ ಪ್ರತೀವರ್ಷ ನೋಂದಣಿ, ಪೋಡಿ ಅಥವಾ ಭೂಮಿ ವಿಭಜನೆ, ಭೂಮಿ ಗಡಿ ನಿಗದಿಪಡಿಸುವ ಕುರಿತು 7-10 ಲಕ್ಷ ಅರ್ಜಿಗಳು ಬರುತ್ತಿರುತ್ತವೆ. ಅರ್ಜಿಗಳ ಪರಿಶೀಲನೆ ತಡವಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದೀಗ ಸಮಸ್ಯೆಯನ್ನು ಆ್ಯಪ್ ಕಡಿಮೆ ಮಾಡಲಿದೆ ಎಂಬ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com