ಕರ್ನಾಟಕ ಭಾರತದ ಎರಡನೇ ಅತಿ ಹೆಚ್ಚು ಹುಲಿ ಹೊಂದಿದ ರಾಜ್ಯ: ಪ್ರಾಥಮಿಕ ವರದಿ

ಹುಲಿ ಗಣತಿಯು ಬಹುತೇಕ ಪೂರ್ಣಗೊಂಡಿದ್ದು, ಪ್ರಾಥಮಿಕ ವರದಿ ಮತ್ತು ದೇಶಾದ್ಯಂತ ಹುಲಿ ಸಂರಕ್ಷಿತ ಪ್ರದೇಶಗಳ ಹಿಂದಿನ ಮೌಲ್ಯಮಾಪನಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕರ್ನಾಟಕವು ಮಧ್ಯಪ್ರದೇಶ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹುಲಿ ಗಣತಿಯು ಬಹುತೇಕ ಪೂರ್ಣಗೊಂಡಿದ್ದು, ಪ್ರಾಥಮಿಕ ವರದಿ ಮತ್ತು ದೇಶಾದ್ಯಂತ ಹುಲಿ ಸಂರಕ್ಷಿತ ಪ್ರದೇಶಗಳ ಹಿಂದಿನ ಮೌಲ್ಯಮಾಪನಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕರ್ನಾಟಕವು ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಜೊತೆಗೆ ಹುಲಿ ಜನಸಂಖ್ಯೆಗೆ ಸಂಬಂಧಿಸಿದಂತೆ ಮೊದಲ ಮೂರು ರಾಜ್ಯಗಳಲ್ಲಿ ಒಂದಾಗಿದೆ.
 ಅಲ್ಲದೆ ಕರ್ನಾಟಕ ಭಾರತದ ಎರಡನೇ ಅತಿ ಹೆಚ್ಚು ಹುಲಿ ಹೊಂದಿದ ರಾಜ್ಯ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.

"ಈ ವರ್ಷ ಹುಲಿಗಳ ಸಂಖ್ಯೆಯಲ್ಲಿ ಶೇ. 5-6 ರಷ್ಟು ಹೆಚ್ಚಳವಾಗಲಿದೆ" ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(ಎನ್‌ಟಿಸಿಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯುಐಐ) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ಸಂಶೋಧಕರ ಪ್ರಕಾರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಉತ್ತರಾಖಂಡದಂತೆಯೇ ಇರಬಹುದು.

"ಮಧ್ಯ ಪ್ರದೇಶ ಮತ್ತು ಕರ್ನಾಟಕವು ಅರಣ್ಯ ರಕ್ಷಣೆಯಲ್ಲಿ ದೊಡ್ಡ ಪ್ರದೇಶವನ್ನು ಹೊಂದಿದ್ದರೆ, ಉತ್ತರಾಖಂಡವು ಹೆಚ್ಚಿನ ಆವಾಸಸ್ಥಾನವನ್ನು ಹೊಂದಿದೆ" ಎಂದು ಡಬ್ಲ್ಯುಐಐನ ಹಿರಿಯ ವಿಜ್ಞಾನಿ ತಿಳಿಸಿದ್ದಾರೆ.

ಈ ವರ್ಷ ಹುಲಿಗಳ ಸಂಖ್ಯೆಯಲ್ಲಿ ಐದರಿಂದ ಆರು ಪ್ರತಿಶತದಷ್ಟು ಹೆಚ್ಚಳವಾಗಲಿದೆ. ಮೌಲ್ಯಮಾಪನವನ್ನು ಐದು ವರ್ಷಗಳಿಗೊಮ್ಮೆ ಮಾಡುವುದರಿಂದ, ಜನರು ಹುಲಿಗಳ ಸಂಖ್ಯೆ ಶೇಕಡ 15 ರಿಂದ 20ರಷ್ಟು ಹೆಚ್ಚಾಗಬಹುದು ಎಂದು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ವಾಸ್ತವವಾಗಿ, ನಾವು ಈ ವರ್ಷ ಮರಣವನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ. ಬೇಟೆಯಾಡುವುದು, ನೈಸರ್ಗಿಕ ಸಾವುಗಳು ಮತ್ತು ಮರಿಗಳು ಮತ್ತು ಮೃತದೇಹಗಳನ್ನು ಪತ್ತೆಹಚ್ಚುವುದರಿಂದ, ಸಂಖ್ಯೆಗಳು ಅಲ್ಪ ಏರಿಕೆಯನ್ನು ತೋರಿಸುವ ನಿರೀಕ್ಷೆಯಿದೆ ಎಂದು ಹಿರಿಯ ಎನ್‌ಟಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಲಿಗಳ ಸಂಖ್ಯೆ
ಮಧ್ಯ ಪ್ರದೇಶ 526
ಕರ್ನಾಟಕ 524
ಉತ್ತರಾಖಂಡ 442
ಅಂಕಿ-ಅಂಶ: 2018 NTCA ಹುಲಿ ಗಣತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com