ಕಲಬುರಗಿ: 16 ಗ್ರಾಮಗಳಲ್ಲಿ ಶೇ.100 ರಷ್ಟು ಕೋವಿಡ್‌ ಮೊದಲ ಡೋಸ್‌ ಗುರಿ ಸಾಧನೆ!

ಕಲಬುರಗಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, 16 ಗ್ರಾಮಗಳಲ್ಲಿ ಶೇ.100ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಕಲಬುರಗಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, 16 ಗ್ರಾಮಗಳಲ್ಲಿ ಶೇ.100ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಜಿಲ್ಲೆಯ 16 ಗ್ರಾಮಗಳಲ್ಲಿ ಲಸಿಕೆ ಪಡೆದುಕೊಳ್ಳಲು ಅರ್ಹರಿರುವ ಶೇ.100 ಜನರಿಗೆ ಹಾಗೂ 162 ಕುಗ್ರಾಮಗಳಲ್ಲಿ ಶೇ.90ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. 

ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ ಗ್ರಾಮ, ಆಳಂದ ತಾಲೂಕಿನ ತುಗಾಂವ್ ಮತ್ತು ಜಮಗಾ ಗ್ರಾಮಗಳು,ಕೋಡ್ಲಾ, ಬೆನಕನಹಳ್ಳಿ, ಅಲ್ಲೊಳ್ಳಿ, ಕಡಕಂಬ, ಗೌಡನಹಳ್ಳಿ, ಹೊಳಹುಗೋಳ್, ಮುಷ್ಕಾಳ್, ನಮ್ವರ್ ಮತ್ತು ಸೇಡಂ ತಾಲೂಕಿನ ಮಾಲ್ವಾರ್ ಗ್ರಾಮಗಳು, ಅಫಜಲಪುರ ತಾಲೂಕಿನ ಭೈರಮಡಗಿ ಗ್ರಾಮ, ಚಿತ್ತಾಪುರ ತಾಲ್ಲೂಕಿನ ಕಾಳಗಿಯಲ್ಲಿ ಅರ್ಹರಾಗಿರುವ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಜಿಲ್ಲೆಯ 162 ಕುಗ್ರಾಮಗಳಲ್ಲಿ  (ಕಲಬುರಗಿ ಗ್ರಾಮಾಂತರದ 51 ಗ್ರಾಮಗಳು, ಚಿತ್ತಾಪುರ ತಾಲೂಕಿನ 33 ಗ್ರಾಮಗಳು, ಅಫಜಲಪುರ ತಾಲ್ಲೂಕಿನ 16 ಗ್ರಾಮಗಳು, ಜೇವರ್ಗಿ ತಾಲೂಕಿನ 7 ಗ್ರಾಮಗಳು ಮತ್ತು ಚಿಂಚೋಳಿ ತಾಲ್ಲೂಕಿನ 29 ಗ್ರಾಮಗಳು, ಸೇಡಂ ತಾಲೂಕಿನ 24 ಗ್ರಾಮಗಳು ಮತ್ತು ಜೇವರ್ಗಿ ತಾಲ್ಲೂಕಿನ 2 ಗ್ರಾಮಗಳು) ಶೇ.90ರಷ್ಟು ಅರ್ಹ ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.  

ಇನ್ನುಳಿದಂತೆ 344 ಗ್ರಾಮಗಳಲ್ಲಿ ಶೇ 70-90ರಷ್ಟು ಲಸಿಕೆ ಹಾಕಲಾಗಿದ್ದು, ಮತ್ತು ಜಿಲ್ಲೆಯ 357 ಹಳ್ಳಿಗಳಲ್ಲಿ ಶೇ 50-70ರಷ್ಟು ಲಸಿಕೆ ಹಾಕಲಾಗಿದೆ. ಜೇವರ್ಗಿಯ 66 ಗ್ರಾಮ, ಕಲಬುರಗಿ ಗ್ರಾಮಾಂತರದ 47 ಹಳ್ಳಿಗಳು ಸೇರಿ ಒಟ್ಟು 286 ಗ್ರಾಮಗಳಲ್ಲಿ ಶೇ.50 ರಷ್ಟು ಲಸಿಕೆ ಗುರಿ ಸಾಧಿಸಲಾಗಿದೆ. 

ಮೂಲಗಳ ಪ್ರಕಾರ 18,87,597 ರ ಒಟ್ಟು ಅರ್ಹ ಜನಸಂಖ್ಯೆಯಲ್ಲಿ, 12,00,495 ಜನರು (ಶೇ.64) ತಮ್ಮ ಮೊದಲ ಡೋಸ್ ಪಡೆದುಕೊಂಡಿದ್ದು. 4,97,323 ಜನರು (ಶೇ.41) ಎರಡನೇ ಡೋಸ್ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. 

ಕಲಬುರಗಿಯಲ್ಲಿ ಒಟ್ಟಾರೆ ಕಲಬುರಗಿ ಶೇ.78ರಷ್ಟು (2,95,500 ಜನರು) ಜನರು ತಮ್ಮ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದು, ಅತ್ಯಂತ ಕಡಿಮೆ ಶೇ.59 ರಷ್ಟು ಅರ್ಹ ಜನರು (1,78,161 ಜನರು) ಚಿತ್ತಾಪುರ ತಾಲೂಕಿನಲ್ಲಿ ತಮ್ಮ ಮೊದಲ ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದಾರೆ.

ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ಅವರು ಮಾತನಾಡಿ, ಜಿಲ್ಲೆಯ 1.8 ಲಕ್ಷ ಜನರು ಬೇರೆಡೆ ವಲಸೆ ಹೋಗಿದ್ದಾರೆ. ಅವರ ಲಸಿಕೆ ಸ್ಥಿತಿಯ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲಾ ವಿವರಗಳನ್ನು ಪಡೆದ ಬಳಿಕ ಒಟ್ಟಾರೆ ಲಸಿಕೆ ಪ್ರಮಾಣ ಸುಧಾರಿಸಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com