ರಾಜ್ಯದಲ್ಲಿ ಐದು ವಾರಗಳಲ್ಲಿ 16 ಬಾರಿ ಭೂಕಂಪನ!

2010ರಿಂದ ಕರ್ನಾಟಕದಲ್ಲಿ 51 ಭೂಕಂಪಗಳು ದಾಖಲಾಗಿದ್ದರೆ, ಅವುಗಳಲ್ಲಿ 16 ಕಳೆದ ಐದು ವಾರಗಳಲ್ಲಿ ಸಂಭವಿಸಿವೆ - ಇದು ಸೆಪ್ಟೆಂಬರ್ ಮೊದಲ ವಾರದಿಂದ ಸಂಭವಿಸಿದ ಕಂಪನಗಳಲ್ಲಿ ಶೇ 30 ರಷ್ಟು. ಮುಖ್ಯವಾಗಿ ಈ ಎಲ್ಲಾ 16
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 2010ರಿಂದ ಕರ್ನಾಟಕದಲ್ಲಿ 51 ಭೂಕಂಪಗಳು ದಾಖಲಾಗಿದ್ದರೆ, ಅವುಗಳಲ್ಲಿ 16 ಕಳೆದ ಐದು ವಾರಗಳಲ್ಲಿ ಸಂಭವಿಸಿವೆ - ಇದು ಸೆಪ್ಟೆಂಬರ್ ಮೊದಲ ವಾರದಿಂದ ಸಂಭವಿಸಿದ ಕಂಪನಗಳಲ್ಲಿ ಶೇ 30 ರಷ್ಟು. ಮುಖ್ಯವಾಗಿ ಈ ಎಲ್ಲಾ 16 ಕಂಪನಗಳು ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಂಭವಿಸಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

ಒಂದು ನಿರ್ದಿಷ್ಟ ಪ್ರದೇಶದಲ್ಲಿ(ವಿಜಯಪುರ ಮತ್ತು ಕಲಬುರಗಿ ಉತ್ತರ ಕರ್ನಾಟಕದ ಒಂದೇ ಪ್ರದೇಶದಲ್ಲಿ) ಹೆಚ್ಚು ಭೂಕಂಪನಗಳು ದಾಖಲಾಗಿದ್ದು,  ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭೂಕಂಪವಾಗುವ ಬಲವಾದ ಸೂಚನೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರದ (KSNDMC) ಶಾಶ್ವತ ಭೂಕಂಪನ ಮೇಲ್ವಿಚಾರಣಾ ಕೇಂದ್ರಗಳ ನೆಟ್‌ವರ್ಕ್‌ಗಳಲ್ಲಿ 51 ಮೈಕ್ರೊ ಕಂಪನಗಳು ದಾಖಲಾಗಿವೆ. ಇವೆಲ್ಲವೂ 0.7 ರಿಂದ 4.1 ರವರೆಗಿನ ತೀವ್ರತೆ ದಾಖಲಿಸಿವೆ.

2010 ರಲ್ಲಿ 51 ಕಂಪನಗಳು ದಾಖಲಾಗಿದ್ದು, ಇದು ಕಳೆದ 11 ವರ್ಷಗಳಲ್ಲಿ ಅತಿ ಹೆಚ್ಚು ಕಂಪನವಾಗಿದೆ. ಇದು ವರ್ಷದುದ್ದಕ್ಕೂ ಸಂಭವಿಸಿದ ಕಂಪನಗಳು. ಆದರೆ ಈ ವರ್ಷ ಸೆಪ್ಟೆಂಬರ್ 4 ರಿಂದ ಅಕ್ಟೋಬರ್ 11ರ ನಡುವೆ ವಿಜಯಪುರ ಮತ್ತು ಕಲಬುರಗಿಯಲ್ಲಿ 16 ಕಂಪನಗಳು ದಾಖಲಾಗಿದ್ದು, ಹಾಸನದಲ್ಲಿ ಒಂದು ಘಟನೆ ದಾಖಲಿಸಿದೆ.

ಕಲ್ಲಿನ ಎರಡು ಪದರಗಳ ನಡುವೆ ಇರುವ ಮಣ್ಣಿನ ಹಾಸಿಗೆ ತೊಳೆಯಬಹುದಾದ ಈ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಕಂಪನಗಳು ಸಂಭವಿಸಿರಬಹುದು ಎಂದು ತಜ್ಞರು ಊಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com