ಮಾಹಿತಿ ಕಣಜ ಪೋರ್ಟಲ್ ನಲ್ಲಿ 157 ಸೇವೆಗಳ ಬಗ್ಗೆ ಮಾಹಿತಿ: ಆರ್‌ಟಿಐ ಅರ್ಜಿಗಳ ಸಂಖ್ಯೆ ಶೇ.40 ರಷ್ಟು ಇಳಿಯುವ ನಿರೀಕ್ಷೆ

ಒಂದೇ ಸೂರಿನಡಿ ಸರ್ಕಾರದ ಸೇವೆಗಳನ್ನು ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ವಿವಿಧ ಇಲಾಖೆಗಳಿಂದ ನವೀಕರಿಸಿದ ಮಾಹಿತಿಗಳೊಂದಿಗೆ ಮಂಗಳವಾರ ರಿಲಾಂಚ್ ಮಾಡಲಾಗಿದ್ದು, ಈಗ ಯಾವುದೇ ಲಾಗಿನ್ ವ್ಯವಸ್ಥೆ ಹೊಂದಿರುವುದಿಲ್ಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದೇ ಸೂರಿನಡಿ ಸರ್ಕಾರದ ಸೇವೆಗಳನ್ನು ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ವಿವಿಧ ಇಲಾಖೆಗಳಿಂದ ನವೀಕರಿಸಿದ ಮಾಹಿತಿಗಳೊಂದಿಗೆ ಮಂಗಳವಾರ ರಿಲಾಂಚ್ ಮಾಡಲಾಗಿದ್ದು, ಈಗ ಯಾವುದೇ ಲಾಗಿನ್ ವ್ಯವಸ್ಥೆ ಹೊಂದಿರುವುದಿಲ್ಲ ಮತ್ತು ಆರ್ ಟಿಐ ಅರ್ಜಿ ಸಲ್ಲಿಸದಯೇ ರಾಜ್ಯ ಸರ್ಕಾರದ 157 ಸೇವೆಗಳ ಮಾಹಿತಿಯನ್ನು ಪಡೆಯಬಹುದು.

ಪೋರ್ಟಲ್ ಈ ಮೊದಲು ಕೇವಲ 30 ಸ್ಕೀಮ್‌ಗಳನ್ನು ಮತ್ತು 10 ಇಲಾಖೆಗಳ ಮಾಹಿತಿ ಹೊಂದಿತ್ತು. ಈಗ ಶಿಕ್ಷಣ, ಎಸ್ಕಾಮ್ಸ್, ಮೆಟ್ರೋ ಮತ್ತು ಆರೋಗ್ಯ ಇಲಾಖೆ ಸೇರಿದಂತೆ 50 ಇಲಾಖೆಗಳನ್ನು ಹೊಂದಿದೆ. ಇದನ್ನು ಆಂತರಿಕವಾಗಿ ಇ-ಆಡಳಿತ ಇಲಾಖೆಯ ಪ್ರೋಗ್ರಾಮರ್‌ಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಪೋರ್ಟಲ್ ಆರ್‌ಟಿಐ ಕಾಯಿದೆಯ ಸೆಕ್ಷನ್ 4(2 ಗೆ ಅನುಗುಣವಾಗಿದೆ. ಇದು ಅಂತರ್ಜಾಲ ಸೇರಿದಂತೆ ವಿವಿಧ ಸಂವಹನ ವಿಧಾನಗಳ ಮೂಲಕ ನಿಯಮಿತ ಅಂತರದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ.

ಮಾಹಿತಿ ಪಡೆಯಲು ಸಾರ್ವಜನಿಕರು ಆರ್ ಟಿಐ ಅರ್ಜಿಗಳನ್ನು ಸಲ್ಲಿಸುತ್ತಾರೆ. ಆದರೆ ಮಾಹಿತಿ ಕಣಜದಲ್ಲಿ ಆರ್ ಟಿಐ ಅರ್ಜಿ ಸಲ್ಲಿಸದೆಯೇ 157 ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದ್ದು, ಇದರಿಂದ ಆರ್ ಟಿಐ ಅರ್ಜಿಗಳ ಸಂಖ್ಯೆಯಲ್ಲಿ ಶೇ.40 ರಷ್ಟು ಕಡಿಮೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೀಕರಿಸಿದ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಅವರು, ಈ ಪೋರ್ಟಲ್ ಸಾರ್ವಜನಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಹೊಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com