ಸರ್ಕಾರದ ಮಧ್ಯಾಹ್ನ ಬಿಸಿಯೂಟದ ನರಕ ದರ್ಶನ ಮಾಡಿದ ತುಮಕೂರು ಶಾಲೆಯ ಬಾಲಕಿ: ಆಹಾರ ಧಾನ್ಯ ತುಂಬೆಲ್ಲಾ ಕಪ್ಪು ಹುಳಗಳು 

ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ರಾಜ್ಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಶಾಲೆಯಿಂದ ಮಧ್ಯಾಹ್ನ ಬಿಸಿಯೂಟಕ್ಕೆ ವಿತರಿಸಿದ ಆಹಾರ ಧಾನ್ಯದಲ್ಲಿ ಕಪ್ಪು ಹುಳಗಳು ಸಿಕ್ಕಿವೆ. ಕೂಡಲೇ ಬಾಲಕಿಯ ಪೋಷಕರು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. 
ಬಾಲಕಿಗೆ ರೇಷನ್ ನಲ್ಲಿ ಕಪ್ಪು ಹುಳ ಸಿಕ್ಕಿದ ಮೇಲೆ ಧಾನ್ಯಗಳನ್ನು ಸ್ವಚ್ಛಗೊಳಿಸುತ್ತಿರುವ ಮಹಿಳೆ
ಬಾಲಕಿಗೆ ರೇಷನ್ ನಲ್ಲಿ ಕಪ್ಪು ಹುಳ ಸಿಕ್ಕಿದ ಮೇಲೆ ಧಾನ್ಯಗಳನ್ನು ಸ್ವಚ್ಛಗೊಳಿಸುತ್ತಿರುವ ಮಹಿಳೆ

ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ರಾಜ್ಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಶಾಲೆಯಿಂದ ಮಧ್ಯಾಹ್ನ ಬಿಸಿಯೂಟಕ್ಕೆ ವಿತರಿಸಿದ ಆಹಾರ ಧಾನ್ಯದಲ್ಲಿ ಕಪ್ಪು ಹುಳಗಳು ಸಿಕ್ಕಿವೆ. ಕೂಡಲೇ ಬಾಲಕಿಯ ಪೋಷಕರು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. 

ಇದನ್ನು ನೋಡಿದ ಸಾರ್ವಜನಿಕರು ಸರ್ಕಾರ ಮತ್ತು ಸಂಬಂಧಪಟ್ಟ ಆಡಳಿತಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಎಂತಹ ಭ್ರಷ್ಟ ಸರ್ಕಾರ, ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ, ದಿನದಲ್ಲಿ ಮೂರು ಹೊತ್ತು ಊಟದಲ್ಲಿ ಮಕ್ಕಳು ಹುಳ ತಿನ್ನಬೇಕೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. 

ಮತ್ತೊಬ್ಬರು ಏಕೆ ಯಾವತ್ತಿಗೂ ಇಂತಹ ಶೋಷಣೆಗೆ ಬಡವರೇ ಗುರಿಯಾಗುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ವಿಡಿಯೊದಲ್ಲಿ ಬಾಲಕಿ, ಈ ಆಹಾರ ತಿನ್ನಲು ಯೋಗ್ಯವೇ ಎಂದು ಕೇಳಿದ್ದಾಳೆ. ನಾನು ಅಧಿಕಾರಿಗಳಲ್ಲಿ ಕೇಳಿದಾಗ ಜಾನುವಾರುಗಳಿಗೆ ಯೋಗ್ಯವಾದ ಆಹಾರವಿದು ಎಂದು ಹೇಳಿದ್ದರು. ಬಿಸಿಯೂಟಕ್ಕೆ ಬಳಸಿದ ಧಾನ್ಯಗಳು ಹಳೆ ಸಂಗ್ರಹವಾಗಿದ್ದು ಶಾಲಾ ಆಡಳಿತ ಅದನ್ನು ಗಮನಿಸದೆ ವಿತರಿಸಿದ್ದಾರೆ, ಅವುಗಳಲ್ಲಿ 5 ಕ್ವಿಂಟಾಲ್ ಅಕ್ಕಿ ಮತ್ತು 2 ಕ್ವಿಂಟಾಲ್ ತೊಗರಿ ಬೇಳೆಯಲ್ಲಿ ಹುಳಗಳು ಇದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಬಾಲಕಿ ಹೇಳುತ್ತಾಳೆ.

ಸಮಯಕ್ಕೆ ಸರಿಯಾಗಿ ಆಹಾರ ಧಾನ್ಯ ವಿತರಿಸದ್ದಕ್ಕೆ ಶಾಲಾ ಅಧಿಕಾರಿಗಳನ್ನು ಆರೋಪಿಸುತ್ತಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಮಧ್ಯಾಹ್ನ ಬಿಸಿಯೂಟ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಡಿ ರುದ್ರಸ್ವಾಮಿ, ಧಾನ್ಯಗಳನ್ನು ಸ್ವಚ್ಛಗೊಳಿಸಲಾಗಿದ್ದು ಸೋಮವಾರ ವಿತರಿಸುತ್ತೇವೆ. ಗುಣಮಟ್ಟ ಕಾಯ್ದುಕೊಳ್ಳುತ್ತೇವೆ ಎನ್ನುತ್ತಾರೆ. ವೈರುಧ್ಯವೆಂದರೆ ಈ ಶಾಲೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ವಿಧಾನಸಭಾ ಕ್ಷೇತ್ರದಲ್ಲಿ ಇದೆ. 

ವಿದ್ಯಾರ್ಥಿಗಳಿಗೆ ಹಂಚುವ ಮೊದಲು ಧಾನ್ಯಗಳನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಶಾಲಾ ಮಟ್ಟದಲ್ಲಿ ಆದೇಶ ಹೊರಡಿಸಿರಲಿಲ್ಲ, ಇನ್ನು ದಸರಾ ರಜೆ ಕಳೆದು ಶಾಲೆಗಳು ಆರಂಭವಾಗುತ್ತಿದ್ದರೂ ಮಧ್ಯಾಹ್ನ ಬಿಸಿಯೂಟಕ್ಕೆ ಇನ್ನೂ ಶಾಲೆಗಳು ಅಣಿಯಾಗಿಲ್ಲ. ಅದಕ್ಕೆ ಸಮನಾಗಿ ಮಕ್ಕಳಿಗೆ ಆಹಾರ ವಿತರಿಸಲಾಗುತ್ತದೆ ಎಂದು ರುದ್ರಸ್ವಾಮಿ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com