ವರ್ಲ್ಡ್ ದುಬೈ ಎಕ್ಸ್'ಪೋ-2020: ಕರ್ನಾಟಕ ನವೋದ್ಯಮಗಳ ತೊಟ್ಟಿಲು- ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ನವೋದ್ಯಮಗಳ ತೊಟ್ಟಿಲಾಗಿರುವ ಕರ್ನಾಟಕವು ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ತಂತ್ರಜ್ಞಾನವನ್ನು ಆಧರಿಸಿದ ಹಲವು ಕ್ಷೇತ್ರಗಳಲ್ಲಿ ಸಮರ್ಥ ಪರಿಹಾರಗಳನ್ನು ಒದಗಿಸಲು ಉತ್ಸುಕವಾಗಿದೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ- ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶನಿವಾರ ಹೇಳಿದ್ದಾರೆ.
ಐಟಿ-ಬಿಟಿ ಹಾಗೂ ವಿಜ್ಞಾನ- ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
ಐಟಿ-ಬಿಟಿ ಹಾಗೂ ವಿಜ್ಞಾನ- ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ನವೋದ್ಯಮಗಳ ತೊಟ್ಟಿಲಾಗಿರುವ ಕರ್ನಾಟಕವು ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ತಂತ್ರಜ್ಞಾನವನ್ನು ಆಧರಿಸಿದ ಹಲವು ಕ್ಷೇತ್ರಗಳಲ್ಲಿ ಸಮರ್ಥ ಪರಿಹಾರಗಳನ್ನು ಒದಗಿಸಲು ಉತ್ಸುಕವಾಗಿದೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ- ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶನಿವಾರ ಹೇಳಿದ್ದಾರೆ. 

`ವರ್ಲ್ಡ್ ದುಬೈ ಎಕ್ಸ್-ಪೋ-2020’ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ನವೋದ್ಯಮಗಳ ತೊಟ್ಟಿಲು. ಹಲವು ಕ್ಷೇತ್ರಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿ ರಾಜ್ಯಕ್ಕಿದೆ. ಯುಎಇಯಲ್ಲಿ ಸಾಗಣೆ, ಆರೋಗ್ಯ ಸೇವೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೆರವು ನೀಡುವ ಸಾಮರ್ಥ್ಯ ರಾಜ್ಯದ ನವೋದ್ಯಮಗಳಿಗೆ ಇದೆ’ ಎಂದು ಹೇಳಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಸಾಮರ್ಥ್ಯದ ಆರ್ಥಿಕ ಶಕ್ತಿಯಾಗಿ ಬೆಳೆಸುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಕರ್ನಾಟಕವು ತಂತ್ರಜ್ಞಾನವನ್ನು ಆಧರಿಸಿದ ಎಲ್ಲ ಉಪಕ್ರಮಗಳನ್ನೂ ಕೈಗೊಂಡಿದೆ. ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶಗಳಿವೆ. ಯುಎಇ ಉದ್ಯಮಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅನಿಮೇಷನ್‌ ಸೇರಿದಂತೆ ಹಲವು ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಪ್ರತ್ಯೇಕ ನೀತಿಗಳನ್ನು ಜಾರಿಗೊಳಿಸಿದೆ. ರಾಜ್ಯಕ್ಕೆ ಬರುವ ಹೂಡಿಕೆದಾರರಿಗೆ ಆಕರ್ಷಕ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಆಹ್ವಾನ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com