ಕೊನೆಗೂ ಜೈಲಿನಿಂದ ಬಿಡುಗಡೆಯಾದ ಮಾಜಿ ಸಿಎಂ ದಿವಂಗತ ಜಯಲಲಿತಾ ದತ್ತುಪುತ್ರ ಸುಧಾಕರನ್!
4 ರ್ಷಗಳ ಬಳಿಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ದತ್ತುಪುತ್ರ ಸುಧಾಕರನ್ ಅವರು ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
Published: 17th October 2021 12:48 PM | Last Updated: 17th October 2021 12:48 PM | A+A A-

ಸುಧಾಕರನ್
ಬೆಂಗಳೂರು: 4 ರ್ಷಗಳ ಬಳಿಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ದತ್ತುಪುತ್ರ ಸುಧಾಕರನ್ ಅವರು ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
4 ವರ್ಷಗಳ ಜೈಲು ಶಿಕ್ಷೆಯ ನಂತರ ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಸುಧಾಕರನ್ ಬಿಡುಗಡೆಯಾಗುತ್ತಿದ್ದಂತೆ ಬೆಂಬಲಿಗರು ಸುಧಾಕರನ್ ಪರವಾಗಿ ಘೋಷಣೆ ಕೂಗಿ ಬರಮಾಡಿಕೊಂಡರು. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸುಧಾಕರನ್ ಅವರು ಚೆನ್ನೈಗೆ ತೆರಳಿದರು.
ಅಕ್ರಮ ಆಸ್ತಿ ಸಂಪಾದಿಸದ್ದ ಆರೋಪದ ಮೇಲೆ ಶಶಿಕಲಾ ನಟರಾಜನ್ಗೆ ಜೈಲು ವಾಸ ನೀಡಲಾಗಿತ್ತು. ಸುಮಾರು 4 ವರ್ಷಗಳ ನಂತರ ಅಂದರೆ ಇದೇ ವರ್ಷ ಜನವರಿ 27ಕ್ಕೆ ಇವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿತ್ತು. ಶಶಿಕಲಾ ರಿಲೀಸ್ ಆದ ದಿನವೇ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆಯಾಗಬೇಕಿತ್ತು. ಆದರೆ ದಂಡ ಕಟ್ಟದ ಕಾರಣ ಬಿಡುಗಡೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಂದು ವರ್ಷ ಹೆಚ್ಚು ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು.
ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ 2017 ರಲ್ಲಿ ಶಶಿಕಲಾ, ಇಳವರೆಸಿ, ಸುಧಾಕರನ್ ಸೇರಿ ಮೂವರೂ ಶಿಕ್ಷೆಗೆ ಒಳಗಾಗಿ ಹತ್ತು ಕೋಟಿ ದಂಡ ವಿಧಿಸಲಾಗಿತ್ತು.