ನಗರದಲ್ಲಿರುವ 404 ಕಟ್ಟಡಗಳು ದುರ್ಬಲ: ಬಿಬಿಎಂಪಿ ಸಮೀಕ್ಷೆಯಲ್ಲಿ ಬಹಿರಂಗ 

ಕಳೆದ ಎರಡು ವರ್ಷಗಳಿಂದ ಹಚಿನ್ಸ್ ರಸ್ತೆಯ ನಿವಾಸಿಗಳು ನಗರದಲ್ಲಿ ಕೇಳಿಬರುತ್ತಿರುವ ಕಟ್ಟಡ ಕುಸಿತದ ಸುದ್ದಿಗೆ ಬೆಚ್ಚಿ ಬೀಳುತ್ತಾರೆ. ಇಲ್ಲಿ ಜುಲೈ 2019 ರಲ್ಲಿ ಎರಡು ಅಪಾರ್ಟ್ ಮೆಂಟ್ ಕಟ್ಟಡಗಳು ಕುಸಿದಿದ್ದು, ಇದರಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟ ಘಟನೆ ಇನ್ನೂ ಕಾಡುತ್ತಿದೆ.
ಕಮಲನಗರದಲ್ಲಿ ಕುಸಿದಿರುವ ಕಟ್ಟಡ
ಕಮಲನಗರದಲ್ಲಿ ಕುಸಿದಿರುವ ಕಟ್ಟಡ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹಚಿನ್ಸ್ ರಸ್ತೆಯ ನಿವಾಸಿಗಳು ನಗರದಲ್ಲಿ ಕೇಳಿಬರುತ್ತಿರುವ ಕಟ್ಟಡ ಕುಸಿತದ ಸುದ್ದಿಗೆ ಬೆಚ್ಚಿ ಬೀಳುತ್ತಾರೆ. ಇಲ್ಲಿ ಜುಲೈ 2019 ರಲ್ಲಿ ಎರಡು ಅಪಾರ್ಟ್ ಮೆಂಟ್ ಕಟ್ಟಡಗಳು ಕುಸಿದಿದ್ದು, ಇದರಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟ ಘಟನೆ ಇನ್ನೂ ಕಾಡುತ್ತಿದೆ.

ಕಳೆದ ಕೆಲ ಸಮಯಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಕಟ್ಟಡ ಕುಸಿಯುವುದು, ವಾಲುವುದು ಆಗುತ್ತಿದೆ. ಹಲವಾರು ಕಟ್ಟಡಗಳ ನಿವಾಸಿಗಳು, ಅವುಗಳಲ್ಲಿ ಕೆಲವು ಹೊಸದಾಗಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿನ ಜನರು ಕೂಡ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಹೊಸದಾಗಿ ಮಾಡಿದ ಸಮೀಕ್ಷೆಯ ಪ್ರಕಾರ, ನಗರದಲ್ಲಿ 404 ಕಟ್ಟಡಗಳು ದುರ್ಬಲವಾಗಿದ್ದು ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆಗಳಿವೆ.

ಜನರು ನನ್ನ ಮುಂದೆ ಸಾಯುವುದನ್ನು ನಾನು ನೋಡಿದೆ. ಇಂದಿಗೂ ಸಹ, ಇಂದಿಗೂ ಸಹ ನನಗೆ ಆ ಘಟನೆಯಿಂ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಭಯವಾಗುತ್ತದೆ. ಆ ಜೋರಾದ ಶಬ್ದ ಮತ್ತು ನೆಲ ಹೇಗೆ ಅಲುಗಾಡಿದೆ ಎಂಬುದು ನನಗೆ ಇನ್ನೂ ನೆನಪಿದೆ. ನಾನು ನನ್ನ ಕುಟುಂಬದೊಂದಿಗೆ ಓಡಿ ನನ್ನ ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲಾ ಮನೆಗಳ ಬಾಗಿಲುಗಳನ್ನು ಬಡಿದು ಕೆಳಗೆ ಓಡುವಂತೆ ಕೇಳಿದೆ. ಬೆಂಗಳೂರು ಇನ್ನೂ ಅದರಿಂದ ಪಾಠ ಕಲಿತಂತೆ ಕಂಡುಬರುತ್ತಿಲ್ಲ. ಹಲವು ಕಟ್ಟಡಗಳು ಕುಸಿಯುತ್ತಿರುವುದನ್ನು, ಓರೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಭಯಾನಕ. ಇತಿಹಾಸ ಮರುಕಳಿಸುವ ಮೊದಲು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಎಂದು ಭಯಭೀತರಾದ ರಾಜೇಶ್ ನಾಥ್ (ಹೆಸರು ಬದಲಿಸಲಾಗಿದೆ) ಅವರು 2019 ರ ಜುಲೈನಲ್ಲಿ ಕುಸಿದ ಸಾಯಿ ಆದಿ ಅಂಬಾಲ್ ಅಪಾರ್ಟ್‌ಮೆಂಟ್‌ನ ಘಟನೆ ಬಗ್ಗೆ ಹೇಳುತ್ತಾರೆ.

ನಗರದಲ್ಲಿ ಮಳೆಯ ಅಬ್ಬರದಿಂದ ಕಳೆದೊಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಹೆಚ್ಚಾಗಿದೆ. ಆದಾಗ್ಯೂ, ಬಿಬಿಎಂಪಿ ಇದುವರೆಗೆ ಇಂತಹ 10 ಕಳಪೆ ಬಿರುಕು ಬಿಟ್ಟಿರುವ ಕಟ್ಟಡಗಳನ್ನು ಮಾತ್ರ ಕೆಡವಿದೆ. ಪೂರ್ವ, ದಕ್ಷಿಣ ಮತ್ತು ಪಶ್ಚಿಮದಂತಹ ಕೆಲವು ವಲಯಗಳು 90 ಕ್ಕಿಂತ ಹೆಚ್ಚು ರಚನೆಗಳನ್ನು ಹೊಂದಿದ್ದು ಅದು ಕೆಟ್ಟ ಸ್ಥಿತಿಯಲ್ಲಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, "2019 ರ ಸಮೀಕ್ಷೆಯ ಹೊರತಾಗಿ, ಇನ್ನೂ 300 ಪ್ಲಸ್ ಕಟ್ಟಡಗಳನ್ನು ಗುರುತಿಸಲಾಗಿದೆ ಮತ್ತು ಅದರ ಮೇಲೆ ನಿಗಾ ಇರಿಸಲಾಗಿದೆ. ಎಂಟು ವಲಯ ಅಧಿಕಾರಿಗಳು ಮತ್ತು 27 ವಿಭಾಗೀಯ ಅಧಿಕಾರಿಗಳನ್ನು ಪರೀಕ್ಷಿಸಲು ಮತ್ತು ಕಟ್ಟಡದ ಮಾಲೀಕರು ಮತ್ತು ನಿವಾಸಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆಯಲು ಸೂಚಿಸಲಾಗಿದೆ. ನಮ್ಮ ಮಾತನ್ನು ಕೇಳದೆ ನಿರ್ಲಕ್ಷ್ಯ ಮಾಡಿದ ಮಾಲೀಕರಿಗೆ ನೊಟೀಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಜ್ಞರ ಪ್ರಕಾರ, ಕುಸಿತಕ್ಕೆ ಕೆಲವು ಪ್ರಮುಖ ಕಾರಣಗಳೆಂದರೆ ಕಟ್ಟಡ ನಿರ್ಮಾಣ ಮಾಡುವಾಗ ನಿಯಮವನ್ನು ಸರಿಯಾಗಿ ಪಾಲಿಸದೇ ಇರುವುದು. ಬೈ-ಲಾಗಳ ವ್ಯಾಪಕ ದುರುಪಯೋಗ, ಗೊತ್ತುಪಡಿಸಿದ ನೆಲದ ವಿಸ್ತೀರ್ಣ ಅನುಪಾತ (ಎಫ್‌ಎಆರ್) ಮತ್ತು ಅನಧಿಕೃತ ಸೇರ್ಪಡೆಗಳು ದೊಡ್ಡ ಕಟ್ಟಡಗಳ ಹಾನಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಅಸುರಕ್ಷಿತ ಪರಿಸ್ಥಿತಿಗಳು ಉಂಟಾಗುತ್ತವೆ ಎಂದು ಬೆಂಗಳೂರಿನ ವಾಸ್ತುಶಿಲ್ಪಿ ಮತ್ತು ನಗರ ವಿನ್ಯಾಸಕ ನರೇಶ್ ನರಸಿಂಹನ್ ಹೇಳುತ್ತಾರೆ.

ಓಪಸ್ ಆರ್ಕಿಟೆಕ್ಟ್‌ನ ಪ್ರಧಾನ ವಾಸ್ತುಶಿಲ್ಪಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (IIA) ನ ಸುಜಯ್ ಘೋರ್ಪಡ್ಕರ್,  ಕಟ್ಟಡದಲ್ಲಿ ಓರೆಯಾಗಲು ಅಥವಾ ಕುಸಿತಕ್ಕೆ ಹಲವು ಕಾರಣಗಳಿವೆ. ಸೈಟ್‌ನ ಮಾಲೀಕರು ನಿರ್ಮಾಣಕ್ಕೆ ಯೋಜಿಸುವ ಮೊದಲು ಮೊದಲನೆಯದಾಗಿ, ಅವರು ಅರ್ಹ ಆರ್ಕಿಟೆಕ್ಟ್ ಗಳನ್ನು ಸಂಪರ್ಕಿಸಬೇಕು. ರಚನಾ ಯೋಜನೆಯನ್ನು ಸಿದ್ಧಪಡಿಸುವ ಪ್ರಮಾಣೀಕೃತ ರಚನಾತ್ಮಕ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಬೇಕು ಮತ್ತು ಯೋಜನೆಯ ಅಂತ್ಯದ ವೇಳೆಗೆ ರಚನಾತ್ಮಕ ಸ್ಥಿರತೆ ಪ್ರಮಾಣಪತ್ರವನ್ನು ನೀಡುವ ಸ್ಥಿತಿಯಲ್ಲಿರಬೇಕು ಎನ್ನುತ್ತಾರೆ.

ಯೋಜನೆ ಮತ್ತು ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ಸೈಟ್ ಪ್ರದೇಶದ ಮಣ್ಣಿನ ಬಲವನ್ನು ನಿರ್ಧರಿಸುವುದು ಬಹಳ ಮುಖ್ಯ ಎಂದು ಹೇಳುತ್ತಾರೆ. ಕಟ್ಟಡದ ಸ್ಥಳವನ್ನು ಸರಿಯಾಗಿ ನಿರೂಪಿಸಲು ಮತ್ತು ರಚನೆಯನ್ನು ಬೆಂಬಲಿಸುವ ಅಡಿಪಾಯವನ್ನು ವಿನ್ಯಾಸಗೊಳಿಸಲು, ಅಡಿಪಾಯವನ್ನು ಬೆಂಬಲಿಸುವ ಮಣ್ಣಿನ ನಿಕ್ಷೇಪಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದು ಸುಜಯ್ ವಿವರಿಸುತ್ತಾರೆ.

ಲೋಡಿಂಗ್ ಅಂಶಗಳನ್ನು ಸಹ ಪರಿಗಣಿಸಬೇಕಾಗಿದೆ ಎಂದು ಸುಜಿತ್ ಹೇಳುತ್ತಾರೆ. ಕಾಂಕ್ರೀಟ್ ಗಾತ್ರವು ಬಹಳ ಮುಖ್ಯವಾಗಿದೆ. ಕನಿಷ್ಠ 8 ಇಂಚುಗಳಷ್ಟು ಇರಬೇಕು ಆದರೆ ಅನೇಕ ಬಿಲ್ಡರ್‌ಗಳು ಹಣವನ್ನು ಉಳಿಸಲು, ಆರು ಇಂಚಿನ ಕಾಂಕ್ರೀಟ್ ಕಾಲಮ್ ಅನ್ನು ನಿರ್ಮಿಸುತ್ತಾರೆ, ಇದರಿಂದ ಹೊಸದಾಗಿ ನಿರ್ಮಿಸಿದ ಕಟ್ಟಡಗಳನ್ನು ಮುರಿಯಲು ಕಾರಣವಾಗುತ್ತದೆ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com