ಕಾಂಗ್ರೆಸ್ ಪಕ್ಷದ ಪ್ರಚಾರ ನಿರ್ವಹಣಾ ಸಂಸ್ಥೆ ಸೇರಿದಂತೆ ಎರಡು ಕಂಪೆನಿಗಳ ಮೇಲೆ ಐಟಿ ದಾಳಿ: ರಾಜಕೀಯ ಎಂದು ಆರೋಪಿಸಿದ ಡಿ ಕೆ ಶಿವಕುಮಾರ್

ಐಟಿ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ತ್ಯಾಜ್ಯ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನ ಹಲವು ಕಂಪೆನಿಗಳ ಮೇಲೆ ಕಳೆದ ವಾರ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿ ದಾಖಲೆರಹಿತ ಸುಮಾರು 7 ಕೋಟಿ ರೂಪಾಯಿ ಹೂಡಿಕೆಯನ್ನು ಪತ್ತೆ ಹಚ್ಚಿದ್ದಲ್ಲದೆ ಸುಮಾರು 70 ಕೋಟಿ ರೂಪಾಯಿಗಳ ಬೋಗಸ್ ವೆಚ್ಚಗಳನ್ನು ಸಹ ಪತ್ತೆಹಚ್ಚಿತ್ತು.
ಕೇಂದ್ರ ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಸಚಿವಾಲಯ

ಬೆಂಗಳೂರು: ಐಟಿ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ತ್ಯಾಜ್ಯ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನ ಹಲವು ಕಂಪೆನಿಗಳ ಮೇಲೆ ಕಳೆದ ವಾರ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿ ದಾಖಲೆರಹಿತ ಸುಮಾರು 7 ಕೋಟಿ ರೂಪಾಯಿ ಹೂಡಿಕೆಯನ್ನು ಪತ್ತೆ ಹಚ್ಚಿದ್ದಲ್ಲದೆ ಸುಮಾರು 70 ಕೋಟಿ ರೂಪಾಯಿಗಳ ಬೋಗಸ್ ವೆಚ್ಚಗಳನ್ನು ಸಹ ಪತ್ತೆಹಚ್ಚಿತ್ತು.

ಶೋಧ ಕಾರ್ಯದ ಬಗ್ಗೆ ಯಾವುದೇ ಸುಳಿವು ನೀಡದೆ ಐಟಿ ಅಧಿಕಾರಿಗಳು ರಹಸ್ಯ ಕಾಪಾಡಿದ್ದರೂ ಕೂಡ ಡಿಸೈನ್ ಬಾಕ್ಸ್ಡ್ ಕನ್ಸಲ್ಟೆನ್ಸಿ ಸಂಸ್ಥೆಯ ನಿರ್ವಹಣೆ ಪರ ಪ್ರಚಾರ ಮಾಡುವ ಬಲ್ಲ ಮೂಲಗಳು ಇಲ್ಲಿ ತೆರಿಗೆ ಉಲ್ಲಂಘನೆಯಾಗಿದೆ ಎಂದು ಹೇಳುತ್ತಿದೆ. ಈ ಕಂಪೆನಿಯಿಂದ ತಮ್ಮ ರಾಜಕೀಯ ಮತ್ತು ಸಾಮಾಜಿಕ ಪ್ರಚಾರಕ್ಕೆ ಸಂಪನ್ಮೂಲಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಳಸಿಕೊಳ್ಳುತ್ತಾರೆ. ಡಿಸೈನ್ ಬಾಕ್ಸ್ಡ್ ಕಂಪೆನಿ ಗುಜರಾತ್ ನ ಸೂರತ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದರೆ ಬೆಂಗಳೂರು, ಚಂಡೀಗಢ ಮತ್ತು ಮೊಹಲಿಯಲ್ಲಿ ಶಾಖೆಗಳನ್ನು ಹೊಂದಿದೆ.

ಶೋಧದ ಸಮಯದಲ್ಲಿ, ತೆರಿಗೆ ಅಧಿಕಾರಿಗಳು "ಗುಂಪು ಆಪರೇಟರ್ ಬಳಸಿ ನಮೂದುಗಳನ್ನು ಪಡೆಯುವಲ್ಲಿ ನಿರತರಾಗಿದ್ದಾರೆ ಎಂದು ಸಾಕ್ಷ್ಯ ಸಿಕ್ಕಿದೆ.. ಹವಾಲಾ ಆಪರೇಟರ್‌ಗಳ ಮೂಲಕ ಗುಂಪಿನ ನಗದು ವರ್ಗಾವಣೆ ಮತ್ತು ಲೆಕ್ಕವಿಲ್ಲದ ಆದಾಯವನ್ನು ವರ್ಗಾಯಿಸಲು ಎಂದು ಎಂಟ್ರಿ ಆಪರೇಟರ್ ಗಳು ತೆರಿಗೆ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತೆರಿಗೆ ಅಧಿಕಾರಿಗಳು ಖರ್ಚಿನ ಹಣದುಬ್ಬರ ಮತ್ತು ಆದಾಯದ ಕಡಿಮೆ ವರದಿಯನ್ನು ಪತ್ತೆ ಮಾಡಿದ್ದಾರೆ. ನಗದು ಪಾವತಿಗಳಲ್ಲಿ ತೊಡಗುತ್ತಿರುವುದು ಕಂಡುಬಂದಿದೆ. ನಿರ್ದೇಶಕರ ವೈಯಕ್ತಿಕ ವೆಚ್ಚಗಳನ್ನು ಖಾತೆಗಳ ಪುಸ್ತಕಗಳಲ್ಲಿ ವ್ಯಾಪಾರ ವೆಚ್ಚವಾಗಿ ಬುಕ್ ಮಾಡಲಾಗಿದೆ ಎಂದು ಕಂಡುಬಂದಿದೆ. ನಿರ್ದೇಶಕರು ಮತ್ತು ಅವರ ಕುಟುಂಬದ ಸದಸ್ಯರು ಬಳಸುವ ಐಷಾರಾಮಿ ವಾಹನಗಳನ್ನು ನೌಕರರು ಮತ್ತು ಪ್ರವೇಶ ಪೂರೈಕೆದಾರರ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಡಿಸೈನ್‌ಬಾಕ್ಸ್ಡ್ 'ಅತಿದೊಡ್ಡ ರಾಜಕೀಯ ಪ್ರಚಾರ ಪಕ್ಷಕ್ಕೆ ಸೇರಿದ್ದಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಆರು ರಾಜ್ಯಗಳಾದ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಅಸ್ಸಾಂಗಳಲ್ಲಿ ಪ್ರಚಾರ ನಡೆಸಿದೆ. "ಪಕ್ಷದ ರಾಜಕೀಯ ಅಭಿಯಾನವನ್ನು ನಡೆಸಲು ಸಂಸ್ಥೆಯು ಸಹಿ ಹಾಕುತ್ತಿರುವ ಏಳನೇ ರಾಜ್ಯ ಕರ್ನಾಟಕ" ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸಂಪರ್ಕಿಸಿದಾಗ, ಯುವ ವೃತ್ತಿಪರ ಉದ್ಯೋಗಿಗಳನ್ನು ಒಳಗೊಂಡ ಕಂಪೆನಿಗಳ ಮೇಲೆ ನಡೆಸುತ್ತಿರುವ ಕಿರುಕುಳ ಇದು. ರಾಜಕೀಯ ದುರುದ್ದೇಶಕ್ಕಾಗಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ. ಪಕ್ಷದ ಪ್ರಚಾರಕ್ಕಾಗಿ ನಾವು ಅವರನ್ನು ಅಧಿಕೃತವಾಗಿ ಸಹಿ ಮಾಡಿಕೊಂಡಿಲ್ಲ. ಅವರು ಇತ್ತೀಚೆಗೆ ಪ್ರಯೋಗಾತ್ಮಕವಾಗಿ ನಮಗೆ 'ವ್ಯಾಕ್ಸಿನೇಟ್ ಕರ್ನಾಟಕ'ವನ್ನು ನಿರ್ವಹಿಸಿದರು. ಕೇಂದ್ರ ಸಂಸ್ಥೆಗಳು ಉದ್ಯಮಶೀಲ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಡಿಸೈನ್ ಬಾಕ್ಸ್ಡ್ ಕಂಪೆನಿಯ ನರೇಶ್ ಅರೊರ, ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ದಾಖಲೆರಹಿತ ಹಣ ಸಿಕ್ಕಿಲ್ಲ. ಅಥವಾ ಯಾವುದೇ ಕಾನೂನುಬಾಹಿರ ಅಂಶ ಪತ್ತೆಯಾಗಿಲ್ಲ. ನಾವು ಕಾನೂನು ಪಾಲಿಸುವ ನಾಗರಿಕರಾಗಿದ್ದು ತೆರಿಗೆ ಪಾವತಿಸುವ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ಘನ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಸೇವೆಗಳನ್ನು ಒಳಗೊಂಡ ಘನ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಎರಡನೇ ಗುಂಪಿನ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶೋಧದ ವೇಳೆ ವಿವಿಧ ಅಪರಾಧದ ದಾಖಲೆಗಳು, ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೋಗಸ್ ವೆಚ್ಚಗಳು ಸುಮಾರು 70 ಕೋಟಿ ರೂಪಾಯಿ ಎಂದು ಗೊತ್ತಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. 

ಸಚಿವಾಲಯದ ಪ್ರಕಾರ, ಶೋಧ ಕ್ರಿಯೆಯು ಸುಮಾರು 7 ಕೋಟಿ ರೂಪಾಯಿಗಳ ಆಸ್ತಿಯಲ್ಲಿ ಲೆಕ್ಕವಿಲ್ಲದ ಹೂಡಿಕೆಯನ್ನು ಪತ್ತೆಹಚ್ಚಿದೆ. ಇದರ ಹೊರತಾಗಿ, ತೆರಿಗೆ ಅಧಿಕಾರಿಗಳು ಲೆಕ್ಕವಿಲ್ಲದ 1.95 ಕೋಟಿ ನಗದು ಮತ್ತು 65 ಲಕ್ಷ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com