ಬೆಂಗಳೂರು ಮಹಿಳೆಯರ ಸುರಕ್ಷತೆ ಹೆಚ್ಚಳಕ್ಕೆ ತಂತ್ರಜ್ಞಾನ ಬಳಕೆ: ಹನಿವೆಲ್ ಸಂಸ್ಥೆಗೆ 496.57 ಕೋಟಿ ರೂ. ಪ್ರಾಜೆಕ್ಟ್

ಈ ಪ್ರಾಜೆಕ್ಟ್ ಅಡಿ ಹನಿವೆಲ್ ಸಂಸ್ಥೆ ನಗರದ 3,000ಕ್ಕೂ ಹೆಚ್ಚು ಸ್ಥಳಗಳಲ್ಲಿ 7,000 ವಿಡಿಯೊ ಕ್ಯಾಮೆರಾಗಳ ಅಳವಡಿಕೆ ಮತ್ತು ಕೇಂದ್ರ ನಿಯಂತ್ರಣ ಕೊಠಡಿ ನಿರ್ಮಾಣವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಸಿಟಿ ಪ್ರಾಜೆಕ್ಟ್ ಅನ್ನು ಹನಿವೆಲ್ ಅಟೋಮೇಷನ್ ಇಂಡಿಯಾ ಸಂಸ್ಥೆ ತನ್ನದಾಗಿಸಿಕೊಂಡಿದೆ. ನಿರ್ಭಯಾ ನಿಧಿಯಡಿ ಈ ಪ್ರಾಜೆಕ್ಟ್ ರೂಪಿಸಲಾಗಿದ್ದು, ಪ್ರಾಜೆಕ್ಟ್ ಮೊತ್ತ 496.57 ಕೋಟಿ ರೂ. ಆಗಿದೆ. 

ನಿರ್ಭಯಾ ನಿಧಿ ಕೇಂದ್ರ ಸರ್ಕಾರ ಪ್ರಾಯೋಜಿತ ನಿಧಿಯಾಗಿದೆ.ಮಹಿಳೆಯರ ಸಬಲೀಕರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಕಾರ್ಯಕ್ರಮ ರೂಪಿಸುವಲ್ಲಿ ಈ ನಿಧಿ ಪ್ರಧಾನ ಪಾತ್ರ ವಹಿಸಿದೆ. 

ಈ ಪ್ರಾಜೆಕ್ಟ್ ಅಡಿ ಹನಿವೆಲ್ ಸಂಸ್ಥೆ ನಗರದ 3,000ಕ್ಕೂ ಹೆಚ್ಚು ಸ್ಥಳಗಳಲ್ಲಿ 7,000 ವಿಡಿಯೊ ಕ್ಯಾಮೆರಾಗಳ ಅಳವಡಿಕೆ ಮತ್ತು ಕೇಂದ್ರ ನಿಯಂತ್ರಣ ಕೊಠಡಿ ನಿರ್ಮಾಣ ಜವಾಬ್ದಾರಿ ಹೊಣೆ ಹೊತ್ತುಕೊಳ್ಳಲಿದೆ. 

ಈ ವಿಡಿಯೊ ಕ್ಯಾಮೆರಾಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು, ಫೇಸ್ ರೆಕಾಗ್ನಿಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತಾಗಿ ಸದ್ಯ ಬಲಕೆಯಲ್ಲಿರುವ ಸುರಕ್ಷಾ ಆಪ್ ಅನ್ನು ಮೇಲ್ದರ್ಜೆಗೆ ಏರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com