ಧಾರವಾಡ ಐಐಐಟಿ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜು!

ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ತಡಸಿನಕೊಪ್ಪದಲ್ಲಿರುವ ಹೊಸ ಕಟ್ಟಡದಲ್ಲಿ ಈ ಬಾರಿಯ ಅಕಾಡೆಮಿಕ್ ವರ್ಷ ಆರಂಭವಾಗಲಿದೆ.
ಧಾರವಾಡ ಐಐಐಟಿಯ ಹೊಸ ಕಟ್ಟಡ
ಧಾರವಾಡ ಐಐಐಟಿಯ ಹೊಸ ಕಟ್ಟಡ

ಹುಬ್ಬಳ್ಳಿ: ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ತಡಸಿನಕೊಪ್ಪದಲ್ಲಿರುವ ಹೊಸ ಕಟ್ಟಡದಲ್ಲಿ ಈ ಬಾರಿಯ ಅಕಾಡೆಮಿಕ್ ವರ್ಷ ಆರಂಭವಾಗಲಿದೆ. 

ಹುಬ್ಬಳ್ಳಿಯ ಐಟಿ ಪಾರ್ಕ್ ನಲ್ಲಿ 2015ರಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿತ್ತು. ತಡಸಿನಕೊಪ್ಪದ 60 ಎಕರೆ ಕ್ಯಾಂಪಸ್ ನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಫೆಬ್ರವರಿ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ವಿದ್ಯುತ್ ಸಂಪರ್ಕ ಸೇರಿದಂತೆ ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿದರೆ ಕಟ್ಟಡ ಕಾಮಗಾರಿ ಇದೀಗ ಪೂರ್ಣಗೊಂಡಿದೆ.

ಆಡಳಿತಾತ್ಮಕ ಮತ್ತು ಅಕಾಡೆಮಿಕ್, ಆರೋಗ್ಯ ಮತ್ತು ಫಿಟ್ನೆಸ್ ಬ್ಲಾಕ್, ಪುರುಷ ಮತ್ತು ಮಹಿಳೆಯರ ಹಾಸ್ಟೆಲ್ ಬ್ಲಾಕ್ ಗಳು ಸೇರಿದಂತೆ ಒಟ್ಟಾರೇ, 5 ಬ್ಲಾಕ್ ಗಳು ಕ್ಯಾಂಪಸ್ ನಲ್ಲಿ ನಿರ್ಮಾಣವಾಗುತ್ತಿದ್ದು, ಅವುಗಳ ಕೆಲಸ ಪೂರ್ಣಗೊಂಡಿರುವುದಾಗಿ ಮೂಲಗಳು ತಿಳಿಸಿವೆ. 

ಆಡಳಿತಾತ್ಮಕ ಚಟುವಟಿಕೆಗಳು ಹಾಗೂ ಪ್ಯಾಕಲ್ಟಿಗಳನ್ನು ಐಟಿ ಪಾರ್ಕ್ ನಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.  ಆಡಳಿತಾತ್ಮಕ ಅಧಿಕಾರಿಗಳು ಹಾಗೂ ಅಧ್ಯಾಪಕರು ಕೆಲಸಗಳ ಪರಿಶೀಲನೆ ನಡೆಸಿದ್ದು, ಕಟ್ಟಡದಲ್ಲಿ ಕೆಲವೊಂದು ಬದಲಾವಣೆಗೆ ಸಲಹೆ ನೀಡಿದ್ದಾರೆ. ವಾರ ಅಥವಾ ಎರಡು ವಾರದೊಳಗೆ ಕಟ್ಟಡ ಪೂರ್ಣಗೊಳ್ಳಲಿದ್ದು, ತರಗತಿ ನಡೆಸಬಹುದಾಗಿದೆ.

ಕೋವಿಡ್-19 ಕಾರಣದಿಂದಾಗಿ ಅನೇಕ ವಿದ್ಯಾರ್ಥಿಗಳು ಆನ್ ಲೈನ್ ತರಗತಿಯಲ್ಲಿದ್ದು, ಕ್ಯಾಂಪಸ್ ನಲ್ಲಿ ಭೌತಿಕ ತರಗತಿಗಳು ಈಗ ನಡೆಯುತ್ತಿಲ್ಲ. ಪ್ರಥಮ ವರ್ಷದ ದಾಖಲಾತಿ ಮುಗಿದರೆ, ನವೆಂಬರ್ ನಿಂದ ಎಲ್ಲಾ ಭೌತಿಕ ತರಗತಿಗಳು ಕ್ಯಾಂಪಸ್ ನಲ್ಲಿ ಆರಂಭವಾಗಲಿವೆ. ಪ್ರಸಕ್ತ ಸಾಲಿನ 2021-22 ಅಕಾಡೆಮಿಕ್ ವರ್ಷ ಹೊಸ ಕಟ್ಟಡದಲ್ಲಿಯೇ ನಡೆಯಲಿದೆ. 

60 ಎಕರೆ ವಿಸ್ತೀರ್ಣದ ಕ್ಯಾಂಪಸ್ ನಲ್ಲಿ ನಿರ್ಮಿಸಲಾಗಿರುವ ಹೊಸ ಕಟ್ಟಡದಲ್ಲಿ 1200 ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದಾಗಿದೆ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ. ಹೊಸ ಕಟ್ಟಡ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಸಮಯವನ್ನು ನಿಗದಿ ಮಾಡುವಂತೆ ಪ್ರಧಾನ ಮಂತ್ರಿ ಕಾರ್ಯಾಲಯವನ್ನು ಕೋರಲಾಗಿದ್ದು, ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ಐಐಐಟಿ ಧಾರವಾಡ ನಿರ್ದೇಶಕ ಪ್ರೊಫೆಸರ್ ಕವಿ ಮಹೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com