ಕೋವಿಡ್-19: ಮೊದಲ ಡೋಸ್ ಲಸಿಕೆ ಪಡೆದವರು ಕೂಡಲೇ 2ನೇ ಡೋಸ್ ಲಸಿಕೆ ಪಡೆಯಿರಿ- ಸಚಿವ ಸುಧಾಕರ್ ಮನವಿ

ಕೊರೋನಾ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ. ಮೊದಲ ಡೋಸ್ ಹಾಕಿಸಿಕೊಂಡು 2ನೆಯ ಡೋಸ್ ಹಾಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸಾರ್ವಜನಿಕರಿಗೆ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.
ಸಚಿವ ಸುಧಾಕರ್
ಸಚಿವ ಸುಧಾಕರ್

ಹುಬ್ಬಳ್ಳಿ: ಕೊರೋನಾ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ. ಮೊದಲ ಡೋಸ್ ಹಾಕಿಸಿಕೊಂಡು 2ನೆಯ ಡೋಸ್ ಹಾಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸಾರ್ವಜನಿಕರಿಗೆ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಶದಲ್ಲಿ 100 ಕೋಟಿ ಲಸಿಕೆ ಸಾಧನೆ ವಿಚಾರ ಹಂಚಿಕೊಂಡ ಸಚಿವರು, ರಾಜ್ಯದಲ್ಲಿ ಶೇ.62 ರಷ್ಟು ಜನರು ಎರಡನೇಯ ಡೋಸ್ ಪಡೆಯಬೇಕಿದೆ. ಮೊದಲ ಡೋಸ್ ಪಡೆದು, ಎರಡನೆಯ ಡೋಸ್ ಪಡೆಯದೆ ಅವಧಿ ಮುಗಿದವರ ಸಂಖ್ಯೆ 53 ಲಕ್ಷ. ಇಂತಹವರನ್ನು ಫೋನ್ ಮೂಲಕ ಸಂಪರ್ಕಿಸಿ ಲಸಿಕೆ ಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಶೇ.83ರಷ್ಟು ಮೊದಲ ಡೋಸ್, ಶೇ.38ರಷ್ಟು ಎರಡು ಡೋಸ್ ಪಡೆದಿದ್ದಾರೆ. ದೇಶದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಗುಜರಾತ್, ಮಧ್ಯಪ್ರದೇಶ ಮೊದಲರೆಡು ಸ್ಥಾನಗಳಲ್ಲಿವೆ ಎಂದು ತಿಳಿಸಿದರು.

ಲಸಿಕೆ ವಿತರಣೆ ಆರಂಭಿಸಿದಾಗ ಕೆಲವರು ಒಡಕಿನ ಮಾತುಗಳನ್ನು ಆಡಿದ್ದರು. ಈ ರೀತಿ ಟೀಕೆ ಮಾಡಿದವರೇ ಕ್ಯೂನಲ್ಲಿ ನಿಂತು ಇಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆಂದು ಕುಟುಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com