ಬೆಂಗಳೂರಿನಲ್ಲಿ ಮಿಜೋರಾಂ ಭವನ ನಿರ್ಮಾಣ: ಬಿಬಿಎಂಪಿ

ಬೆಂಗಳೂರಿನಲ್ಲಿ ಮಿಜೋರಾಂ ಭವನ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಶುಕ್ರವಾರ ಹೇಳಿದ್ದಾರೆ.
ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ಬೆಂಗಳೂರಿನಲ್ಲಿ ಮಿಜೋರಾಂ ಭವನ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಶುಕ್ರವಾರ ಹೇಳಿದ್ದಾರೆ.

ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಲಾಲ್ರಿನೆಂಗಾ ಸೈಲೋ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ನಡುವೆ ಶುಕ್ರವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ವೇಳೆ ಪಾಲಿಕೆ ಚುನಾವಣೆ, ಕಸ ನಿರ್ವಹಣೆ ಮತ್ತು ಆರೋಗ್ಯ ವಲಯದ ಸಮಸ್ಯೆಗಳನ್ನು ಐಜವಾಲ್ ಮತ್ತು ಬೆಂಗಳೂರಿನಲ್ಲಿ ಯಾವ ರೀತಿ ನಿರ್ವಹಿಸಬಹುದು ಎಂಬುದರ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌರವ್ ಗುಪ್ತಾ ಅವರು, ಬೆಂಗಳೂರಿನಲ್ಲಿ ಮಿಜೋರಾಂ ಹೌಸ್ ಅನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ನಗರದಲ್ಲಿ 2,000 ಕ್ಕೂ ಹೆಚ್ಚು ಮಿಜೋರಾಂ ವಿದ್ಯಾರ್ಥಿಗಳಿದ್ದು, 20,000 ಕ್ಕೂ ಹೆಚ್ಚು ವೃತ್ತಿಪರ ವೃತ್ತಿಪರರಿದ್ದಾರೆ. ಮಿಜೋರಾಂ ಭವನ ಸ್ಥಾಪಿಸಲು ಶೀಘ್ರದಲ್ಲೇ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಮೀಕ್ಷಾ ವರದಿ ಬಳಿಕ ಶಿಥಿಲ ಕಟ್ಟಡಗಳ ಮಾಲೀಕರಿಗೆ ನೋಟಿಸ್
ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸರ್ವೇ ವರದಿ ಬಂದ ಕೂಡಲೇ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುವಂತೆ ವಲಯ ಮಟ್ಟದ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಪ್ರಸ್ತುತ 300ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಇದೊಂದು ಶಾಶ್ವತ ಪ್ರಕ್ರಿಯೆಯಾಗಿದ್ದು, ಸರ್ವೇ ಮುಂದುವರೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಮಾಲಿಕರಿಗೆ ನೋಟಿಸ್ ಕೊಟ್ಟು ಕಟ್ಟಡಗಳ ಗುಣಮಟ್ಟ ಪರೀಕ್ಷೆ ಮಾಡಿಸಲು ಅವಕಾಶ ನೀಡಲಾಗುವುದು. ಎಲ್ಲಾ ಕಟ್ಟಡಗಳನ್ನು ಏಕಾಏಕಿ ನೆಲಸಮ ಮಾಡಲು ಸಾಧ್ಯವಿಲ್ಲ. ಮೊದಲ ಹಂತದಲ್ಲಿ ಅಂತಹ ಕಟ್ಟಡಗಳಲ್ಲಿ ವಾಸ ಮಾಡುವವರನ್ನು ಖಾಲಿ ಮಾಡಿಸುವ ಕೆಲಸವನ್ನು ಮಾಡುತ್ತೇವೆ. ನಂತರ ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡುವುದಾಗಿ ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com