ಬೆಂಗಳೂರು: ಫೆರಿಫೆರಲ್ ರಿಂಗ್ ರೋಡ್ ಯೋಜನೆ ಅನುಷ್ಠಾನಕ್ಕೆ ಖಾಸಗಿ ಬಿಡ್ಡುದಾರರ ಒಲವು

ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೂ. 21, 091 ಕೋಟಿ ಮೊತ್ತದ ಹೊರ ವರ್ತುಲ ರಸ್ತೆ ( ಫೆರಿಫೆರಲ್ ರಿಂಗ್ ರೋಡ್) ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ಪ್ರಸ್ತಾವನೆಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೂ. 21,091 ಕೋಟಿ ರೂ. ಮೊತ್ತದ ಹೊರ ವರ್ತುಲ ರಸ್ತೆ (ಫೆರಿಫೆರಲ್ ರಿಂಗ್ ರೋಡ್) ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ಪ್ರಸ್ತಾವನೆಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 16 ವರ್ಷಗಳ ಹಿಂದೆಯೇ ಈ ಯೋಜನೆಯನ್ನು ರೂಪಿಸಲಾಗಿತ್ತು.

ಕಳೆದ ವರ್ಷ 65.5 ಕಿಲೋ ಮೀಟರ್ ಯೋಜನೆಯನ್ನು ಎಂಟು ಪಥ ಹಾಗೂ ನಾಲ್ಕು ಸರ್ವೀಸ್ ಮಾರ್ಗದೊಂದಿಗೆ 73 ಕಿಲೋ ಮೀಟರ್ ಗೆ ಮೇಲ್ದರ್ಜೆಗೇರಿಸಲಾಗಿತ್ತು. ಇದು ಬೆಂಗಳೂರಿನ ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ಮೂರು ತಾಲೂಕುಗಳಲ್ಲಿ 1,810 ಎಕರೆ ಭೂಮಿಯಲ್ಲಿ ಆಗಬೇಕಾಗಿದೆ. ತುಮಕೂರು ರಸ್ತೆಯ ನೈಸ್ ರಸ್ತೆ ಜಂಕ್ಷನ್ ನಿಂದ ಇದು ಆರಂಭವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ 44ರ ಹೊಸೂರು ರಸ್ತೆಯಲ್ಲಿ ಇಂದು ಅಂತ್ಯವಾಗಲಿದೆ.

ಬಿಡಿಎ ಯೋಜನೆಯನ್ನು ಬಿಡ್ಡರ್ ಗೆ 50 ವರ್ಷಗಳ ಗುತ್ತಿಗೆ ನೀಡಲು ಶಿಫಾರಸು ಮಾಡಿತ್ತು. ಇದರಿಂದ ಅವರು ಹೂಡಿದ್ದ ಬಂಡವಾಳ ತೆಗೆದುಕೊಳ್ಳಲು ನೆರವಾಗಲಿದೆ. ಬಿಡ್ ಪ್ರಸ್ತಾವಕ್ಕೆ ಮನವಿ ಮತ್ತು ರಿಯಾಯಿತಿ ಒಪ್ಪಂದವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಪ್ರಸ್ತಾವ ಸ್ವೀಕಾರ ಕುರಿತಂತೆ ಖಚಿತಪಡಿಸಿದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಅದನ್ನು ಇದೀಗ ಕಾನೂನು ಇಲಾಖೆಗೆ ಕಳುಹಿಸಲಾಗಿದೆ. ಹಣಕಾಸು ಇಲಾಖೆ, ನಗರದ ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದು ನಿರ್ಧಾರವಾಗಲಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ಯೋಜನೆಗಾಗಿ ಭೂ ಸ್ವಾಧೀನಕ್ಕೆ ಪರಿಹಾರವನ್ನು ಪರಿಷ್ಕರಿಸಿರುವುದರಿಂದ ಇದರ ವೆಚ್ಚ ಪ್ರಸ್ತುತ ಸುಮಾರು 15,475 ಕೋಟಿ ರೂ. ಗೆ ಆಗುತ್ತದೆ. ಟೋಲ್ ಕಲೆಕ್ಷನ್, ಜಾಹಿರಾತು ಆದಾಯ ಮತ್ತು ಟೋಲ್ ಪ್ಲಾಜಾ ಬಳಿಕ ನಿರ್ಮಾಣದ ಸೌಕರ್ಯಗಳ ಬಾಡಿಗೆಯಿಂದ ಬಿಡ್ಡರ್ ಲಾಭ ಗಳಿಸಬಹುದೆಂದು ಮತ್ತೋರ್ವ ಬಿಡಿಎ ಅಧಿಕಾರಿ ಹೇಳಿದರು. 

ಎಪಿಸಿಐ ಫ್ರೀ ವೇ ಪ್ರೈ. ಲಿಮೆಟೆಡ್ (ಇಸ್ರೇಲ್‌ನ SYMBA-MAZ, Afcons ಮತ್ತು ವಿಶ್ವ ಸಮುದ್ರಗಳ ಒಕ್ಕೂಟ) ಮತ್ತು ಐಒಟಿಸಿ ಗ್ರೂಪ್ ನಿಂದ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ದೇಶದಾದ್ಯಂತ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ನೀಡುವ ಜೈಕಾ, ಈ ಹಿಂದೆ ನಿರ್ಮಾಣ ವೆಚ್ಚವನ್ನು ಭರಿಸಲು ಸಿದ್ಧವಾಗಿತ್ತು ಆದರೆ ಭೂ ಸ್ವಾಧೀನದ ವೆಚ್ಚ ಭರಿಸಲು ನಿರಾಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com