ಚುನಾವಣಾ ನೀತಿ ಸಂಹಿತೆ ಬಳಿಕ ನಾಡಗೀತೆ ಬಗ್ಗೆ ಅಂತಿಮ ತೀರ್ಮಾನ: ಸಚಿವ ಸುನೀಲ್‌ಕುಮಾರ್

ನಾಡಗೀತೆ ಸಮಯ ಕಡಿತ ಮಾಡುವ ವಿಚಾರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಈಗಾಗಲೇ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದ್ದು ಚುನಾವಣೆ ನೀತಿ ಸಂಹಿತರ ಬಳಿಕ ಈ ಬಗ್ಗೆ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಹೇಳಿದ್ದಾರೆ.
ಸಚಿವ ಸುನೀಲ್ ಕುಮಾರ್
ಸಚಿವ ಸುನೀಲ್ ಕುಮಾರ್

ಬೆಂಗಳೂರು: ನಾಡಗೀತೆ ಸಮಯ ಕಡಿತ ಮಾಡುವ ವಿಚಾರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಈಗಾಗಲೇ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದ್ದು ಚುನಾವಣೆ ನೀತಿ ಸಂಹಿತರ ಬಳಿಕ ಈ ಬಗ್ಗೆ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಯುಕ್ತ " ಮಾತಾಡ್ ಮಾತಾಡ್ ಕನ್ನಡ" ಶೀರ್ಷಿಕೆಯಡಿ ಅಭಿಯಾನಕ್ಕೆ ಲಾಲ್‌ಬಾಗ್‌ನಲ್ಲಿ ಚಾಲನೆ ನೀಡಿ ಸುದ್ದುಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್,ಕನ್ನಡಕ್ಕೆ ನಾವು ವಿಶೇಷ ಅಭಿಯಾನ ರಾಜ್ಯಾದ್ಯಂತ ಆರಂಭ ಆಗಿದೆ.ಮಾತಾಡ್ ಮಾತಾಡ್ ಸಂಕಲ್ಪದಡಿ ನವೆಂಬರ್ 1ರವರೆಗೂ ಅಭಿಯಾನ ಇರಲಿದೆ.

ರಾಜ್ಯದಲ್ಲಿ ಬೇರೆ ಭಾಷೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕನ್ನಡ ಬೆಳೆಸಬೇಕಾಗಿದೆ.ಒಂದು ವಾರಗಳ ಕಾಲ ಕನ್ನಡಕ್ಕಾಗಿ ಅಭಿಯಾನ ಆರಂಭ ಆಗಿದೆ.ನಾವು ಕುಟುಂಬದ ಸದಸ್ಯರ ಜೊತೆಗೆ ಕನ್ನಡ ಮಾತಾಡೋಣ.ಮಕ್ಕಳು ಹಾಗೂ ಕುಟುಂಬದ ನಡುವೆ ಕನ್ನಡ ಮಾತನಾಡುವುದು ಕಡಿಮೆ ಆಗುತ್ತಿದೆ.ಕನ್ನಡದಲ್ಲಿಯೇ ಸಹಿ ಮಾಡುವ ಅಭ್ಯಾಸ ‌ಮಾಡೋಣ.

ಎಲ್ಲಾ ಜಿಲ್ಲಾ, ತಾಲೂಕಿನಲ್ಲಿ ಕನ್ನಡ ಸಾಮೂಹಿಕ ಗಾಯನ ಹಮ್ಮಿಕೊಂಡಿದ್ದೇವೆ.ಕನ್ನಡದ ಮೂರು ಗೀತೆ ಹಾಡನ್ನು ಪ್ರತಿಯೊಬ್ಬರೂ ಹಾಡಬೇಕು.ಕನ್ನಡದ ಪ್ರೇಮ ಭಾಷಣದ ವಸ್ತು ಅಲ್ಲ.ಬೆಂಗಳೂರು ಕೆಂಪೇಗೌಡರಿಂದ ನಿರ್ಮಾಣದ ನಗರವಾಗಿದೆ.ಇಂದು ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಅಭಿಯಾನ ಮಾಡುತ್ತಿದ್ದೇವೆ ಎಂದರು.

ಮುಂದಿನ ಒಂದು ವಾರ ಕನ್ನಡ ಪಸರಿಸುವ ಕಾರ್ಯಕ್ರಮ ನಡೆಯಲಿದೆ.ಇವತ್ತು ಬೆಂಗಳೂರಿನಿಂದ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಶುರುಮಾಡಿದ್ದೇವೆ.ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಕನ್ನಡ ಭಾಷೆಗಳನ್ನು ಕನ್ನಡ ರಾಜ್ಯದಲ್ಲಿ ತಿಳಿಸಬೇಕು ಹೀಗಾಗಿ ಕನ್ನಡಕ್ಕಾಗಿ ಅಭಿಯಾನ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com