ಕೆರೆ ನಿರ್ವಹಣೆ, ಮಳೆನೀರು ಚರಂಡಿ ನೀರಿನ ಸಂಸ್ಕರಣೆಯಲ್ಲಿ ಅವ್ಯವಹಾರ: ಮಾಜಿ ಮೇಯರ್ ಆರೋಪ
ಕೆರೆಗಳ ನಿರ್ವಹಣೆ, ಮಳೆನೀರು ಚರಂಡಿಗಳು ಮತ್ತು ಚರಂಡಿಗಳ ನೀರಿನ ಸಂಸ್ಕರಣೆಯಲ್ಲಿನ ಬೃಹತ್ ಅವ್ಯವಹಾರಗಳು ನಡೆಯುತ್ತಿದೆ ಎಂದು ಮಾಜಿ ಮೇಯರ್ ಎನ್‌ಆರ್ ರಮೇಶ್ ಹೇಳಿದ್ದಾರೆ.
Published: 26th October 2021 11:28 AM | Last Updated: 26th October 2021 11:28 AM | A+A A-

ಬಿಬಿಎಂಪಿ ಕಚೇರಿ
ಬೆಂಗಳೂರು: ಕೆರೆಗಳ ನಿರ್ವಹಣೆ, ಮಳೆನೀರು ಚರಂಡಿಗಳು ಮತ್ತು ಚರಂಡಿಗಳ ನೀರಿನ ಸಂಸ್ಕರಣೆಯಲ್ಲಿನ ಬೃಹತ್ ಅವ್ಯವಹಾರಗಳು ನಡೆಯುತ್ತಿದೆ ಎಂದು ಮಾಜಿ ಮೇಯರ್ ಎನ್‌ಆರ್ ರಮೇಶ್ ಹೇಳಿದ್ದಾರೆ.
ಈ ಹಿಂದೆಯೂ ಇದೇ ರೀತಿ ಆರೋಪಿಸಿದ್ದ ರಮೇಶ್ ಅವರು ಇದೀಗ ಮತ್ತೊಮ್ಮೆ ಪಾಲಿಕೆ ಎಂಜಿನಿಯರ್ ಗಳ ವಿರುದ್ಧ ಅಂತಹುದೇ ಆರೋಪ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಜಿನಿಯರ್‌ಗಳು ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದು ಇದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಈ ಬಾರಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಉಲ್ಲೇಖಿಸಿದ ಅವರು, 2016 ರಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗಳು ಬೊಮ್ಮನಹಳ್ಳಿ ಮತ್ತು ಆರ್‌ಆರ್‌ನಗರದ ಕೆರೆಗಳಿಗೆ ಸಂಸ್ಕರಿಸದ ಚರಂಡಿ ಸೇರಿದಂತೆ 62.97 ಕೋಟಿ ರೂ. ಬಿಲ್ ಅನ್ನು ಉಲ್ಲೇಖಿಸಿದ್ದಾರೆ. ಲೆಕ್ಕಪರಿಶೋಧಕರು ಕಡತಗಳನ್ನು ಹುಡುಕಿದಾಗ, ಎಂಜಿನಿಯರ್‌ಗಳು ಕಡತಗಳು ಕಾಣೆಯಾಗಿವೆ ಎಂದು ಹೇಳಿ ವಿಷಯವನ್ನು ಪಕ್ಕಕ್ಕೆ ತಳ್ಳಿದರು.
ನಂತರ 2019 ರಲ್ಲಿ, ಇಂಜಿನಿಯರ್‌ಗಳು ಅದೇ ಪ್ರಕರಣದ 94 ಲಕ್ಷ ರೂ.ಗಳ ಬಿಲ್ ಅನ್ನು ತೋರಿಸಿದಾಗ ವಿಷಯ ಮತ್ತೆ ಬೆಳಕಿಗೆ ಬಂದಿತು. ಇದು ಮತ್ತೆ ಲೆಕ್ಕ ಪರಿಶೋಧಕರ ಗಮನ ಸೆಳೆದಿದ್ದು, ಕಡತ ನಾಪತ್ತೆಯಾದರೆ ಬಾಕಿ ಲೆಕ್ಕ ಹಾಕಿ ಕೋಟ್ ಮಾಡುವುದು ಹೇಗೆ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿದರು. ಸಿಎಜಿ ಮೂರು ತಿಂಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ ಎಂದು ಹೇಳಲಾಗಿದೆ. ಆದರೆ ಆ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗಿದೆ.
ಬಿಬಿಎಂಪಿ ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಸೇರಿ ತೆರಿಗೆದಾರರ ಕೋಟಿಗಟ್ಟಲೆ ಹಣವನ್ನು ಲಪಟಾಯಿಸುವುದು ಇದೇ ಮೊದಲಲ್ಲ. ಈ ಹಿಂದೆಯೇ ಸಾಕಷ್ಟು ಬಾರಿ ಆಗಿದೆ ಎಂದು ರಮೇಶ್ ಹೇಳಿದರು.
ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಇದು ಹೇಗೆ ಸಂಭವಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.