ಬಾಲಭವನಕ್ಕೆ 1980ರ ಲುಕ್: ಜೂನ್ 2022ಕ್ಕೆ ಆರಂಭ ಸಾಧ್ಯತೆ

ಕೇವಲ ಮಕ್ಕಳು ಮಾತ್ರವಲ್ಲದೆ 1980ರ ದಶಕದಲ್ಲಿ ಬೆಂಗಳೂರಿನಲ್ಲಿ ಬೆಳೆದ ವಯಸ್ಕರು ಕೂಡ ತಮ್ಮ ಬಾಲ್ಯವನ್ನು ತಮ್ಮ ಮಕ್ಕಳೊಂದಿಗೆ ಮೆಲುಕು ಹಾಕುವ ಅವಕಾಶ ಕಬ್ಬನ್ ಪಾರ್ಕ್ ನಲ್ಲಿ ಪುನಃಸ್ಥಾಪಿತಗೊಂಡಿರುವ ಬಾಲಭವನದಲ್ಲಿ ಶೀಘ್ರದಲ್ಲೇ ಸಿಗಲಿದೆ.
ಬಾಲಭವನದಲ್ಲಿ ಪ್ರವಾಸಿಗರು ಫೋಟೋ ತೆಗೆದುಕೊಳ್ಳುತ್ತಿರುವುದು.
ಬಾಲಭವನದಲ್ಲಿ ಪ್ರವಾಸಿಗರು ಫೋಟೋ ತೆಗೆದುಕೊಳ್ಳುತ್ತಿರುವುದು.

ಬೆಂಗಳೂರು: ಕೇವಲ ಮಕ್ಕಳು ಮಾತ್ರವಲ್ಲದೆ 1980ರ ದಶಕದಲ್ಲಿ ಬೆಂಗಳೂರಿನಲ್ಲಿ ಬೆಳೆದ ವಯಸ್ಕರು ಕೂಡ ತಮ್ಮ ಬಾಲ್ಯವನ್ನು ತಮ್ಮ ಮಕ್ಕಳೊಂದಿಗೆ ಮೆಲುಕು ಹಾಕುವ ಅವಕಾಶ ಕಬ್ಬನ್ ಪಾರ್ಕ್ ನಲ್ಲಿ ಪುನಃಸ್ಥಾಪಿತಗೊಂಡಿರುವ ಬಾಲಭವನದಲ್ಲಿ ಶೀಘ್ರದಲ್ಲೇ ಸಿಗಲಿದೆ.

1980ರಲ್ಲಿ ಕಂಗೊಳಿಸುತ್ತಿದ್ದ ಬಾಲಭವನವನ್ನು ಅದೇ ರೀತಿಯಲ್ಲೇ ನಿರ್ಮಾಣ ಮಾಡಲು ಬಾಲ ಭವನ ಸೊಸೈಟಿ ಹಾಗೂ ಸ್ಮಾರ್ಟ್ ಸಿಟಿ ಮಿಷನ್ ತಂಡವು ಮುಂದಾಗಿದ್ದು, ಈ ಬಾಲಭವನವು 2022ರ ಜೂನ್ ನಲ್ಲಿ ಆರಂಭವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಬಾಲಭವನಕ್ಕೆ 1980ರ ಲುಕ್ ನೀಡುವ ಸಲುವಾಗಿ ಅಧಿಕಾರಿಗಳು ಇದೀಗ ಅಂದಿನ ಫೋಟೋಗಳು ಹಾಗೂ ಇತರೆ ಮಾಹಿತಿಗಳನ್ನು ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಮತ್ತು ಸೊಸೈಟಿ ಸದಸ್ಯರು ಕಲೆಹಾಕುತ್ತಿದ್ದಾರೆ. ಅಲ್ಲದೆ, ಈ ಕುರಿತು ಬೆಂಗಳೂರು ನಿವಾಸಿಗಳ ಪ್ರತಿಕ್ರಿಯಗಳನ್ನೂ ಕೂಡ ಸಂಗ್ರಹಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಆರಂಭದಲ್ಲಿ ಯೋಜನೆಯ ವೆಚ್ಚವನ್ನು ರೂ.6 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ಸಂಪೂರ್ಣ ಯೋಜನೆ ಚಿತ್ರಣಗಳು ಕೈಸೇರದ ಪರಿಣಾಮ ಯೋಜನೆಯ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು  ಬೆಂಗಳೂರು ಸ್ಮಾರ್ಟ್ ಸಿಟಿ ಮಿಷನ್ ಲಿಮಿಟೆಡ್, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಹೇಳಿದ್ದಾರೆ.

ಈ ಯೋಜನೆಯು ಈ ಹಿಂದಿನ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಯಲ್ಲಿರಲಿಲ್ಲ. 2 ತಿಂಗಳ ಹಿಂದಷ್ಟೇ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದೀಗ ಯೋಜನೆ ಕುರಿತು ಸಮೀಕ್ಷೆಗಳೂ ಕೂಡ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು ಅವರು ಮಾತನಾಡಿ, ಹೊಸ ಯೋಜನೆಯಲ್ಲಿ ಭೂಮಿ ಮತ್ತು ಮೂಲ ರಚನೆಯು ಬದಲಾಗುವುದಿಲ್ಲ. ಆದರೆ, ಮಾದರಿಗಳು ಮಾತ್ರ ಬದಲಾಗುತ್ತವೆ. ಮಕ್ಕಳಿಗೆ ಆಟದ ಸಲಕರಣೆಗಳನ್ನು ಒದಗಿಸಲಾಗುತ್ತದೆ. ಆಟಿಕೆ ರೈಲುಗಳು, ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಆನ್ ಲೈನ್ ಟಿಕೆಟ್ ವ್ಯವಸ್ಥೆಯನ್ನೂ ಕೂಡ ಸ್ಥಾಪಿಸಲಾಗುತ್ತಿದೆ. ಬೋಟಿಂಗ್'ನ್ನೂ ಕೂಡ ಪರಿಚಯಿಸಲಾಗುತ್ತದೆ. ಸಮ್ಮರ್ ಕ್ಯಾಂಪ್ (ಬೇಸಿಗೆ ಶಿಬಿರ) ಮರು ಸ್ಥಾಪಿಸಲಾಗುತ್ತದೆ. ಮಕ್ಕಳು ಆಡುವಾಗ ಕುಳಿತು ನೋಡಲು ಪೋಷಕರಿಗೆ ಆಸನಗಳು, ವಾಕಿಂಗ್ ಟ್ರ್ಯಾಕ್‌ನಲ್ಲಿ ಬೆಣಚುಕಲ್ಲುಗಳಿರುತ್ತವೆ, ಇದರಿಂದ ಅಂಬೆಗಾಲಿಡುವ ಮಕ್ಕಳು ಮತ್ತು ಹಿರಿಯ ನಾಗರಿಕರು ತೊಂದರೆಯಿಲ್ಲದೆ ನಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಬಾಲಭವನದಲ್ಲಿರುವ ಸಾಕಷ್ಟು ಆಟಿಕೆ ವಸ್ತುಗಳು ಹಾನಿಗೀಡಾಗಿದ್ದು, ಕಬ್ಬಿಣದ ಆಟಿಕೆ ವಸ್ತುಗಳು ತುಕ್ಕು ಹಿಡಿವೆ. ಹೀಗಾಗಿ ಎಲ್ಲವನ್ನೂ ಹೊಸದಾಗಿ ಸ್ಥಾಪನೆ ಮಾಡಬೇಕಿದೆ. ಈ ಹಿಂದೆ ಇದ್ದಂತೆ ಈ ಪ್ರದೇಶದಲ್ಲಿ ಕುದುರೆ ಸವಾರಿಯನ್ನು ಪರಿಚಯಿಸುವ ಕುರಿತು ಇಲಾಖೆಗಳ ಅಧಿಕಾರಿಗಳು, ಕಾರ್ಯಕರ್ತರು, ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com