ಕ್ಲಿನಿಕ್ ಗಳಿಗೆ ಬರುವ ಸಾರಿ, ಐಎಲ್ಐ ಲಕ್ಷಣಗಳುಳ್ಳ ವ್ಯಕ್ತಿಗಳಿಗೆ ಕೋವಿಡ್ ಪರೀಕ್ಷೆ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದು, ಈ ನಡುವೆ ಮತ್ತೆ ಸೋಂಕು ಏರಿಕೆಯಾಗದಂತೆ ಮಾಡಲು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದರಂತೆ ಖಾಸಗಿ ಕ್ಲಿನಿಕ್ ಗಳಿಗೆ ಬರುವ ಸಾರಿ ಹಾಗೂ ಐಎಲ್ಐ ಲಕ್ಷಣಗಳುಳ್ಳ ವ್ಯಕ್ತಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದು, ಈ ನಡುವೆ ಮತ್ತೆ ಸೋಂಕು ಏರಿಕೆಯಾಗದಂತೆ ಮಾಡಲು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದರಂತೆ ಖಾಸಗಿ ಕ್ಲಿನಿಕ್ ಗಳಿಗೆ ಬರುವ ಸಾರಿ ಹಾಗೂ ಐಎಲ್ಐ ಲಕ್ಷಣಗಳುಳ್ಳ ವ್ಯಕ್ತಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಖಾಸಗಿ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಅಲ್ಲಿಗೆ ಬರುವ ಸಾರಿ ಹಾಗೂ ಐಎಲ್ಐ ಲಕ್ಷಣಗಳಿರುವ ಜನರಿಗೆ ಕೋವಿಡ್ ಪರೀಕ್ಷೆ ನಡೆಸುವಂತೆ ನಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಸಾರಿ ಹಾಗೂ ಐಎಲ್ಐ ಲಕ್ಷಣಗಳಿರುವ ಜನರು ಮೊದಲು ಸ್ಥಳೀಯ ಕ್ಲಿನಿಕ್ ಗಳಿಗೆ ಹೋಗುತ್ತಾರೆ. ಅಲ್ಲಿಯೇ ಅವರಿಗೆ ಪರೀಕ್ಷೆಗಳನ್ನು ಮಾಡುವ ಕೆಲಸ ಮಾಡಿದರೆ, ಕೋವಿಡ್ ನ್ನು ನಿಯಂತ್ರಿಸಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.

ಈ ಹಿಂದೆ ಹೆಚ್ಚು ಸೋಂಕಿರುವ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಿಸಿ, ಪರೀಕ್ಷೆ ನಡೆಸಲು ಬಿಬಿಎಂಪಿ ಸೂಚನೆ ನೀಡಿತ್ತು.

ಕೊಳಚೆ ನೀರು ಎಲ್ಲಾ ಮಿಶ್ರಣವಾಗಿದೆ. ಹೀಗಾಗಿ ವೈರಲ್ ಲೋಡ್‌ ಕುರಿತು ಸ್ಪಷ್ಟ ಮಾಹಿತಿಗಾಗಿ ವಾರ್ಡ್ ಮಟ್ಟದಲ್ಲಿನ ಒಳಚರಂಡಿ ಮಾದರಿಗಳನ್ನು ಪರೀಕ್ಷಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ರೋಗಲಕ್ಷಣವಿಲ್ಲದ ರೋಗಿಗಳು ಕೂಡ ವೈರಸ್ ನ್ನು ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಕ್ರಮ ಕೈಗೊಳ್ಳಲು ಇದು ನಮಗೆ ಸಹಾಯ ಮಾಡಲಿದೆ ಎಂದು ತ್ರಿಲೋಕ್ ಚಂದ್ರ ಅವರು ತಿಳಿಸಿದ್ದಾರೆ.

ಬಿಬಿಎಂಪಿ ವಾರ್ ರೂಮ್ ಅಂಕಿಅಂಶಗಳ ಪ್ರಕಾರ, ದೊಡ್ಡನೆಕುಂದಿ, ಬೆಳ್ಳಂದೂರು, ಬೇಗೂರು, ಹೂಡಿ, ರಾಜರಾಜೇಶ್ವರಿ ನಗರ, ವರ್ತೂರು, ಹೊಸ ತಿಪ್ಪಸಂದ್ರ, ಹೊರಮಾವು, ಎಚ್‌ಎಸ್‌ಆರ್ ಲೇಔಟ್ ಮತ್ತು ವಸಂತಪುರದಲ್ಲಿ ಕಳೆದ 10 ದಿನಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ನಗರದ ಎಲ್ಲಾ ಎಂಟು ವಲಯಗಳಲ್ಲಿ 57 ಸಕ್ರಿಯ ಕಂಟೈನ್‌ಮೆಂಟ್ ವಲಯಗಳಿದ್ದು, ಬಿಬಿಎಂಪಿ ಈ ವರೆಗೂ 2.12 ಕೋಟಿ  (2,12,80,217) ಕೋವಿಡ್ -19 ಪರೀಕ್ಷೆಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ. ದೈನಂದಿನ ಪರೀಕ್ಷೆಗಳು 36,000 ಮತ್ತು 52,000 ನಡುವೆ ಇರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com