ದೇಶದಲ್ಲೇ ಮೊದಲು: ಇ-ಬೈಕ್ ಮೂಲಕ ಅಂಚೆ ಸಿಬ್ಬಂದಿಗಳಿಂದ ಡೆಲಿವರಿ!

ದೇಶದಲ್ಲೇ ಮೊದಲು ಎಂಬಂತೆ ಬೆಂಗಳೂರಿನ ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳು ಇ-ಬೈಕ್ ಮೂಲಕ ಪೋಸ್ಟ್ ಗಳನ್ನು ಡೆಲಿವರಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ.
ಇ-ಬೈಕ್ ನಲ್ಲಿ ಅಂಚೆ ಸಿಬ್ಬಂದಿ
ಇ-ಬೈಕ್ ನಲ್ಲಿ ಅಂಚೆ ಸಿಬ್ಬಂದಿ

ಬೆಂಗಳೂರು: ದೇಶದಲ್ಲೇ ಮೊದಲು ಎಂಬಂತೆ ಬೆಂಗಳೂರಿನ ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳು ಇ-ಬೈಕ್ ಮೂಲಕ ಪೋಸ್ಟ್ ಗಳನ್ನು ಡೆಲಿವರಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ.

ಬೆಂಗಳೂರಿನ ಜೆಪಿನಗರದ ಉಪ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಎಲೆಕ್ಟ್ಕಿಕ್ ಬೈಕ್ ಒದಗಿಸಲಾಗಿದ್ದು, ಅವರು ಅದರ ಮೂಲಕ ಪೋಸ್ಚ್ ಗಳನ್ನು ಡೆಲಿವರಿ ಮಾಡಲಿದ್ದಾರೆ. ಈ ಅಂಚೆ ಕಛೇರಿಯಲ್ಲಿ ಒಟ್ಟು 15 ಪೋಸ್ಟ್‌ಮೆನ್ ಮತ್ತು ಪೋಸ್ಟ್‌ವುಮೆನ್‌ಗಳು ಹದಿನೈದು ದಿನಗಳಿಂದ ನೀಲಿ ಬಣ್ಣದ ಯುಲು ಬೈಕ್‌ಗಳಲ್ಲಿ ಪೋಸ್ಟ್ ಗಳನ್ನು ಸಂಬಂಧಪಟ್ಟವರಿಗೆ ವಿತರಣೆ ಮಾಡುತ್ತಿದ್ದಾರೆ.

ಪೋಸ್ಟ್‌ಮಾಸ್ಟರ್ ಜನರಲ್, ಬೆಂಗಳೂರು ವಲಯದ ಎಲ್‌ಕೆ ಡ್ಯಾಶ್ ಅವರು ಈ ಬಗ್ಗೆ ಮಾತನಾಡಿದ್ದು, 'ಅಕ್ಟೋಬರ್ 14 ರಂದು ನಮ್ಮ ಅಂಚೆ ವಾರದ ಆಚರಣೆಯ ಸಂದರ್ಭದಲ್ಲಿ ನಾವು ಈ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ.  ಇದು ಯಶಸ್ವಿಯಾದರೆ ನಾವು ನಗರದ ಇತರ ಅನೇಕ ಅಂಚೆ ಕಚೇರಿಗಳಿಗೂ ಇದನ್ನು ವಿಸ್ತರಿಸಲು ಯೋಜಿಸುತ್ತಿದ್ದೇವೆ. ಪ್ರಸ್ತುತ, ವಾಹನಗಳನ್ನು ರೀಚಾರ್ಜ್ ಮಾಡಲು ಪ್ರತಿದಿನ ಯುಲು ಮೂಲಕ ಹಿಂತಿರುಗಿಸಬೇಕಾಗಿದೆ ಎಂದು ಹೇಳಿದರು.

"ಐಟಂಗಳನ್ನು ವಿತರಿಸಲು ಇಂಧನ-ಚಾಲಿತ ದ್ವಿಚಕ್ರ ವಾಹನಗಳನ್ನು ಬಳಸುವುದಕ್ಕೆ ಹೋಲಿಸಿದರೆ ಇದು ಆರ್ಥಿಕವಾಗಿ ಉತ್ತಮ ಪ್ರತಿಪಾದನೆಯಾಗಿದೆಯೇ ಎಂದು ಪರಿಶೀಲಿಸಲು ಈ ಕ್ರಮವನ್ನು ನಿರ್ಣಯಿಸಲಾಗುತ್ತಿದೆ ಎಂದು ಡ್ಯಾಶ್ ಹೇಳಿದರು. ಭವಿಷ್ಯದಲ್ಲಿ ಅಂಚೆ ಕಚೇರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯುಲು ಸಂಸ್ಥೆ ಪ್ರಸ್ತಾಪಿಸಿದೆ ಎಂದು ಅವರು ಮಾಹಿತಿ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com