ಕೆಆರ್ ಎಸ್ ಜಲಾಶಯ ಭರ್ತಿ: ತಮಿಳುನಾಡಿನ ಕ್ಯಾತೆಯಿಂದಾಗಿ ರೈತರಿಗಿಲ್ಲ ನೀರು!

ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಕೆ ಆರ್ ಎಸ್ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಕೃಷ್ಣರಾಜ ಸಾಗರ ಜಲಾಶಯ
ಕೃಷ್ಣರಾಜ ಸಾಗರ ಜಲಾಶಯ

ಮೈಸೂರು: ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಕೆ ಆರ್ ಎಸ್ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯವು ಕೊಡಗು ಮತ್ತು ಮೈಸೂರು ಜಲಾನಯನ ಪ್ರದೇಶಗಳಲ್ಲಿ ಭಾರೀ ಅಕಾಲಿಕ ಮಳೆಗೆ ತುಂಬಿ ತುಳುಕುತ್ತಿದೆ. 

ಆದರೆ ಕರ್ನಾಟಕವು "ಹೆಚ್ಚುವರಿ" ನೀರನ್ನು ಬಳಸುವುದನ್ನು ನೆರೆಯ ತಮಿಳುನಾಡು ವಿರೋಧಿಸಿದ ನಂತರ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ರೈತರಿಗೆ ಎರಡನೇ ಭತ್ತದ ಬೆಳೆಗೆ ನೀರು ಸಿಗುವ ಸಾಧ್ಯತೆ ಇಲ್ಲದಿರುವುದರಿಂದ ರೈತರ ಮೊಗದಲ್ಲಿ ಬೇಸರ ಮೂಡಿದೆ. ಬುಧವಾರದ ವೇಳೆಗೆ ನೀರಿನ ಮಟ್ಟ 120 ಅಡಿಯಿಂದ 124.16 ಅಡಿಗಳಿಗೆ ಏರಿಕೆಯಾಗಿದ್ದು, ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟಿತ್ತು.

ತಮಿಳುನಾಡಿನ ಆಕ್ಷೇಪಣೆಯಿಂದಾಗಿ ನಮಗೆ ಕೈ ಕಟ್ಟಿ ಹೋಗಿದೆ ಎಂದು ಹೆಸರು ಹೇಳಲಿಚ್ಛಿಸದ ಕರ್ನಾಟಕದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಜಲಾಶಯದಲ್ಲಿ ಸಾಕಷ್ಟು ಸಂಗ್ರಹವಿರುವಾಗ ರೈತರ ಬೆಳೆಗಳಿಗೆ ನೀರು ನಿರಾಕರಿಸುವುದು ಕಷ್ಟ ಎಂದು ಅವರು ಒಪ್ಪಿಕೊಂಡರು. 

2020-2021 ರ ಕಾವೇರಿ ಜಲಾನಯನ ಪ್ರದೇಶದ ವಾರ್ಷಿಕ ನೀರಿನ ಲೆಕ್ಕವನ್ನು ಆಧರಿಸಿ, ತಮಿಳುನಾಡು ಕಾವೇರಿ ನೀರು ನಿಯಂತ್ರಣ ಸಮಿತಿಯ ಮುಂದೆ ಆಕ್ಷೇಪಣೆ ಸಲ್ಲಿಸಿತ್ತು, ಖಾರಿಫ್ ಋತುವಿನಲ್ಲಿ ಕರ್ನಾಟಕವು 2.178 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ನಿಗದಿ ಪಡಿಸಿತ್ತು, ಆದರೆ ಕರ್ನಾಟಕ 38.98 ಟಿಎಂಸಿ ಅಡಿ ನೀರನ್ನು ಬಳಸಿದೆ ಎಂದು ಆರೋಪಿಸಿದೆ.

ಸಣ್ಣ ನೀರಾವರಿ ಯೋಜನೆಗಳಾದ ಕಣ್ವ, ಚಿಕ್ಕಹೊಳೆ, ಸುವರ್ಣಾವತಿ, ಯಗಚಿ, ಗುಂಡಾರ್, ವೋಟೆಹೊಳೆ, ಮಂಚನಬೆಲೆ ಮತ್ತು ನಲ್ಲೂರು ಅಮಾನಿಕೆರೆ ಯೋಜನೆಗಳಲ್ಲಿ ನೀರು ಬಳಕೆ ಶೂನ್ಯ ಎಂದು ಕರ್ನಾಟಕ ಹೇಳಿಕೊಂಡಿದ್ದರೂ, ಯಾವುದೇ ಪೂರಕ ನೀರಾವರಿ ಇಲ್ಲದೆ  ಖಾರಿಫ್ ಬೆಳೆಯನ್ನು ಬೆಳೆಯಲು ಮಳೆ ಉತ್ತಮವಾಗಿದೆ ಎಂದು ತೋರಿಸುತ್ತದೆ.

 ಏತ  ನೀರಾವರಿ ಯೋಜನೆಗಳನ್ನು ಉಲ್ಲೇಖಿಸಿದ ತಮಿಳುನಾಡು, ಕರ್ನಾಟಕವು 11.645 ಟಿಎಂಸಿ ಅಡಿ ನೀರನ್ನು ಬಳಸುವುದರೊಂದಿಗೆ 1,36, 279 ಎಕರೆಗಳನ್ನು ವ್ಯಾಪಿಸಿದೆ ಎಂದು ಹೇಳಿಕೊಂಡಿದೆ. 

ಫೆಬ್ರವರಿ 5, 2007 ರಂದು ತನ್ನ ಅಂತಿಮ ತೀರ್ಪು ಪ್ರಕಟಿಸಿರುವ ಟ್ರಿಬ್ಯೂನಲ್ ಏತ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಿಲ್ಲ, ಏಕೆಂದರೆ ಅಂತಹ 25 ಯೋಜನೆಗಳ ಅಡಿಯಲ್ಲಿ ಕರ್ನಾಟಕದ ನೀರಾವರಿ ಪ್ರದೇಶವನ್ನು 18.85 ಲಕ್ಷ ಎಕರೆಗಳಿಗೆ ನಿಗದಿಪಡಿಸಲಾಗಿದೆ. ಏತ ನೀರಾವರಿ ಯೋಜನೆಗಳಿಗೆ 11.645 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ಬಗ್ಗೆ ವಿವರಗಳನ್ನು ನೀಡಿಲ್ಲ ಎಂದು ಆರೋಪಿಸಿದೆ.

ಸಣ್ಣ ನೀರಾವರಿ ಯೋಜನೆಗಳ ಅಡಿಯಲ್ಲಿ, ಕರ್ನಾಟಕವು 3,30,000 ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಅನುಮತಿ ನೀಡಿದೆ, ಆದರೆ ಕರ್ನಾಟಕವೂ 46,933 ಎಕರೆಗಳಷ್ಟು ಹೆಚ್ಚಿಸಿಕೊಂಡಿದೆ. ಅಲ್ಲದೆ, ಕೆಆರ್‌ಎಸ್ ಜಲಾನಯನ ಪ್ರದೇಶದಲ್ಲಿ 62,000 ಎಕರೆ ಹೆಚ್ಚು ಕೃಷಿಗೆ ಒಳಪಟ್ಟಿದೆ, ಇದು ಖಾರಿಫ್ ಹಂಗಾಮಿನ ಬೆಳೆ ಪದ್ಧತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಮಿಳುನಾಡು ಪ್ರತಿಪಾದಿಸಿದೆ. ಕರ್ನಾಟಕವು ನಿಜವಾದ ಬೆಳೆ ಮಾದರಿಯನ್ನು ಒದಗಿಸಬೇಕೆಂದು ಒತ್ತಾಯಿಸಿದೆ. ಕುಡಿಯುವ ನೀರಿನ ಯೋಜನೆಗಳನ್ನು ಉಲ್ಲೇಖಿಸಿರುವ ತಮಿಳುನಾಡು,  ಕರ್ನಾಟಕವು 6.716 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದರೂ, ಬೆಂಗಳೂರಿಗೆ 18.876  ಟಿಎಂಸಿ ಅಡಿ ನೀರನ್ನು ಬಳಸಿಕೊಂಡಿದೆ.

ವಿಶ್ವೇಶ್ವರಯ್ಯ ಕಾಲುವೆ ಪ್ರದೇಶ ಮತ್ತು ಹಿಂಗಾರು ಭಾಗದ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಕಬ್ಬು ಬೆಳೆದಿದ್ದಾರೆ. ಸಣ್ಣ ಕಾಲುವೆಗಳ ವ್ಯಾಪ್ತಿಯ ರೈತರು ಒಂದು ಭತ್ತದ ಬೆಳೆ ಮತ್ತು ರಬಿ ಹಂಗಾಮಿನಲ್ಲಿ  ಒಣ ಬೆಳೆಗಳಿಗೆ ಹೋಗುವಂತೆ ಸೂಚಿಸಲಾಗಿದೆ ಎಂದು ರಾಜ್ಯ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com