ರಿಂಗ್ ರೋಡ್ ಯೋಜನೆಯಲ್ಲಿ ಭಾರೀ ವಿಳಂಬ ಮಾಡುತ್ತಿರುವ ಬಿಡಿಎಗೆ ಸುಪ್ರೀಂ ತರಾಟೆ

ಪೆರಿಫೆರಲ್ ರಿಂಗ್ ರೋಡ್(ಪಿಆರ್‌ಆರ್) ಯೋಜನೆ ಸಿದ್ಧಪಡಿಸುವಲ್ಲಿ ಭಾರಿ ವಿಳಂಬ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೆರಿಫೆರಲ್ ರಿಂಗ್ ರೋಡ್(ಪಿಆರ್‌ಆರ್) ಯೋಜನೆ ಸಿದ್ಧಪಡಿಸುವಲ್ಲಿ ಭಾರಿ ವಿಳಂಬ ಮಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನಿವೇಶನ ಹಂಚಿಕೆಯಲ್ಲಿ ಭಾಗಿಯಾಗಿರುವ ಮತ್ತು ವ್ಯತಿರಿಕ್ತವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಬಿಡಿಎಗೆ ಸೂಚಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ V/s ಕರ್ನಾಟಕ ರಾಜ್ಯ ಮತ್ತು ಇತರ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರು ರಿಂಗ್ ರೋಡ್ ಯೋಜನೆ ವಿಳಂಬಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ಶಿವರಾಮ ಕಾರಂತ್ ಲೇಔಟ್‌ಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರು ವರ್ಚುವಲ್ ಮೂಲಕ ಹಾಜರಾಗಿದ್ದರು.

21,091 ಕೋಟಿ ರೂ.ಗಳ ಪಿಆರ್‌ಆರ್ ಶಿವರಾಮ ಕಾರಂತ್ ಲೇಔಟ್ ಮೂಲಕ ಹಾದುಹೋಗುತ್ತದೆ ಎಂದು ಬಿಡಿಎ ಉನ್ನತ ಮೂಲಗಳು ತಿಳಿಸಿವೆ.

15 ವರ್ಷಗಳ ಹಿಂದೆ ಪ್ರಸ್ತಾಪಿಸಲಾದ ರಿಂಗ್ ರೋಡ್ ಯೋಜನೆಯಲ್ಲಿ ಬಿಡಿಎ ಸಾಧಿಸಿದ ಪ್ರಗತಿಯನ್ನು ನ್ಯಾಯಾಲಯವು ಪ್ರಶ್ನಿಸಿದೆ. ನೀವು 2006 ರಿಂದ ಬೆಂಗಳೂರಿನ ಜನರಿಗೆ ಭರವಸೆ ನೀಡುತ್ತಿದ್ದೀರಿ. ಭರವಸೆಗಳನ್ನು ನೀಡುವುದನ್ನು ಹೊರತುಪಡಿಸಿ ನೀವು ಇಲ್ಲಿಯವರೆಗೆ ಏನು ಮಾಡಿದ್ದೀರಿ. ನಾವು 2021 ರಲ್ಲಿ ಇದ್ದೇವೆ ಮತ್ತು 25 ವರ್ಷಗಳ ನಂತರವೂ ಸುರಂಗದ ಕೊನೆಯಲ್ಲೂ ನನಗೆ ಬೆಳಕು ಕಾಣಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

"ನಿಮ್ಮ ಕರ್ತವ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅದನ್ನು SPV ಗೆ ತಲುಪಿಸುವುದು ಮಾತ್ರ." ಕಾರಂತ್‌ ಲೇಔಟ್‌ಗೆ ಭೂಸ್ವಾಧೀನ ಪ್ರಕ್ರಿಯೆ ಕುಂಠಿತಗೊಂಡಿದೆ ಎಂದು ಹೇಳಿದ ನ್ಯಾಯಾಲಯ, ಪ್ರತಿ ಶುಕ್ರವಾರ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರತಿ ಸೋಮವಾರದಂದು ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಗೆ ವಿವರ ಸಲ್ಲಿಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com