ಹಾಸನಾಂಬೆ ದೇವಿ ದರ್ಶನಕ್ಕೆ 8 ದಿನ ಮಾತ್ರ ಅವಕಾಶ

ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ಒಟ್ಟು ಎಂಟು ದಿನ ಸಾರ್ವಜನಿಕರಿಗೆ ಪ್ರವೇಶ ಲಭ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ಒಟ್ಟು ಎಂಟು ದಿನ ಸಾರ್ವಜನಿಕರಿಗೆ ಪ್ರವೇಶ ಲಭ್ಯವಾಗಿದೆ.

ದೇವಾಲಯ 10 ದಿನ ತೆರೆಯಲಿದ್ದರೂ ಭಕ್ತರಿಗೆ ಮಾತ್ರ ಕೇವಲ 8 ದಿನಗಳಿಗೆ ಮಾತ್ರ ದರ್ಶನ ಅವಕಾಶವಿದೆ.ಹಾಸನಾಂಬೆ ದರ್ಶನಕ್ಕೆ ಬೇರೆ ಬೇರೆ, ರಾಜ್ಯಗಳಿಂದಲೂ ಜನತೆ ಬರುತ್ತಿರುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಕಳೆದ ಬಾರಿ ದರ್ಶನವನ್ನುಕೇವಲ ಆನ್‌ಲೈನ್‌ ಗೆ ಸೀಮಿತಗೊಳಿಸಲಾಗಿತ್ತು.

ಆದರೆ ಈ ಬಾರಿ ಭಕ್ತರ ಮನವಿ ಮೇರೆಗೆ ಜಿಲ್ಲಾಡಳಿತ ಈ ಬಾರಿ ನೇರವಾಗಿ ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.ಭಕ್ತರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು.ಎಂದೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದೇ 28ರಿಂದ ನ.6ರವರೆಗೆ ಜರುಗಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com