ಬೆಂಗಳೂರು: ನಿಂತಿದ್ದ ಲಾರಿಗೆ ಆಟೋ ಡಿಕ್ಕಿ, ಮಹಿಳೆ ಸಾವು

ನಿಂತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ಸದಾಶಿವನಗರದ ಸಿವಿ ರಾಮನ್ ರಸ್ತೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ನಿಂತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ಸದಾಶಿವನಗರದ ಸಿವಿ ರಾಮನ್ ರಸ್ತೆಯಲ್ಲಿ ನಡೆದಿದೆ.

43 ವರ್ಷದ ಮಹಿಳೆಯು ತನ್ನ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಪ್ರಯಾಣಿಸುತ್ತಿದ್ದ ಆಟೋ ರಸ್ತೆ ಬದಿಯಲ್ಲಿ ನಿಂತಿದ್ದ ಸಿಮೆಂಟ್ ಮಿಕ್ಸರ್ ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ಇಂಡಿಕೇಟರ್ ಹಾಕಿರಲಿಲ್ಲ ಎಂದು ಆರೋಪಿಸಲಾಗಿದೆ.

ಯಾಸೀನ್ ಖಾನ್ ಅವರ ಪತ್ನಿ ಮುಬೀನಾ ಮೃತ ದುರ್ದೈವಿ,  ನಂದಿನಿ ಲೇಔಟ್ ನಿವಾಸಿಗಳಾಗಿದ್ದಾರೆ, ಗಾಯಗೊಂಡವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಆಟೋ ಓಡಿಸುತ್ತಿದ್ದ ಯಾಸಿನ್ ಖಾನ್, ಶಿವಾಜಿನಗರದ ಹೊಸ ಮನೆಗೆ ಶಿಫ್ಟ್ ಆಗಿದ್ದರು.

ಆಟೋ ಮೇಖ್ರಿ ಸರ್ಕಲ್ ಕಡೆಗೆ ಹೋಗುತ್ತಿತ್ತು. ಇದೇ ವೇಳೆ ಸಿವಿಲ್ ಗುತ್ತಿಗೆದಾರರೊಬ್ಬರ ಲಾರಿ ಚಾಲಕ ರಸ್ತೆಯಲ್ಲೇ ವಾಹನ ನಿಲ್ಲಿಸಿದ್ದರು. ಕತ್ತಲೆಯಾದ ಕಾರಣ ಪಾರ್ಕಾ ಮಾಡಿದ ಟ್ರಕ್ ಅನ್ನು ಯಾಸೀನ್ ಖಾನ್ ಗಮನಿಸದೆ ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಮುಬೀನಾ ಹೊರ ಹಾರಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com