ಮಣ್ಣಲ್ಲಿ ಮಣ್ಣಾದ ಕನ್ನಡಿಗರ ಕಣ್ಮಣಿ 'ಅಪ್ಪು': ಸಿಎಂ ಬಸವರಾಜ ಬೊಮ್ಮಾಯಿ ಭಾವಪೂರ್ಣ ವಿದಾಯ 

ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಪುನೀತ್ ರಾಜ್ ಕುಮಾರ್ ಗೆ ಭಾವಪೂರ್ಣ ವಿದಾಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಪುನೀತ್ ರಾಜ್ ಕುಮಾರ್ ಗೆ ಭಾವಪೂರ್ಣ ವಿದಾಯ

ಬೆಂಗಳೂರು: ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವು ಸಚಿವರು, ರಾಜಕೀಯ ಮುಖಂಡರು, ಗಣ್ಯರು, ಸಿನಿಮಾ ತಾರೆಯರು ಈ ಸಂದರ್ಭದಲ್ಲಿ ಹಾಜರಿದ್ದು ನೆಚ್ಚಿನ ನಟನಿಗೆ ಕಂಬನಿಧಾರೆಯಿಂದ ಅಂತಿಮ ವಿದಾಯ ಹೇಳಿದರು.

ಸಿಎಂ ಬೊಮ್ಮಾಯಿಯವರಂತೂ ಬಹಳ ಭಾವುಕರಾಗಿ ಪುನೀತ್ ಅವರ ಹಣೆಗೆ ಮುತ್ತಿಟ್ಟರು. ಆ ದೃಶ್ಯ ಮನಕಲಕುವಂತಿದೆ. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ, ಪುತ್ರಿಯರು ಸೇರಿದಂತೆ ಅವರ ಕುಟುಂಬಸ್ಥರು ಹಾಜರಿದ್ದು ಅವರ ದುಃಖ ಹೇಳತೀರಲಾಗಿದೆ. 

ಇದಕ್ಕೂ ಮುನ್ನ ಇಂದು ಬೆಳಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ಹಠಾತ್ ನಿಧನ ನನಗೆ ವೈಯಕ್ತಿಕವಾಗಿ ನಷ್ಟ. ಅದ್ಭತ ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ ಎಂದರು.

ನನಗೆ ಡಾ ರಾಜ್ ಕುಟುಂಬ ಜೊತೆ ಹಿಂದಿನಿಂದಲೂ ವೈಯಕ್ತಿಕ ಆತ್ಮೀಯ ಸಂಬಂಧವಿತ್ತು. ಅಪ್ಪು ಜೊತೆ ಕೂಡ ನನಗೆ ಬಹಳ ಉತ್ತಮ ಒಡನಾಟವಿತ್ತು. ಆತ ಚಿಕ್ಕ ಹುಡುಗನಾಗಿದ್ದಾಗಿನಿಂದಲೇ ನೋಡುತ್ತಿದ್ದೇನೆ. ಆಗಿನಿಂದಲೇ ನಮಗೆ ಸಂಬಂಧವಿದೆ. ಹೀಗಾಗಿ ನಾನು ಆತನಿಗೆ ಅಂತಿಮ ವಿದಾಯ ಹೇಳುತ್ತೇನೆ. ನನಗೆ ನಿಜಕ್ಕೂ ಈ ಎರಡ್ಮೂರು ದಿನಗಳು ಅತ್ಯಂತ ಭಾವುಕನಾಗಿದ್ದೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com