ಕುಸಿದ ಬೇಡಿಕೆ, ಸಾಂಕ್ರಾಮಿಕ ತಂದ ಕುತ್ತು; ಸಂಕಷ್ಟದಲ್ಲಿ ಗುಳೇದಗುಡ್ಡ ನೇಕಾರರು

ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಸಾಂಪ್ರದಾಯಿಕ ಬಟ್ಟೆಯಾದ “ಗುಳೇದಗುಡ್ಡ ಖಾನ” ಹಿಂದೆ ಒಂದು ದುಃಖದ ಕಥೆ ಇದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಬಟ್ಟೆಗೆ ಬೇಡಿಕೆಯು ಕುಸಿತ್ತಿದ್ದು, ಇದಕ್ಕೆ ಕೋವಿಡ್ ಸಾಂಕ್ರಾಮಿಕ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. 
ಕೈ ಮಗ್ಗ
ಕೈ ಮಗ್ಗ

ಬೆಂಗಳೂರು: ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಸಾಂಪ್ರದಾಯಿಕ ಬಟ್ಟೆಯಾದ “ಗುಳೇದಗುಡ್ಡ ಖಾನ” ಹಿಂದೆ ಒಂದು ದುಃಖದ ಕಥೆ ಇದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಬಟ್ಟೆಗೆ ಬೇಡಿಕೆಯು ಕುಸಿತ್ತಿದ್ದು, ಇದಕ್ಕೆ ಕೋವಿಡ್ ಸಾಂಕ್ರಾಮಿಕ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. 

ಸಾಂಪ್ರದಾಯಿಕ ಮತ್ತು ಪೂರ್ವಿಕರ ಕಸುಬನ್ನು ಅನುಸರಿಸುತ್ತಿದ್ದ ಅನೇಕ ನೇಕಾರರು ತಮ್ಮ ಕೈಮಗ್ಗವನ್ನು ಮಾರಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ನೇಕಾರರು ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು, ಹೋಟೆಲ್ ಮತ್ತು ಬಾರ್ ಉದ್ಯೋಗಿಗಳು ಮತ್ತು ನಿರ್ಮಾಣ ಕೆಲಸಗಾರರಾಗಿ ಅಲ್ಪ ಮೊತ್ತವನ್ನು ಗಳಿಸುತ್ತಿದ್ದಾರೆ. 

ಈ ಹಿಂದೆ ದೇಶದಲ್ಲಿ ಕೋವಿಡ್-ಪ್ರೇರಿತ ನಿರ್ಬಂಧಗಳನ್ನು ಘೋಷಿಸಿದಾಗ, ಈ ನೇಕಾರರು ತಮ್ಮ ಹಳ್ಳಿಗಳಿಗೆ ಹಿಂತಿರುಗಲು ಮತ್ತು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಲು ಬಯಸಿದ್ದರು. ಆದರೆ ದುಃಖದ ಸಂಗತಿಯೆಂದರೆ, ಅವೆಲ್ಲವನ್ನೂ ಹೀರಿಕೊಳ್ಳುವಷ್ಟು ಮಗ್ಗಗಳು ಮತ್ತು ಕೆಲಸಗಳಿಲ್ಲ. ಕೆಲವು ವರ್ಷಗಳ ಹಿಂದೆ 8 ಸಾವಿರಕ್ಕೂ ಹೆಚ್ಚು ಕೈಮಗ್ಗಗಳನ್ನು ಹೊಂದಿದ್ದ ತಾಲ್ಲೂಕಿನಲ್ಲಿ ಈಗ ಕೇವಲ 200 ಕೈಮಗ್ಗಗಳಿವೆ ಎಂಬುದು ನಂಬಲಾಗದ ಸತ್ಯ...

ಕಾರಣವೆಂದರೆ ಹೆಚ್ಚಿನ ಹಳೆಯ ಮನೆಗಳು ಮಗ್ಗಗಳನ್ನು ಹೊಂದಿದ್ದರೂ, ಹೊಸದಾಗಿ ನವೀಕರಿಸಿದ ಮನೆಗಳು ನೆಲದ ಮೇಲೆ ಟೈಲ್ಸ್ ಗಳನ್ನು ಹೊಂದಿರುವುದರಿಂದ ಮತ್ತು ಹಳ್ಳಿಗರು ಮಗ್ಗಗಳು ನೆಲಹಾಸನ್ನು ಹಾನಿಗೊಳಿಸುತ್ತಾರೆ ಎಂದು ಭಾವಿಸುತ್ತಾರೆ. ಮೊದಲು ಅವರೇ ಸ್ವಯಂ ಉದ್ಯೋಗಿಗಳಾಗಿದ್ದರು. ಆದರೆ ಈಗ ಅವರು ಹೆಚ್ಚು ಸಂಖ್ಯೆಯ ಮಗ್ಗಗಳನ್ನು ಹೊಂದಿರುವವರ ಬಳಿ ಕೆಲಸ ಹುಡುಕುತ್ತಿದ್ದಾರೆ ಎಂದು ನೇಕಾರರೊಬ್ಬರು ಹೇಳಿದ್ದಾರೆ.

ಸಾಂಪ್ರದಾಯಿಕ ಕೈಮಗ್ಗಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಪವರ್ ಲೂಮ್ಗಿಂತ (ವಿದ್ಯುತ್ ಮಗ್ಗಗಳು)  ಎಕ್ಸ್ಪ್ರೆಸ್ ಪವರ್‌ಲೂಮ್‌ಗಳು ಅಗ್ಗದ ಕಚ್ಚಾ ವಸ್ತುಗಳನ್ನು ಬಳಸುತ್ತವೆ. ಹೀಗಾಗಿ ಇವುಗಳಿಗ ಬೇಡಿಕೆ ಕೈ ಮಗ್ಗಗಳಿಗಿಂತ ಹೆಚ್ಚಿದೆ.

ನೇಕಾರ ಈರಣ್ಣ ರನ್ನ ಚೆಲ್ಲಾ ಒಂದು ಕಾಲದಲ್ಲಿ ಎರಡು ಕೈಮಗ್ಗಗಳನ್ನು ಹೊಂದಿದ್ದರು. ಕೆಲ ವರ್ಷಗಳ ಹಿಂದೆ ಅವುಗಳನ್ನು ಮಾರಾಟ ಮಾಡಿ ಬೆಂಗಳೂರಿಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಲು ಆರಂಭಿಸಿದ್ದರು. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗ, ಅವರು ತಮ್ಮ ಹಳ್ಳಿಗೆ ಮರಳಿದರು. ಈ ಕುರಿತು ಮಾತನಾಡಿರುವ ಅವರು ನನ್ನ ಬಳಿ ಮಗ್ಗ ಇಲ್ಲದ ಕಾರಣ ನೇಕಾರರ ಬಳಿ ಕೆಲಸ ಮಾಡುತ್ತಿದ್ದೇನೆ. ಮಗ್ಗ ಆರಂಭಿಸಲು ಮತ್ತು ಕಚ್ಚಾ ವಸ್ತುವನ್ನು ಪಡೆಯಲು ಸಾಕಷ್ಟು ಹಣ ಹೂಡಿಕೆ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ವಿವಿಧ ಸಮಾಜ ಕಲ್ಯಾಣ ಯೋಜನೆಗಳಡಿ ವಿದ್ಯುತ್ ಮಗ್ಗಗಳನ್ನು ನೀಡುತ್ತಿದೆ. ಆದರೆ ಫಲಾನುಭವಿಗಳು ನೇಕಾರರಲ್ಲ ಮತ್ತು ಅವರು ಯಂತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಕೈಮಗ್ಗಗಳಿಗೆ ಪವರ್‌ಲೂಮ್‌ಗಿಂತ ಹೆಚ್ಚಿನ ದೈಹಿಕ ಶಕ್ತಿ ಮತ್ತು ಸಮಯ ಬೇಕಾಗುತ್ತದೆ. ಆದರೆ ವಿದ್ಯುತ್ ಇಲ್ಲದಿದ್ದಾಗ ಪವರ್ ಲೂಮ್‌ಗಳು ಓಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ರಮೇಶ್ ಎವಿ ಕೆಲವು ತಿಂಗಳ ಹಿಂದೆ ಖಾನವೀವ್ಸ್ ಎಂಬ ಎನ್‌ಜಿಒವನ್ನು ಪ್ರಾರಂಭಿಸಿದರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಶೇಷ ಫ್ಯಾಬ್ರಿಕ್ ಅನ್ನು ಪ್ರಚಾರ ಮಾಡಲಾರಂಭಿಸಿದರು. ಆದರೆ ಈ ವಿಶೇಷ ಬಟ್ಟೆಗೆ ಬೇಡಿಕೆ ಕುಸಿದಿರುವುದಕ್ಕೆ ವಿವರಣೆ ನೀಡಿದ ಅವರು, ಸಾಂಪ್ರದಾಯಿಕ ಖಾನಾ ಮಗ್ಗಗಳಲ್ಲಿ ಬಳಸುವ ರೇಷ್ಮೆ ದಾರಕ್ಕೆ ಕನಿಷ್ಠ 10 ಸಾವಿರ ರೂ. ಬೇಕಾಗುತ್ತದೆ. ಕೈಮಗ್ಗದಲ್ಲಿ ನೇಕಾರರಿಗೆ 20 ಇಂಚಿಗೆ 33 ರೂ. ಬೇಕಾಗುತ್ತದೆ. ಆದರೆ ಪವರ್ ಲೂಮ್ ನಲ್ಲಿ 6 ರೂ. ಕೂಲಿ ನೀಡಲಾಗುತ್ತದೆ. ಕೈಮಗ್ಗದಲ್ಲಿ 21 ಮೀಟರ್ ಖಾನಾ ನೇಯಲು ಮೂರರಿಂದ ಏಳು ದಿನ ಬೇಕಾಗುತ್ತದೆ, ಪವರ್ ಲೂಮ್ ನಲ್ಲಿ ದಿನದಲ್ಲಿ 30 ಮೀಟರ್ ನೇಯಬಹುದು  ಎಂದು ರಮೇಶ್ ತಿಳಿಸಿದರು. 

ಪವರ್ ಲೂಮ್‌ಗಳು ಪಾಲಿಸ್ಟರ್ ಥ್ರೆಡ್‌ಗಳನ್ನು ಬಳಸುತ್ತವೆ, ಇದು ಸಾಂಪ್ರದಾಯಿಕ ಮಗ್ಗದಲ್ಲಿನ ರೇಷ್ಮೆ ದಾರಕ್ಕೆ 10,000 ರೂಪಾಯಿಗಳಿಗೆ ಹೋಲಿಸಿದರೆ ಅವುಗಳ ವೆಚ್ಚವನ್ನು ಕೇವಲ 3,000 ರೂಪಾಯಿಗಳಿಗೆ ಕಡಿಮೆ ಮಾಡುತ್ತದೆ. ಖಾನವೀವ್ಸ್ ಈ ವರ್ಷದ ಮಾರ್ಚ್ ಮತ್ತು ಜೂನ್ ನಡುವೆ 10 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡಿದೆ. ನೇಕಾರರಿಗೆ ಬಾಂಡ್‌ಗಳನ್ನು ನೀಡಲಾಗುತ್ತಿದ್ದು, ಇದು ಕೆಲವು ವರ್ಷಗಳ ನಂತರ ಉತ್ತಮ ಆದಾಯವನ್ನು ತರುತ್ತದೆ ಎಂದು ರಮೇಶ್ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com