‘ಜ್ಞಾನಭಾರತಿ ಹಾಲ್ಟ್’ ನಲ್ಲಿ ಪಾದಚಾರಿ ಮೇಲ್ಸುತುವೆ ಇಲ್ಲ; ಜೀವ ಭಯದಲ್ಲಿ ಹಳಿದಾಟುವ ಪ್ರಯಾಣಿಕರು!

ಮೈಸೂರು- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಡುವಿನ ಮೆಮೊ ರೈಲು ಬೆಳಗ್ಗೆ 8-45ಕ್ಕೆ ಬಂದು ನಿಲ್ಲುತ್ತಿದ್ದಂತೆ ಜ್ಞಾನಭಾರತಿ ರೈಲು ನಿಲುಗಡೆಯಲ್ಲಿ ವಿಚಿತ್ರ ರೀತಿಯ ಸನ್ನಿವೇಶಗಳು ಸೃಷ್ಟಿಯಾಗುತ್ತದೆ.
ರೈಲ್ವೆ ಹಳಿ ದಾಟುತ್ತಿರುವ ಮಹಿಳೆಯರು
ರೈಲ್ವೆ ಹಳಿ ದಾಟುತ್ತಿರುವ ಮಹಿಳೆಯರು

ಬೆಂಗಳೂರು: ಮೈಸೂರು- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಡುವಿನ ಮೆಮೊ ರೈಲು ಬೆಳಗ್ಗೆ 8-45ಕ್ಕೆ ಬಂದು ನಿಲ್ಲುತ್ತಿದ್ದಂತೆ ಜ್ಞಾನಭಾರತಿ ರೈಲು ನಿಲುಗಡೆಯಲ್ಲಿ ವಿಚಿತ್ರ ರೀತಿಯ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ಎಲ್ಲಾ ಪ್ರಯಾಣಿಕರು ಬಹುತೇಕವಾಗಿ ಮಹಿಳೆಯರು ಜೀವಭಯದಲ್ಲಿಯೇ ಮೈಸೂರು ರಸ್ತೆಯತ್ತ ಹಳಿ ದಾಟಲು ಮುಂದಾಗುತ್ತಾರೆ. ಇದರಿಂದಾಗಿ ರೈಲ್ವೆ ಹಳಿ ಮೇಲೆ ಇದ್ದಕ್ಕಿದ್ದಂತೆ ಚಟುವಟಿಕೆಗಳು ಗರಿಗೆದರುತ್ತವೆ.

ರೈಲ್ವೆ ನಿಲ್ದಾಣದ ಅಜುಬಾಜಿನಲ್ಲಿ ಗಾರ್ಮೆಂಟ್ ಪ್ಯಾಕ್ಟರಿಗಳು ಇರುವುದರಿಂದ ಮಂಡ್ಯ, ಮದ್ದೂರು, ಚನ್ನಪಟ್ಟಣ ಮತ್ತು ರಾಮನಗರದಿಂದ ಬರುವ ಪ್ರಯಾಣಿಕರು ಈ ನಿಲ್ದಾಣದಲ್ಲಿ ಇಳಿಯುತ್ತಾರೆ. ಧಾವಂತದಲ್ಲಿ ಕೆಲಸಕ್ಕೆ ಹೋಗುತ್ತಾರೆ. ಎಕ್ಸ್ ಪ್ರೆಸ್  ರೈಲುಗಳು ಇಲ್ಲಿ ನಿಲ್ಲುವುದಿಲ್ಲ, ವೇಗವಾಗಿ ಬರುವ ಈ ರೈಲುಗಳು ಹಳಿ ದಾಟುವ ಪ್ರಯಾಣಿಕರ ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕಳೆದ ವಾರ ಜ್ಞಾನಭಾರತಿ ಮೆಟ್ರೋ ನಿಲ್ದಾಣ ಓಪನ್ ಆರಂಭವಾಗುವುದರೊಂದಿಗೆ ಈ ನಿಲ್ದಾಣದಲ್ಲಿ ಇದೀಗ ಹೆಚ್ಚಿನ ಪ್ರಯಾಣಿಕರು ಬರುತ್ತಿದ್ದಾರೆ. ಎರಡು ಜೋಡಿ ಮೆಮು ರೈಲುಗಳು ಮತ್ತು ಮೈಸೂರು- ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಇಲ್ಲಿ ನಿಲುತ್ತವೆ. ಬೆಂಗಳೂರು ರೈಲ್ವೆ ವಿಭಾಗೀಯದಿಂದ ಪ್ರಸ್ತಾವಿತ ಪಾದಚಾರಿ ಮೇಲ್ಸುತುವೆ ಅನೇಕ ವರ್ಷಗಳಿಂದ ವಿಳಂಬವಾಗುತ್ತದೆ ಇದೆ. ಪ್ರಯಾಣಿಕರಿಗೆ ಬೇರೆ ಆಯ್ಕೆಗಳಿಲ್ಲ ಆದಾಗ್ಯೂ, ಜೀವ ಭಯದಲ್ಲಿಯೇ ಹಳಿ ದಾಟುತ್ತಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಪ್ರಯಾಣಿಕ ಬೋರೆಗೌಡ, ಬೇರೆ ಆಯ್ಕೆಗಳಿಲ್ಲ, ಜೀವ ಭಯವೂ ಗೊತ್ತಿದೆ. ಆದರೆ, ವಿಧಿಯಿಲ್ಲ, ಕಳೆದ ಐದು ವರ್ಷಗಳಿಂದ ಇದೇ ರೀತಿ ಮಾಡುತ್ತಿರುವುದಾಗಿ ತಿಳಿಸಿದರು. ಖಾಸಗಿ ಕಂಪನಿ ನೌಕರ ಮಂಜುನಾಥ್ ಮಾತನಾಡಿ, ಅನೇಕ ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇನೆ, ಆದರೆ, ಏನೂ ಆಗಿಲ್ಲ ಎಂದರು. 

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಶ್ಯಾಮ್ ಸಿಂಗ್ ಹೇಳಿದರು. ಹಳಿ ದಾಟುವ ಜನರನ್ನು ತಡೆಯಲು ಕೂಡಲೇ ಇಬ್ಬರು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ನೇಮಿಸಲಾಗುವುದು, 2 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಮೇಲ್ಸುತುವೆ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com