ಕರ್ನಾಟಕದ ಮೊದಲ ಕೋವಿಡ್ ಮುಕ್ತ ಜಿಲ್ಲೆ ಬೀದರ್: ಶೀಘ್ರದಲ್ಲೆ ಘೋಷಣೆ

ರಾಜ್ಯದಲ್ಲಿ ಕೋವಿಡ್ ಮುಕ್ತ ಮೊದಲ ಜಿಲ್ಲೆ ಬೀದರ್ ಎಂದು ಗುರುವಾರ ಹೇಳಲಾಗಿದೆ. ಸೆಪ್ಟಂಬರ್ 2 ರಂದು ಯಾವುದೇ ಕೊರೋನಾ ಕೇಸ್ ದಾಖಲಾಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀದರ್: ರಾಜ್ಯದಲ್ಲಿ ಕೋವಿಡ್ ಮುಕ್ತ ಮೊದಲ ಜಿಲ್ಲೆ ಬೀದರ್ ಎಂದು ಗುರುವಾರ ಹೇಳಲಾಗಿದೆ. ಸೆಪ್ಟಂಬರ್ 2 ರಂದು ಯಾವುದೇ ಕೊರೋನಾ ಕೇಸ್ ದಾಖಲಾಗಿಲ್ಲ.

ಸೋಂಕು ತಗುಲಿದ್ದ ರೋಗಿಗಳು ಮತ್ತು ಹೋಮ್ ಕ್ವಾರಂಟೈನ್ ನಲ್ಲಿದ್ದವರು ಚೇತರಿಸಿಕೊಂಡಿದ್ದಾರೆ,  ಬೀದರ್ ಶೂನ್ಯ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬೀದರ್ ಜಿಲ್ಲೆಯು ಆತಂಕಕ್ಕೆ ಕಾರಣವಾಗಿತ್ತು ಎಂಬುದನ್ನು ಸ್ಮರಿಸಬಹುದು. ಆದರೆ ಕಳೆದ ಒಂದು ತಿಂಗಳಲ್ಲಿ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ.

ಕಳೆದ ಎರಡು ಕೋವಿಡ್ ಅಲೆಗಳಲ್ಲಿ ಜಿಲ್ಲೆಯಲ್ಲಿ 24,300 ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು. ಸೋಂಕು ತಗುಲಿದ್ದ 23,898 ಜನರು ಚೇತರಿಸಿಕೊಂಡಿದ್ದು 398 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ, 18 ವರ್ಷಕ್ಕಿಂತ ಮೇಲ್ಪಟ್ಟ 7,54,223 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.  ಬಹುಶಃ ಹೆಚ್ಚಿನ ಜನರು ಲಸಿಕೆ ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜನರು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದಾರೆ, ಇದು ಜಿಲ್ಲೆಯು ಕೋವಿಡ್ ಮುಕ್ತವಾಗಲು ಕಾರಣವಾಗಿರಬಹುದು ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com