ಬೆಂಗಳೂರು: ಕಾವೇರಿ ಕಾಲಿಂಗ್ ನ 'ಮರ ಮಿತ್ರ' ಆ್ಯಪ್ ಬಿಡುಗಡೆ

ಕಾವೇರಿ ಕೂಗಿನ ಮರ ಮಿತ್ರ ಆಪ್ ಅನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಬಿಡುಗಡೆ ಮಾಡಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾವೇರಿ ಕೂಗಿನ ಮರ ಮಿತ್ರ ಆ್ಯಪ್ ಅನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಬಿಡುಗಡೆ ಮಾಡಿದರು.

ಕರ್ನಾಟಕದ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಲಾಭದಾಯಕ ಮತ್ತು ಪರಿಸರಕ್ಕೂ ಲಾಭದಾಯಕವಾದ ಮರ–ಆಧಾರಿತ ಕೃಷಿಯನ್ನು ಉತ್ತೇಜಿಸಲು ನೆಲಮಟ್ಟದಲ್ಲಿ ರೈತರ ಪ್ರಯತ್ನಗಳನ್ನು ತೀವ್ರಗೊಳಿಸುವ ಸಲುವಾಗಿ ಕಾವೇರಿ ಕೂಗು ಈ ಆಪ್ ಬಿಡುಗಡೆ ಮಾಡಿದೆ. 

ಕಾವೇರಿ ಕೂಗಿನ ಸ್ವಯಂಸೇವಕರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು 890 ಮರ ಮಿತ್ರರು ಕೆಲಸ ಮಾಡುತ್ತಿರುವ 9 ಜಿಲ್ಲೆಗಳಲ್ಲಿ ಈ ಆಪ್ ಅನ್ನು ಏಕಕಾಲದಲ್ಲಿ ಉದ್ಘಾಟಿಸಲಾಯಿತು. 

ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ರವಿ ಕುಮಾರ್ ಅವರು, ಕೆಎಪಿವೈ ಮತ್ತು ನರೇಗಾ ಕರ್ನಾಟಕ ಸರ್ಕಾರದ ಯೋಜನೆಗಳು. ಈಶಾ ಫೌಂಡೇಷನ್ ಸಸಿ ನೆಡಲು ಸರ್ಕಾರದ ಹಣವನ್ನು ಬಳಸುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಇವು ಸರ್ಕಾರದ ಯೋಜನೆಗಳು. ಈಶಾ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಕಾವೇರಿ ಕೊಳ್ಳ ಪ್ರದೇಶದ 9 ಜಿಲ್ಲೆಗಳಲ್ಲಿ ಮರಗಳ ಕೊರತೆಯಿಂದಾಗಿ ಮಳೆ ನೀರು ನೆಲಕ್ಕೆ ಹಿಂಗದೆ ಹರಿದುಕೊಂಡು ಹೋಗುತ್ತಿದೆ. ಇದು ಹೀಗಾಗಬಾರದು. ನಾವು ಹೆಚ್ಚು ಮರಗಳನ್ನು ಬೆಳೆಸಿದರೆ, ಮಳೆ ನೀರು ಭೂಮಿಯಲ್ಲಿ ಹಿಂಗುತ್ತದೆ. ಇದನ್ನು ಸಾಧ್ಯವಾಗಿಸಲು ಒಟ್ಟಿಗೆ ಶ್ರಮಿಸುತ್ತಿರುವ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಈಶಾಗೆ ಧನ್ಯವಾದಗಳು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com