ಮೈಸೂರು ಅರಮನೆ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ

ಇಷ್ಟುದಿನಗಳ ಕಾಲ ಮೈಸೂರು ಅರಮನೆ ಒಳಾಂಗಣದಲ್ಲಿ ಚಿತ್ರೀಕರಣಕ್ಕಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ.
ಮೈಸೂರು ಅರಮನೆ (ಸಂಗ್ರಹ ಚಿತ್ರ)
ಮೈಸೂರು ಅರಮನೆ (ಸಂಗ್ರಹ ಚಿತ್ರ)

ಬೆಂಗಳೂರು: ಇಷ್ಟುದಿನಗಳ ಕಾಲ ಮೈಸೂರು ಅರಮನೆ ಒಳಾಂಗಣದಲ್ಲಿ ಚಿತ್ರೀಕರಣಕ್ಕಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ.

ಫ್ಲ್ಯಾಷ್ ರಹಿತ ಛಾಯಾಚಿತ್ರ ಕ್ಲಿಕ್ಕಿಸಲು ವಿಡಿಯೋ ಚಿತ್ರೀಕರಣ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ಮೈಸೂರು ಅರಮನೆ ಚಿತ್ರೀಕರಣ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿತ್ತು. ಅದರಲ್ಲಿ ಅಷ್ಟೊಂದು ಗಂಭೀರತೆ ಇಲ್ಲ ಎಂದು ಪ್ರಕರಣ ಕೈ ಬಿಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಇಲಾಖೆಯಡಿಯಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತಕ್ಕೆ ತನ್ನ ಷೇರುದಾರ ಬೆಳೆಗಾರರು ಹಾಗೂ ನಿಗಮಕ್ಕೆ ಬೀಜೋತ್ಪಾದನೆ ಮಾಡುವ ಪ್ರಗತಿಪರ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಲು ಮತ್ತು ನಿಗಮದ ಇತರೆ ವಹಿವಾಟನ್ನು ನಿರ್ವಹಿಸಲು ಅನುಕೂಲವಾಗುವಂತೆ 20 ಕೋಟಿ ರೂ.ಗಳ ಕ್ಯಾಷ್‌ಕ್ರೆಡಿಟ್ ಸೌಲಭ್ಯಕ್ಕಾಗಿ ಸರ್ಕಾರದ ಖಾತರಿಯನ್ನು ನವೀಕರಿಸಲಾಗಿದೆ. 

ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ರಸಗೊಬ್ಬರ ಕಾಪು ದಾಸ್ತಾನು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದ ರಾಜ್ಯದ ರೈತರಿಗೆ ಅವಶ್ಯಕ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ, ಸಚಿವ ಸಂಪುಟ ಸಭೆಯಲ್ಲಿ ಈ ಸಾಲಿನಲ್ಲಿ ರಸಗೊಬ್ಬರ ಕಾಪು ದಾಸ್ತಾನು ಮುಂದುವರಿಸಲು 400 ಕೋಟಿ ರೂ.ಗಳ ಸಾಲ ಸೌಲಭ್ಯಕ್ಕೆ ಸರ್ಕಾರದ ಖಾತರಿ ಮುಂದುವರಿಸಲು ನಿರ್ಣಯಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಕೊಡಲು ತೀರ್ಮಾನ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಕೋರ್ಟ್ ಆದೇಶದಂತೆ ಭೂಸ್ವಾಧೀನಕ್ಕೆ ನರಸಿಂಹರಾಜಪುರ ತಾಲೂಕು 110, ಅಜ್ಜಂಪುರ ತಾಲೂಕಿನಲ್ಲಿ 115 ಎಕರೆ ಸ್ವಾಧೀನಕ್ಕೆ ಕ್ರಮ ಕೈಗೊಳ್ಳುವುದು, ಜಿಟಿಟಿಸಿ ಕೇಂದ್ರಗಳನ್ನು ಮಾಡಲು ಮಾಗಡಿ ತಾಲೂಕಿಗೆ 54 ಕೋಟಿ, ದೇವನಹಳ್ಳಿ ತಾಲೂಕಿನಲ್ಲಿ 47ಕೋಟಿ, ಐಟಿಐ ತರಬೇತಿ ಪಡೆಯುವ 13,061 ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಯೋಜನೆ, ಅದಕ್ಕಾಗಿ 18 ಕೋಟಿ ರೂ. ಅನುದಾನ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ.

ಸರ್ಕಾರಿ ವೈಮಾನಿಕ‌ ತರಬೇತಿ ಶಾಲೆ ಸ್ಥಾಪನೆಗೆ ಸಂಪುಟದ ನಿರ್ಧಾರಿಸಿದ್ದು, ಹಿಂದೆ ಜಕ್ಕೂರಿನಲ್ಲಿ ರಾಜೀವ್ ಸೊಸೈಟಿಗೆ ಅನುಮತಿ ಕೊಡಲಾಗಿತ್ತು. ಆದರೆ ಇಲ್ಲಿಯವರೆಗೆ ಸೊಸೈಟಿ ಕಾರ್ಯ ಆರಂಭಿಸಿಲ್ಲ. ಹಾಗಾಗಿ ಬೇರೆಯವರಿಗೆ ಪಿಪಿಎ ಅಡಿಯಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಸಮ್ಮತಿ ನೀಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com