ತೆಪ್ಪದ ಮೂಲಕ ಸಾಗಿ, ಭತ್ತದ ಸಸಿ ನೆಟ್ಟು ಪ್ರತಿಭಟನೆ ಮೂಲಕ ರಸ್ತೆ ಅವ್ಯವಸ್ಥೆಯ ಗಮನ ಸೆಳೆದ ಅಂಜನಾಪುರ ನಾಗರಿಕರು!

ಇದು ಯಾವುದೋ ಹೊಳೆ, ಕೆರೆ, ನದಿ ಪಕ್ಕ ಜನರು ತೆಪ್ಪದಲ್ಲಿ ಸಾಗುತ್ತಿರುವುದಲ್ಲ, ಹೊಂಡ ಬಿದ್ದ ರಸ್ತೆಯಲ್ಲಿ ಮಳೆಗಾಲದ ಭಾರೀ ಮಳೆಗೆ ನೀರು ತುಂಬಿದ್ದು ಅದರ ಮೇಲೆ ತೆಪ್ಪದಲ್ಲಿ ಸಾಗುತ್ತಿರುವ ಜನರು.
ತೆಪ್ಪದಲ್ಲಿ ಸಾಗಿದ ಪ್ರತಿಭಟನಾಕಾರರು
ತೆಪ್ಪದಲ್ಲಿ ಸಾಗಿದ ಪ್ರತಿಭಟನಾಕಾರರು

ಬೆಂಗಳೂರು: ಇದು ಯಾವುದೋ ಹೊಳೆ, ಕೆರೆ, ನದಿ ಪಕ್ಕ ಜನರು ತೆಪ್ಪದಲ್ಲಿ ಸಾಗುತ್ತಿರುವುದಲ್ಲ, ಹೊಂಡ ಬಿದ್ದ ರಸ್ತೆಯಲ್ಲಿ ಮಳೆಗಾಲದ ಭಾರೀ ಮಳೆಗೆ ನೀರು ತುಂಬಿದ್ದು ಅದರ ಮೇಲೆ ತೆಪ್ಪದಲ್ಲಿ ಸಾಗುತ್ತಿರುವ ಜನರು.

ಇವರು ತೆಪ್ಪದಲ್ಲಿ ಸಾಗಿ ರಸ್ತೆಯ ಅವ್ಯವಸ್ಥೆಯನ್ನು ಸರ್ಕಾರದ, ಜನಪ್ರತಿನಿಧಿಗಳ ಗಮನಕ್ಕೆ ತರಲು ವಿನೂತನ ರೀತಿಯಲ್ಲಿ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಇದು ಇರುವುದು ಬೆಂಗಳೂರಿನ ಅಂಜನಾಪುರ ಮುಖ್ಯ ರಸ್ತೆಯಲ್ಲಿ. ಬೆಂಗಳೂರಿನಲ್ಲಿರುವ ಅಂಜನಾಪುರ ಮುಖ್ಯ ರಸ್ತೆಯ ದುರಸ್ತಿಗೆ ಆಗ್ರಹಿಸಿ ತೆಪ್ಪದಲ್ಲಿ ಸಾಗಲು 20 ರೂಪಾಯಿ ಶುಲ್ಕ ವಿಧಿಸಿದ್ದಲ್ಲದೆ ತೆಪ್ಪದಲ್ಲಿ ಸಾಗಿ ನಿಂತ ನೀರಿನಲ್ಲಿ ಭತ್ತದ ಸೆಸಿಯನ್ನು ನೆಟ್ಟು ಸ್ಥಳೀಯ ಶಾಸಕ ಎಂ ಕೃಷ್ಣಪ್ಪ ವಿರುದ್ಧ ಪ್ರತಿಭಟನೆ ನಡೆಸಿದರು.

ಜನರು ತೆಪ್ಪದಲ್ಲಿ ಸಾಗಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಶಾಸಕರು ಕೂಡಲೇ ಸ್ಥಳಕ್ಕೆ ಆಗಮಿಸಿ ಜನರ ಅಹವಾಲು ಕೇಳಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com