ಇಂಟರ್ನೆಟ್ ಸಂಪರ್ಕವಿಲ್ಲದ, ವ್ಯವಸ್ಥೆಗಳಿಲ್ಲದ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗಿದೆ: ಸಚಿವ ಬಿ.ಸಿ.ನಾಗೇಶ್

ಇಂಟರ್ನೆಂಟ್ ಸೌಲಭ್ಯ ಹಾಗೂ ಸ್ಮಾರ್ಟ್ ಫೋನ್ ವ್ಯವಸ್ಥೆಗಳಿಲ್ಲ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಸಲಹೆ ಮೇರೆಗೆ ಮಕ್ಕಳಿಗೆ ಹಂತ ಹಂತವಾಗಿ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವ ಬಿಸಿ.ನಾಗೇಶ್ ಹೇಳಿದ್ದಾರೆ. 
ಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವ ಬಿಸಿ.ನಾಗೇಶ್
ಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವ ಬಿಸಿ.ನಾಗೇಶ್

ಬೆಂಗಳೂರು: ಇಂಟರ್ನೆಂಟ್ ಸೌಲಭ್ಯ ಹಾಗೂ ಸ್ಮಾರ್ಟ್ ಫೋನ್ ವ್ಯವಸ್ಥೆಗಳಿಲ್ಲ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಸಲಹೆ ಮೇರೆಗೆ ಮಕ್ಕಳಿಗೆ ಹಂತ ಹಂತವಾಗಿ ಭೌತಿಕ  ತರಗತಿಗಳನ್ನು ಆರಂಭಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವ ಬಿಸಿ.ನಾಗೇಶ್ ಅವರು ಹೇಳಿದ್ದಾರೆ. 

ಸಚಿವರು ಕೋವಿಡ್ ಸಾಂಕ್ರಾಮಿಕ ರೋಗ ಭೀತಿ ನಡುವಲ್ಲೂ ರಾಜ್ಯದಲ್ಲಿ ಎಸ್ಎಸ್ಎಲ್'ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಿದ್ದು, ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿ ಭೌತಿಕ ತರಗತಿಗಳನ್ನೂ ಆರಂಭಿಸಿದ್ದಾರೆ. ಈ ನಡುವೆ 6-8ನೇ ತರಗತಿಯ ಸರ್ಕಾರಿ ಶಾಲೆಯ ಮಕ್ಕಳು ಸೋಮವಾರದಿಂದ ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ನಡುವೆ ಸಚಿವ ನಾಗೇಶ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 

9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದೆ. ಇಲ್ಲಿಯವರೆಗಿನ ಆಗಿರುವ ಅನುಭವಗಳೇನು?
ರಾಜ್ಯದಾದ್ಯಂತ ಶೇ.75ರಷ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಸಾಕಷ್ಟು ಪೋಷಕರು ತಮ್ಮ ವಾರ್ಡ್‌ಗಳ ಶಿಕ್ಷಣದ ಬಗ್ಗೆ ಚಿಂತಿತರಾಗಿದ್ದರಿಂದ ಭೌತಿಕ ತರಗತಿಗಳ ಪುನರಾರಂಭಿಸಲು ಉತ್ಸುಕರಾಗಿದ್ದರು. ಶಿಕ್ಷಕರೂ ಕೂಡ ಚಿಂತಿತರಾಗಿದ್ದರು.

ಶೇ.100ರಷ್ಟು ಲಸಿಕೀಕರಣ ಬಳಿಕ ತರಗತಿಗಳ ಆರಂಭಿಸುವಂತೆ ಕೆಲ ಪೋಷಕರು ಮನವಿ ಮಾಡಿಕೊಂಡಿದ್ದರು. ಬೆಳಗಾವಿ, ಧಾರವಾಡ ಹಾಗೂ ಯಾದಗಿರಿಯ ಕೆಲ ವಿದ್ಯಾರ್ಥಿಗಳು ತರಗತಿಗಳನ್ನು ಪೂರ್ಣ ದಿನದವರೆಗೂ ವಿಸ್ತರಣೆ ಮಾಡುವಂತೆ ತಿಳಿಸಿದ್ದರೆ. ದೂರದ ಸ್ಥಳಗಳಿಂದ ಪ್ರಯಾಣಿಸಬೇಕಾಗಿರುವುದರಿಂದ ಸೀಮಿತ ಗಂಟೆಗಳ ತರಗತಿಗಳಿಂದ ಅಷ್ಟಾಗಿ ಪ್ರಯೋಜನವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. 

ಇಲ್ಲಿಯವರೆಗೆ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗೆ ಎಷ್ಟು ಮಟ್ಟದ ಲಸಿಕೆ ನೀಡಲಾಗಿದೆ?
ಸುಮಾರು 2.6 ಲಕ್ಷ ಶಿಕ್ಷಕರು ಮತ್ತು ಸಿಬ್ಬಂದಿಗಳು ಅಂದರೆ ಶೇ.95 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೀಘ್ರದಲ್ಲೇ ಶೇ.100ರಷ್ಟು ಸಾಧಿಸಲಾಗುತ್ತದೆ. ಇಲ್ಲಿಯವರೆಗೆ, ಸೋಂಕು ಹರಡುವಿಕೆಯಿಂದಾಗಿ ಶಾಲೆ ಅಥವಾ ಕಾಲೇಜು ಮುಚ್ಚುವ ಒಂದು ಪ್ರಕರಣ ಕೂಡ ನನ್ನ ಗಮನಕ್ಕೆ ಬಂದಿಲ್ಲ.

ಮುಂದಿನ ದಿನಗಳಲ್ಲಿ, ಮತ್ತಷ್ಟು ಕಿರಿಯ ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಕ್ಕಳನ್ನು ಆಫ್‌ಲೈನ್ ತರಗತಿಗಳಿಗೆ ಕಳುಹಿಸುವಂತೆ ಪೋಷಕರನ್ನು ನಾವು ಒತ್ತಾಯಿಸುವುದಿಲ್ಲ, ಆದರೆ ಮಕ್ಕಳಿಗೆ ಸೋಂಕು ತಗುಲುವುದಿಲ್ಲ ಎಂಬ ತಜ್ಞರ ವರದಿಯನ್ನು ಅವರ ಗಮನಕ್ಕೆ ತರಲು ಬಯಸುತ್ತೇವೆ. ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಈಗಾಗಲೇ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಕೆಲವೆಡೆ ಮಕ್ಕಳಿಗೆ ಸೋಂಕು ತಗುಲಿರುವುದು ವರದಿಯಾಗಿವೆ. ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ? 
ಸೋಂಕು ಪತ್ತೆಯಾಗಿದೆ. ಆದರೆ, ದೊಡ್ಡ ಮಟ್ಟದಲ್ಲಿ ಎಲ್ಲಿಯೂ ಹರಡಿಲ್ಲ. ಇದೀಗ ಸೋಂಕು ಇಳಿಕೆಯಾಗುತ್ತಿದ್ದು. ಶಿಗ್ಗಾಂವ್ ನಲ್ಲಿ ಗುರುವಾರ ಶೂನ್ಯ ಪ್ರಕರಣ ದಾಖಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.0.1ಕ್ಕೆ ಇಳಿದಿದೆ. ಸಮುದಾಯ ಮಟ್ಟದಲ್ಲಿ ಸೋಂಕು ಹರಡುವ ಯಾವುದೇ ಚಿನ್ಹೆಗಳೂ ಸಿಗುತ್ತಿಲ್ಲ. ಆದರೂ, ಸಣ್ಣ ಮಕ್ಕಳ ಭೌತಿಕ ತರಗತಿ ಆರಂಭಕ್ಕೂ ಮುನ್ನ ಮತ್ತೊಮ್ಮೆ ಆಲೋಚನೆ ನಡೆಸುತ್ತೇವೆ.

ಆಫ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಸಮೀಕ್ಷೆಗಳನ್ನು ನಡೆಸಿದ್ದೀರಾ? 
ಹೌದು, ಸಮೀಕ್ಷೆ ನಡೆಸಲಾಗಿದೆ. 6,41,614 ಸ್ಯಾಂಪಲ್‌ಗಳಲ್ಲಿ, ಕೇವಲ 14 ವಿದ್ಯಾರ್ಥಿಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವ್ ಬಂದಿದೆ. ಮಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರೆಡೆ ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿದೆ. ಇದೇ ಭೌತಿಕ ತರಗತಿ ಆರಂಭಿಸುವ ನಮ್ಮ ಮನೋಬಲವನ್ನು ಹೆಚ್ಚಿಸಲು ಕಾರಣವಾಗಿದೆ. 

ಚುನಾವಣಾ ಪ್ರತಿನಿಧಿಗಳು ಮಕ್ಕಳ ಭೌತಿಕ ತರಗತಿಗಳನ್ನು ಆರಂಭಿಸುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ ಮಂಗಳೂರಿನಲ್ಲೂ ಪಾಸಿಟಿವಿಟಿ ದರ ಕಡಿಮೆ ಇರುವ ತಾಲೂಕುಗಳಲ್ಲಿ ಭೌತಿಕ ತರಗತಿಗಳ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲು ಉಪ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿಯೂ ಎನ್ಇಪಿ ಜಾರಿಗೊಳಿಸುವ ಯೋಜನೆಯಿದೆಯೇ?
ಹೌದು, ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸುವ ಯೋಜನೆಗಳಿವೆ. ಆದರೆ, ನಾವು ರಚನಾತ್ಮಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಎಂಬ ಮೂರು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಇದಕ್ಕಾಗಿ ಒಂದು ಕಾರ್ಯಪಡೆಯನ್ನೂ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಪಠ್ಯಕ್ರಮ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕಿದ್ದು, ಒಂದೇ ಸಮಯದಲ್ಲಿ ರಾಜ್ಯದಾದ್ಯಂತ ಜಾರಿಗೆ ತರಲಾಗುತ್ತದೆ.

ಐಚ್ಛಿಕ ಭಾಷೆಯಾಗಿ ಸಂಸ್ಕೃತವನ್ನು ಕಡೆಗಣಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ? 
ಸಂಸ್ಕೃತವನ್ನು ಆಯ್ಕೆಯಾಗಿ ನೀಡಿದರೆ, ವಿದ್ಯಾರ್ಥಿಗಳು ಮಾತೃಭಾಷೆಯನ್ನು ಕಲಿಯದೇ ಇರಬಹುದು ಎಂಬ ಭಾವನೆ ಇದೆ, ಇದು ಎನ್ಇಪಿ ಒತ್ತಡವನ್ನು ಹೆಚ್ಚಿಸುತ್ತದೆ.

ಮೊದಲ ಬಾರಿಗೆ ಸಚಿವರಾಗಿದ್ದೀರಿ, ಸಚಿವರಾಗಿ ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ನೀವು ಎಷ್ಟು ಆಸಕ್ತಿ ಹೊಂದಿದ್ದೀರಿ?
ನಾನು ಎರಡನೇ ಬಾರಿಗೆ ಶಾಸಕನಾಗಿರುವುದರಿಂದ, ನನಗೆ ವಿಶ್ವಾಸವಿದೆ. ಅಗತ್ಯವಿದ್ದರೆ, ನನ್ನ ಹಿರಿಯರಿಂದ ಕಲಿಯುತ್ತೇನೆ. ವಾಸ್ತವವಾಗಿ, ನನ್ನ ಪಕ್ಷವು ನನ್ನ ರಾಜಕೀಯ ಜೀವನದುದ್ದಕ್ಕೂ ಉತ್ತಮ ಆಡಳಿತಗಾರನಾಗುವ ಬಗ್ಗೆ ತರಬೇತಿ ನೀಡಿದೆ.

ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸುವಲ್ಲಿ ಖಾಸಗಿ ಶಾಲೆಯ ಲಾಬಿಯ ಪಾತ್ರವಿದೆ ಎಂಬ ಆರೋಪಗಳಿವೆ?
ಅಂತಹ ಆರೋಪಗಳು ನನ್ನನ್ನು ಕಾಡುವುದಿಲ್ಲ. ನಾವು ವಿದ್ಯಾರ್ಥಿಗಳ ಹಿತಾಸಕ್ತಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಪ್ರವೇಶವಿಲ್ಲದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಬಗ್ಗೆ ನಮ್ಮ ಮುಖ್ಯ ಕಾಳಜಿವಹಿಸಲಾಗಿದೆ.

ಭೌತಿಕ ತರಗತಿಗಳ ಪುನರಾರಂಭಿಸದಿದ್ದರೆ ಹಿಂದುಳಿದ ಪ್ರದೇಶಗಳು ಮತ್ತು ಸಮುದಾಯಗಳಿಂದ ಬಂದಿರುವ ಶೇ.30-40 ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರವು ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪವಿರುತ್ತಿತ್ತು. ಕೆಲವು ಖಾಸಗಿ ಶಾಲೆಗಳು ಇನ್ನೂ ಆಫ್‌ಲೈನ್ ತರಗತಿಗಳನ್ನು ಆರಂಭಿಸಿಲ್ಲ. ನಾವು ಹಂತ ಹಂತವಾಗಿ ಭೌತಿಕ ತರಗತಿಗಳನ್ನು ಆರಂಭಿಸುತ್ತಿದ್ದೇವೆ. 1ನೇ ತರಗತಿಗಳ ಆರಂಭಿಸಲು ಚಿಂತನೆಗಳು ನಡೆಯುತ್ತಿವ. ಈ ವೇಳೆ ಸಮಸ್ಯೆಗಳು ಎದುರಾಗಿದ್ದೇ ಆದರೆ, ನಿರ್ಧಾರದಿಂದ ಹಿಂದೆ ಸರಿಯಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com