ಲಸಿಕೆ ತೆಗೆದುಕೊಳ್ಳದೇ ಇರುವುದಕ್ಕಿಂತ ಯಾವುದೇ ಲಸಿಕೆ ಪಡೆಯುವುದು ಒಳಿತು: ವೈದ್ಯರು

ಕೋವಿಡ್-19 ಮೂರನೇ ಅಲೆ ಎದುರಾಗುವ ಭೀತಿ ಇದ್ದು, ಲಸಿಕೆಯನ್ನು ಪಡೆಯದೇ ಇರುವುದಕ್ಕಿಂತಲೂ ಯಾವುದಾದರೂ ಲಸಿಕೆ ಪಡೆಯುವುದು ಅತ್ಯುತ್ತಮ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಕೋವಿಡ್-19 ಮೂರನೇ ಅಲೆ ಎದುರಾಗುವ ಭೀತಿ ಇದ್ದು, ಲಸಿಕೆಯನ್ನು ಪಡೆಯದೇ ಇರುವುದಕ್ಕಿಂತಲೂ ಯಾವುದಾದರೂ ಲಸಿಕೆ ಪಡೆಯುವುದು ಅತ್ಯುತ್ತಮ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಕೃತ, ವೈದ್ಯಕೀಯ ಕ್ಷೇತ್ರದಲ್ಲಿ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಚರ್ಚೆಗಳಾಚೆಗೆ ಪರಿಣಾಮಕಾರಿತ್ವಕ್ಕಿಂತ, ಲಸಿಕೆ ಪಡೆಯದೇ ಇರುವುದಕ್ಕಿಂತಲೂ ಯಾವುದಾದರೂ ಲಸಿಕೆ ಪಡೆಯುವುದು ಒಳಿತು ಎನ್ನುತ್ತಿದ್ದಾರೆ ವೈದ್ಯರು.

ಭಾರತದ ಅಧ್ಯಯನದ ಪ್ರಕಾರ, ಈ ಎರಡು ಲಸಿಕೆಯ ಪರಿಣಾಮಕಾರಿತ್ವ ಒಂದೇ ರೀತಿಯಲ್ಲಿದ್ದರೂ ಕೋವಿಶೀಲ್ಡ್ ಗಿಂತಲೂ ಕೋವ್ಯಾಕ್ಸಿನ್ ಉತ್ತಮವಾಗಿದೆ.

ಹಲವು ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳುತ್ತಿರುವವರು ಹೆಚ್ಚಾಗಿ ಕೋವಿಶೀಲ್ಡ್ ನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಇಂಟರ್ನಲ್ ಮೆಡಿಸಿನ್ ಮತ್ತು ಡಯಾಬಿಟಾಲಜಿ, ಸಕ್ರ ವರ್ಲ್ಡ್ ಹಾಸ್ಪಿಟಲ್ ನ ಡಾ. ಸುಬ್ರತಾ ದಾಸ್.

"ಲಸಿಕೆಗಳು ಕಾರ್ಯನಿರ್ವಹಣೆಯಲ್ಲಿ ವಿವಿಧ ವಿಧಾನಗಳನ್ನು ಒಳಗೊಂಡಿದ್ದರೂ ಅವುಗಳ ಅಂತಿಮ ಗುರಿ ಮಾತ್ರ ರೋಗನಿರೋಧಕತೆ ಹೆಚ್ಚಿಸುವುದಾಗಿದೆ.

ನಿಷ್ಕ್ರಿಯ ವೈರಾಣು, ವೈರಾಣುವಿನ ಆರ್ ಎನ್ಎ ಸೇರಿದಂತೆ ವೈರಾಣುವಿನ ಭಾಗವೊಂದರಿಂದ ಲಸಿಕೆಯನ್ನು ತಯಾರಿಸಲಾಗಿರುತ್ತದೆ. ಫೈಜರ್ ಲಸಿಕೆ -15 ಡಿಗ್ರಿಯಿಂದ -18 ಡಿಗ್ರಿ ಸೆಲ್ಸಿಯಸ್ ನಲ್ಲಿಡಬೇಕಾದ್ದರಿಂದ ಭಾರತದಲ್ಲಿ ಫೈಜರ್ ಲಸಿಕೆಯನ್ನು ಶೇಖರಿಸುವುದು, ಸಂಗ್ರಹಿಸುವುದು ಕಷ್ಟದ ಕೆಲಸ. ಇನ್ನು ರಷ್ಯಾದ ಅಧ್ಯಯನದ ಪ್ರಕಾರ ಸ್ಪುಟ್ನಿಕ್ ಲಸಿಕೆ ಶೇ.90 ರಷ್ಟು ಪರಿಣಾಮಕಾರಿತ್ವವವನ್ನು ಹೊಂದಿದೆ" ಎಂದು ಡಾ.ಸುಬ್ರತಾ ದಾಸ್ ಹೇಳಿದ್ದಾರೆ.

"ರಕ್ತ ಹೆಪ್ಪುಗಟ್ಟುವ ಸಮಸ್ಯೆ (ಥ್ರೊಂಬೊಸಿಸ್) ಇರುವವರು, ಸ್ಟ್ರೋಕ್, ಹೃದಯ ಸಮಸ್ಯೆ ಇರುವವರು ಕೋವಿಶೀಲ್ಡೇತರ ಲಸಿಕೆಯನ್ನು ಪಡೆಯುವುದು ಸೂಕ್ತವಾಗಿದೆ. ಲಸಿಕೆ ಪಡೆದ ನಂತರ ಪ್ರತಿಕಾಯಗಳ ಪರಿಶೀಲನೆ ನಡೆಸಲಾಗಿಲ್ಲ. ಕೆಲವೊಂದು ಲಸಿಕೆಗಳು ಟಿ-ಸೆಲ್ ಇಮ್ಯುನಿಟಿ (ರೋಗನಿರೋಧಕತೆಯ ಪ್ರತಿಕ್ರಿಯೆಯ ದೀರ್ಘಾವಧಿ ಮೆಮೊರಿ)ಯನ್ನು ಉತ್ಪಾದಿಸುತ್ತವೆ. 

ಲಸಿಕೆ ಸಂಸ್ಥೆಗಳು ಕೊರೋನಾದ ಹೊಸ ತಳಿಗಳ ವಿರುದ್ಧವೂ ಈಗಿರುವ ಲಸಿಕೆಗಳು ಪರಿಣಾಮಕಾರಿ ಎಂದು ಹೇಳಿದರೂ ಕೊರೋನಾ ಹೊಸ ತಳಿಗಳ ಬಗ್ಗೆ ಅಧ್ಯಯನ ಸೀಮಿತವಾಗಿದೆ. ಈ ವಿಷಯದಲ್ಲಿ ರಿಯಲ್ ವರ್ಲ್ಡ್ ಡೇಟಾ ಇನ್ನೂ ಅಲಭ್ಯವಾಗಿವೆ. ಹೆಚ್ಚಿನ ಅಧ್ಯಯನಕ್ಕೆ ಸಮಯ ಬೇಕು" ಎನ್ನುತ್ತಾರೆ ಡಾ.ದಾಸ್ 

ಪರಿಣಾಮಕಾರಿತ್ವದಲ್ಲಿ ಲಸಿಕೆಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ರೋಗದ ತೀವ್ರತೆ, ಸಾವಿನ ಪ್ರಮಾಣ, ಆಸ್ಪತ್ರೆಗೆ ದಾಖಲಾಗುವುದನ್ನು ಪರಿಗಣಿಸಿದರೆ ಎರಡು ಡೋಸ್ ಗಳ ನಂತರವೇ ಲಸಿಕೆ ಪರಿಣಾಮಕಾರಿಯಾಗಿರುತ್ತದೆ. ಒಂದು ಡೋಸ್ ತೆಗೆದುಕೊಂಡವರಿಗೆ ಸೋಂಕು ಹರಡಿದರೂ ಕಡಿಮೆ ಆಕ್ಸಿಜನ್ ಪೂರೈಕೆ, ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈಜ್ಞಾನಿಕ ಮಂಡಳಿ ಮತ್ತು ಅಧ್ಯಕ್ಷ-ಜೆರಿಯಾಟ್ರಿಕ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ, ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ತಂಡದ ಸದಸ್ಯ ಡಾ. ಅನೂಪ್ ಅಮರ್ ನಾಥ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com