ಲೋಕಸಭೆ ಮಾದರಿಯಲ್ಲಿ ವಿಧಾನಸಭೆ ಕಾರ್ಯಕಲಾಪ ಚಿತ್ರೀಕರಿಸಿ ನೇರ ಪ್ರಸಾರ

ಕರ್ನಾಟಕ ವಿಧಾನಸಭೆಯ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ಪ್ರಾರಂಭವಾಗಲಿದ್ದು, ಅಧಿವೇಶನದ ಕಾರ್ಯಕಲಾಪಗಳನ್ನು ಲೋಕಸಭೆಯ ಮಾದರಿಯಲ್ಲಿ ಚಿತ್ರೀಕರಿಸಿ ನೇರ ಪ್ರಸಾರ
ವಿಧಾನಸಭೆ
ವಿಧಾನಸಭೆ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ಪ್ರಾರಂಭವಾಗಲಿದ್ದು, ಅಧಿವೇಶನದ ಕಾರ್ಯಕಲಾಪಗಳನ್ನು ಲೋಕಸಭೆಯ ಮಾದರಿಯಲ್ಲಿ ಚಿತ್ರೀಕರಿಸಿ ನೇರ ಪ್ರಸಾರ ಮಾಡಲು ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು ಇತರೆ ಖಾಸಗಿ ಚಾನೆಲ್ ಗಳಿಗೆ ಸ್ಯಾಟಲೈಟ್ ಮೂಲಕ ಸಂಪರ್ಕವನ್ನು ಒದಗಿಸುವ ಕಾರ್ಯವನ್ನು ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಹಾಗೂ ಅದೇ ರೀತಿ ಸದನದ ಕಾರ್ಯಕಲಾಪಗಳ ಛಾಯಾಚಿತ್ರಗಳನ್ನು ತೆಗೆದು ಮುದ್ರಣ ಮಾಧ್ಯಮದವರಿಗೆ ಒದಗಿಸುವ ಕಾರ್ಯವನ್ನು ವಾರ್ತಾ ಇಲಾಖೆಯವರಿಗೆ ವಹಿಸಲಾಗಿದೆ.

ಬೆಂಗಳೂರು ದೂರದರ್ಶನ ಕೇಂದ್ರದವರು ಚಿತ್ರೀಕರಿಸಿದ ವಿಧಾನಸಭೆಯ ಕಾರ್ಯಕಲಾಪಗಳ ಔಟ್ ಪುಟ್ ಅನ್ನು ಖಾಸಗಿ ಸುದ್ದಿ ವಾಹಿನಿಯವರು ಈ ಲಿಂಕ್ ಅಡಿಯಲ್ಲಿ ಪಡೆಯಬಹುದಾಗಿದೆ.

ಖಾಸಗಿ ಸುದ್ದಿ ವಾಹಿನಿಗಳು ಲಿಂಕ್ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆ ಕುರಿತು ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಹಾಯ/ಸಹಕಾರದ ಅವಶ್ಯವಿದ್ದಲ್ಲಿ ಬೆಂಗಳೂರು, ದೂರದರ್ಶನ ಕೇಂದ್ರದ ನಿರ್ದೇಶಕರು (ಇಂಜಿನಿಯರಿಂಗ್), ಆರ್. ವೆಂಕಟೇಶ್ ಮೊಬೈಲ್ ಸಂಖ್ಯೆ: ೯೪೪೪೩೨೯೫೬೫ ಹಾಗೂ ಸಹಾಯಕ ನಿರ್ದೇಶಕರು (ಇಂಜಿನಿಯರಿಂಗ್), ಎ.ವಿ.ಎಸ್. ಸೆಲ್ವರಾಜ್, ಮೊಬೈಲ್ ಸಂಖ್ಯೆ: ೯೮೮೬೦೭೮೯೨೫ ಇವರನ್ನು ಸಂಪರ್ಕಿಸಬಹುದಾಗಿದೆ.

ಸದನದ ಕಾರ್ಯಕಲಾಪಗಳನ್ನು ವರದಿ ಮಾಡುವ ವರದಿಗಾರರಿಗೆ ಮಾತ್ರ ಈ ಬಾರಿಯೂ ಸಹ ಸಭಾಂಗಣದ ಎರಡನೇ ಮಹಡಿಯಲ್ಲಿರುವ ಪತ್ರಕರ್ತರ ಗ್ಯಾಲರಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ, ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮೆರಾಮೆನ್ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೆ ವಿಧಾನಸಭೆಯ ಸಭಾಂಗಣದೊಳಗೆ /ಎರಡನೇ ಮಹಡಿಯ ಪತ್ರಕರ್ತರ ಗ್ಯಾಲರಿಗೆ ಪ್ರವೇಶಾಕಾಶ ಇರುವುದಿಲ್ಲ.

ವರದಿಗಾರರು ಸದನದ ಒಳಗೆ ಮೊಬೈಲ್ ದೂರವಾಣಿ, ಟ್ಯಾಬ್ ಇತ್ಯಾದಿಗಳನ್ನು ಕೊಂಡೊಯ್ಯಬಾರದು. ಎಲ್ಲಾ ಮುದ್ರಣ ಮಾಧ್ಯಮದವರು ಮತ್ತು ಸುದ್ದಿವಾಹಿನಿಯವರು ಸಹಕರಿಸಬೇಕೆಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ನಿರ್ದೇಶಕರು (ಐಟಿ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com