ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸುತ್ತಿದ್ದ ಆರು ಮಂದಿ ಬಂಧನ

 ರೈಸ್ ಪುಲ್ಲಿಂಗ್  ಹೆಸರಿನಲ್ಲಿ ಉಪಕರಣಗಳನ್ನು ಮಾರಾಟ ಮಾಡಿ ಹಣ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚಿಸುತ್ತಿದ್ದ ಗ್ಯಾಂಗ್ ವೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈಸ್ ಪುಲ್ಲಿಂಗ್  ಹೆಸರಿನಲ್ಲಿ ಉಪಕರಣಗಳನ್ನು ಮಾರಾಟ ಮಾಡಿ ಹಣ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚಿಸುತ್ತಿದ್ದ ಗ್ಯಾಂಗ್ ವೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಶೇಖ್ ನೂರ್ ಅಹಮದ್ (61), ಜರೀನಾ ಅಹಮದ್ ಹಾಗೂ ಬೆಂಗಳೂರಿನ ರಾಘವೇಂದ್ರ ಪ್ರಸಾದ್, ನಯೀಂವುಲ್ಲಾ, ಮುದಾಸೀರ್ ಅಹಮದ್ ಹಾಗೂ ಫರೀದಾ ಬಂಧಿತ ಆರೋಪಿಗಳು.

ಶೇಖ್ ಪತ್ನಿ ಜರೀನಾ, ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ವೊಂದರಲ್ಲಿ ಕಳೆದ 2 ತಿಂಗಳಿನಿಂದ ರೂಂ ಬುಕ್ ಮಾಡಿಕೊಂಡು ಸಭೆಗಳನ್ನು ನಡೆಸಿ, ರೈಸ್ ಪುಲ್ಲಿಂಗ್ ಉಪಕರಣಗಳಿದ್ದು, ಅವುಗಳನ್ನು ಮಾರಾಟ ಮಾಡಿದರೆ ಕೋಟ್ಯಾಂತರ ರೂ ಹಣಗಳಿಸಬಹುದು ಎಂದು ಆಮಿಷವೊಡ್ಡುತ್ತಿದ್ದಳು. ನಂತರ ಬಂದ ಹಣದಲ್ಲಿ ತಮಗೂ ಕೂಡ ಹೆಚ್ಚಿನ ಹಣ ನೀಡುವುದಾಗಿ ಬೆಂಗಳೂರಿನ ನಾಲ್ವರು ಆರೋಪಿಗಳು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅವರನ್ನು ಪ್ರೇರೆಪಿಸುತ್ತಿದ್ದರು. 

ಬಳಿಕ ಅಕ್ರಮವಾಗಿ ಸಾಮಾಜಿಕ ಜಾಲತಾಣದಲ್ಲಿ ರೈಸ್ ಪುಲ್ಲಿಂಗ್ ಉಪಕರಣಗಳ ವಿಡಿಯೋ, ಚಿತ್ರಗಳನ್ನು ತೋರಿಸಿ, ಸಾರ್ವಜನಿಕರಿಂದ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದರು. ಈ ಕುರಿತು  ದೂರು ದಾಖಲಾದ ಹಿನ್ನೆಲೆಯಲ್ಲಿ  ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com