ಸಿದ್ದರಾಮಯ್ಯನವರೇ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ- ನಟ ಚೇತನ್
ಕಾಂಗ್ರೆಸ್, ಬಿಜೆಪಿ ಮತ್ತು ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದ ನಟ ಚೇತನ್ ಇದೀಗ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ ಎಂದಿದ್ದಾರೆ.
Published: 10th September 2021 05:04 PM | Last Updated: 10th September 2021 05:04 PM | A+A A-

ಸಿದ್ದರಾಮಯ್ಯ, ಚೇತನ್ ಕುಮಾರ್
ಬೆಂಗಳೂರು: ಕಾಂಗ್ರೆಸ್, ಬಿಜೆಪಿ ಮತ್ತು ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದ ನಟ ಚೇತನ್ ಇದೀಗ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಮ್ಯೂನಿಸ್ಟ್ ಗಳಾದ ಭಗತ್ ಸಿಂಗ್ ಅವರ ಜೀವನನ್ನು ಒತ್ತೆ ಇಟ್ಟರು, ವಿಮೋಚನೆಯ ನಾಯಕರಾದ ಅಂಬೇಡ್ಕರ್ ಮತ್ತು ಪೆರಿಯಾರ್ ಹೋರಾಡಿದರು, ಬೋಸ್ ಹಿಂದೂ ಮುಸ್ಲಿಂ ಏಕತೆಯನ್ನು ಉಳಿಸಿಕೊಂಡರು ಮತ್ತು ಸಮಾಜವಾದಿಗಳಾದ ಲೋಹಿಯಾ ಅವರು ಕೂಡಾ ಹೋರಾಡಿದ್ದರು ಎಂದು ಹೇಳಿದ್ದಾರೆ.
ಸಂಘ ಪರಿವಾರ ಯಾವುದರಲ್ಲೂ ಭಾಗವಹಿಸಲಿಲ್ಲ ಮತ್ತು ಕಾಂಗ್ರೆಸ್ ಎಲ್ಲಾ ಲಾಭಗಳನ್ನು ದೋಚಿಕೊಂಡಿತು.ಸಿದ್ದರಾಮಯ್ಯನವರೇ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದಿಲ್ಲ ಎಂದು ಚೇತನ್ ತಿಳಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) September 10, 2021