
ಐಸ್ ಕ್ಯೂಬ್ ಪಬ್
ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ರೇಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ.
ಆರ್ಜೆ ಮೇಘಾ ಮತ್ತು ಆಕೆಯ ಸ್ನೇಹಿತರಾದ ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಎಂಬುವವರು ಭಾನುವಾರ ರಾತ್ರಿ ಐಸ್ ಕ್ಯೂ ಪಬ್ಗೆ ತೆರಳಿದ್ದರು. ಈ ವೇಳೆ ಪ್ಲೇಟ್ನಲ್ಲಿ ಸಾಸ್ ಹಾಕಿದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕ್ಕೇರಿದ್ದು ಕುಡಿದ ನಶೆಯಲ್ಲಿ ಬಾಟಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ.
ಗಲಾಟೆಯಲ್ಲಿ ಪ್ರವೀಣ್ ಸೇರಿ ಆರ್ ಜೆ ಮೇಘಾ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.
ಘಟನೆ ಸಮಯದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಒದಗಿಸುವಂತೆ ಪಬ್ ಮಾಲೀಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.