ಕರ್ನಾಟಕದಲ್ಲಿ ಸತತ ಮೂರು ದಿನಗಳಿಂದ ಕೊರೋನಾ ಹೊಸ ಕೇಸು ಸಾವಿರಕ್ಕಿಂತ ಕಡಿಮೆ!

ಸತತ ಮೂರು ದಿನಗಳಿಂದ ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ ಕೊರೋನಾ ಹೊಸ ಕೇಸು ವರದಿಯಾಗಿದೆ. ನಿನ್ನೆ ಭಾನುವಾರ ರಾಜ್ಯದಲ್ಲಿ 803 ಹೊಸ ಪ್ರಕರಣಗಳು ವರದಿಯಾಗಿ ಪಾಸಿಟಿವ್ ದರ ಶೇಕಡಾ 6.55 ರಿಂದ ಶೇಕಡಾ 6.53ಕ್ಕೆ ಇಳಿದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸತತ ಮೂರು ದಿನಗಳಿಂದ ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ ಕೊರೋನಾ ಹೊಸ ಕೇಸು ವರದಿಯಾಗಿದೆ. ನಿನ್ನೆ ಭಾನುವಾರ ರಾಜ್ಯದಲ್ಲಿ 803 ಹೊಸ ಪ್ರಕರಣಗಳು ವರದಿಯಾಗಿ ಪಾಸಿಟಿವ್ ದರ ಶೇಕಡಾ 6.55 ರಿಂದ ಶೇಕಡಾ 6.53ಕ್ಕೆ ಇಳಿದಿದೆ. ರಾಜ್ಯದಲ್ಲಿ ಇದುವರೆಗೆ ದಾಖಲಾದ ಒಟ್ಟು ಕೊರೋನಾ ಪ್ರಕರಣಗಳು 29 ಲಕ್ಷದ 61 ಸಾವಿರದ 735.

921 ಮಂದಿ ನಿನ್ನೆ ಬಿಡುಗಡೆ ಹೊಂದಿ ಚೇತರಿಸಿಕೊಂಡವರ ದರ ಶೇಕಡಾ 98.16 ರಿಂದ ಶೇಕಡಾ 98.17ರಷ್ಟಿದೆ. 17 ಸಾವು ಸಂಭವಿಸಿದ್ದು ಒಟ್ಟಾರೆ ಇದುವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 37 ಸಾವಿರದ 504 ಆಗಿದೆ. ಮೃತಪಟ್ಟವರ ಪ್ರಮಾಣ ಶೇಕಡಾ 1.26ರಷ್ಟಿದೆ. ಸಕ್ರಿಯ ಪ್ರಕರಣಗಳು 16 ಸಾವಿರದ 672 ರಿಂದ 16 ಸಾವಿರದ 656ಕ್ಕೆ ಇಳಿಕೆಯಾಗಿದೆ. 

ಕಳೆದ ಶನಿವಾರ ರಾಜ್ಯದಲ್ಲಿ 801 ಕೇಸು ವರದಿಯಾದರೆ ಶುಕ್ರವಾರ 967 ಪ್ರಕರಣಗಳು ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com