ಅಮಾನತುಗೊಂಡಿದ್ದ ಸಾರಿಗೆ ನೌಕರರನ್ನು ವಾಪಸ್ ಪಡೆಯಲು ನಿರ್ಧಾರ

ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡು ಅಮಾನತು, ವಜಾ ಹಾಗೂ ವರ್ಗಾವಣೆ ಒಳಗಾಗಿದ್ದ ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು.
ಬಿ.ಶ್ರೀರಾಮುುಲು
ಬಿ.ಶ್ರೀರಾಮುುಲು

ಬೆಂಗಳೂರು: ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡು ಅಮಾನತು, ವಜಾ ಹಾಗೂ ವರ್ಗಾವಣೆ ಒಳಗಾಗಿದ್ದ ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು.

ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾರಿಗೆ ಸಚಿವ ಬಿ. ಶ್ರೀರಾಮುಲು ಅಧಿಕಾರಿಗಳ ಸಭೆ ಕರೆದಿದ್ದರು, ಸಾರಿಗೆ ಮುಷ್ಕರದ ವೇಳೆ ನಾಲ್ಕು ಸಾರಿಗೆ ನಿಗಮಗಳ ಪೈಕಿ ಸುಮಾರು ಎರಡು ಸಾವಿರಕ್ಕೂ ಅಧಿಕ ನೌಕರರನ್ನು ಅಮಾನತು ಮಾಡಲಾಗಿತ್ತು.

ಈ ವಿಷಯವು ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂದು ಅಧಿಕಾರಿಗಳು ಶ್ರೀರಾಮುಲುಗೆ ಮಾಹಿತಿ ನೀಡಿದರು. ಎಲ್ಲಾ ವಿವರಗಳನ್ನು ಸಲ್ಲಿಸಲು ಸಚಿವರು ನಮ್ಮನ್ನು ಕೇಳಿದರು, ಈ ಸಂಬಂಧ ಸಚಿವರು ಸರ್ಕಾರದ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ನಿರ್ಧಾರವನ್ನು ಘೋಷಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ಸಚಿವ ಶ್ರೀರಾಮುಲು ಅವರು ಸಾರಿಗೆ ನೌಕರರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಮಾನತುಗೊಂಡಿರುವ ಸಿಬ್ಬಂದಿ ತಿಳಿಸಿದ್ದಾರೆ. ತಮ್ಮನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳುವಂತೆ ಅಮಾನತುಗೊಂಡಿದ್ದ ನೌಕರರು ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದರು. ಸೇವೆಯಿಂದ ತೆಗೆದುಹಾಕಲ್ಪಟ್ಟ ತರಬೇತುದಾರರ ವಿವರಗಳನ್ನು ಸಚಿವರು ತೆಗೆದುಕೊಂಡಿದ್ದಾರೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com